ದಸರಾದಿಂದಲೇ ‘Cauvery Aarti’ ಆರಂಭ…..!

ಬೆಂಗಳೂರು:

    ಗಂಗಾರತಿ ಮಾದರಿಯಲ್ಲೇ ‘ಕಾವೇರಿ ಆರತಿ’ ಕಾರ್ಯಕ್ರಮ ಮಾಡುವುದಾಗಿ ಘೋಷಿಸಿದ್ದ ಕರ್ನಾಟಕ ಸರ್ಕಾರ ಅದನ್ನು ಈ ಬಾರಿಯ ದಸರಾ ಉತ್ಸವದಿಂದಲೇ ಆರಂಭಿಸಲಾಗುವುದು ಎಂದು ಹೇಳಿದೆ.

   ಕಾವೇರಿ ಆರತಿಯ ಪ್ರಾಯೋಗಿಕ ಕಾರ್ಯಕ್ರಮ ಇದೇ ಅಕ್ಟೋಬರ್ 3ರಂದು ಶ್ರೀರಂಗಪಟ್ಟಣದಲ್ಲಿ ಆರಂಭವಾಗಲಿದೆ. ಈ ದಸರಾ ಸಂದರ್ಭದಲ್ಲೇ ಕಾವೇರಿ ಆರತಿಯನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಪ್ರಾಯೋಗಿಕವಾಗಿ ಅ. 3 ರಿಂದ 5 ದಿನ ಕಾವೇರಿ ಆರತಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ತಿಳಿಸಿದ್ದಾರೆ.

  7 ಮಂದಿ ಅರ್ಚಕರು ಸೇರಿ 20 ಜನರ ತಂಡ ವಾರದಲ್ಲಿ ಎರಡು ದಿನ ಕಾವೇರಿ ಆರತಿ ನಡೆಸಿಕೊಡಲಿದೆ. ಕಾವೇರಿ ಆರತಿಯಲ್ಲಿ ಸಪ್ತ ಋುಷಿಗಳನ್ನು ಪೂಜಿಸಿ, ಗಣಪತಿ ಪ್ರಾರ್ಥನೆ, ಕಾವೇರಿ ಪೂಜೆ, ಕಾವೇರಿ ಮಹಾಆರತಿ ನಡೆಸಲಾಗುವುದು ಎಂದು ಖ್ಯಾತ ಅದ್ವೈತ ವಾಚಸ್ಪತಿ ಡಾ.ಭಾನುಪ್ರಕಾಶ್‌ ಶರ್ಮ ಅವರು ಹೇಳಿದ್ದಾರೆ.

   ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಬಳಿ ಇರುವ ಕಾವೇರಿ ನದಿ ಸ್ನಾನಘಟ್ಟ ಸ್ಥಳವನ್ನು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಅದ್ವೈತ ವಾಚಸ್ಪತಿ ಡಾ.ಭಾನುಪ್ರಕಾಶ್‌ ಶರ್ಮ ಜತೆಗೂಡಿ ಈಗಾಗಲೇ ಸ್ಥಳ ಪರಿಶೀಲಿಸಿದ್ದಾರೆ. ಮುಂದಿನ ಸ್ಥಳ ಗುರುತಿಸುವವರೆಗೆ ಅದೇ ಸ್ಥಳದಲ್ಲಿ ವಾರದಲ್ಲಿ ಎರಡು ದಿನ ಶ್ರೀರಂಗಪಟ್ಟಣ ದಸರಾ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಅ.3 ರಿಂದಲೇ 5 ದಿನಗಳ ಕಾಲ ಶ್ರೀರಂಗನಾಥಸ್ವಾಮಿ ದೇವಾಲಯ ಸ್ನಾನಘಟ್ಟದಲ್ಲಿ ವೇದಿಕೆ ಸಿದ್ಧಪಡಿಸಿ ಕಾವೇರಿ ಆರತಿ ನಡೆಸುವಂತೆ ಸೂಚಿಸಿದ್ದಾರೆ.

Recent Articles

spot_img

Related Stories

Share via
Copy link