ಸಿಗರೇಟ್ ಮತ್ತು ಬೀಡಿ ತುಂಡುಗಳ ವೈಜ್ಞಾನಿಕ ವಿಲೇವಾರಿ : ಬಿಬಿಎಂಪಿ ಮಹತ್ವದ ಕ್ರಮ

ಬೆಂಗಳೂರು

    ಸಿಗರೇಟ್ ಮತ್ತು ಬೀಡಿ ತುಂಡುಗಳ ವೈಜ್ಞಾನಿಕ ವಿಲೇವಾರಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು 2022ರ ನವೆಂಬರ್‌ನಲ್ಲೇ ಮಾರ್ಗಸೂಚಿ ರೂಪಿಸಿ ಬಿಡುಗಡೆ ಮಾಡಿತ್ತು. ಆದರೆ, ಬೆಂಗಳೂರು ನಗರದಲ್ಲಿ ಮಾರ್ಗಸೂಚಿ ಇದುವರೆಗೆ ಜಾರಿಯಾಗಿಲ್ಲ. ಹೀಗಾಗಿ ಇದೀಗ ಬಿಬಿಎಂಪಿ ಮಹತ್ವದ ಕ್ರಮಕ್ಕೆ ಮುಂದಾಗಿದೆ. ನಗರದಾದ್ಯಂತ ಸಿಗರೇಟ್ ಹಾಗೂ ಬೀಡಿ ತುಂಡುಗಳನ್ನು ಬಿಸಾಡುವುದಕ್ಕೆಂದೇ ಪ್ರತ್ಯೇಕ ಬುಟ್ಟಿಗಳನ್ನು (ಬಿನ್​ಗಳನ್ನು) ಅಳವಡಿಸಲು ಮುಂದಾಗಿದೆ.

 
   ಯೋಜನೆಯ ಭಾಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪ್ರಮುಖ ಸಿಗರೇಟ್ ತಯಾರಕ ‘ಐಟಿಸಿ’ ಸಹಯೋಗದೊಂದಿಗೆ ಸಿಗರೇಟ್ ತುಂಡುಗಳ ಸಂಗ್ರಹಕ್ಕಾಗಿ ನಗರದ ಹಾಟ್ ಸ್ಪಾಟ್‌ಗಳಲ್ಲಿ ಪ್ರತ್ಯೇಕ ಡಸ್ಟ್‌ಬಿನ್‌ಗಳನ್ನು ಇರಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ನಂತರ ಸಿಗರೇಟ್ ಹಾಗೂ ಬೀಡಿಯ ತುಂಡುಗಳನ್ನು ತ್ಯಾಜ್ಯದಿಂದ ಇಂಧನ ಉತ್ಪಾದನೆ ಅಥವಾ ಸಹ-ಸಂಸ್ಕರಣೆಯಂತಹ ವಿಧಾನಗಳ ಮೂಲಕ ಮರುಬಳಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

   ಸಿಗರೇಟ್ ಹಾಗೂ ಬೀಡಿಯ ತುಂಡುಗಳನ್ನು ಮರುಬಳಕೆ ಮಾಡುವ ಜವಾಬ್ದಾರಿ ತಯಾರಕರ ಮೇಲಿದೆ. ಇದಕ್ಕೆ ತಯಾರಕ ಕಂಪನಿಗಳು ಈ ಹಿಂದಿನ ಸಭೆಯಲ್ಲಿ ಸಮ್ಮತಿ ಸೂಚಿಸಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. 

  ಸಿಗರೇಟ್ ತುಂಡುಗಳ ವೈಜ್ಞಾನಿಕ ಸಂಗ್ರಹಣೆ ವಿಳಂಬವಾಗಿರುವುದು ನಿಜ ಎಂದು ಬಿಬಿಎಂಪಿ ಒಪ್ಪಿಕೊಂಡಿದೆ. ಇದಕ್ಕೆ ಸಿಗರೇಟ್ ತಯಾರಕರನ್ನು ದೂಷಿಸಿದೆ. ಬೆಂಗಳೂರಿನ ಎರಡು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ತುಂಡುಗಳ ವಿಲೇವಾರಿಗಾಗಿ ಮೈಕ್ರೋ ಯೋಜನೆ ಕೈಗೊಳ್ಳುವಂತೆ ಐಟಿಸಿಗೆ ಪತ್ರವನ್ನೂ ಬಿಬಿಎಂಪಿ ಬರೆದಿದೆ.ಈ ಹಿಂದಿನ ಸಭೆಯಲ್ಲಿ ಸಮ್ಮತಿಸಿದಂತೆ ಸಿಗರೇಟ್ ತುಂಡುಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಯೋಜನೆ ಆರಂಭಿಸಲು ಐಟಿಸಿ ವಿಫಲವಾದಲ್ಲಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ಪತ್ರದಲ್ಲಿ ಬಿಬಿಎಂಪಿ ಎಚ್ಚರಿಕೆಯನ್ನೂ ನೀಡಿದೆ.

 

Recent Articles

spot_img

Related Stories

Share via
Copy link