ದಾವಣಗೆರೆಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳ ಬಂಧನ…..!

ದಾವಣಗೆರೆ

   ಹಿಂದುಗಳ ಹೆಸರಿಟ್ಟುಕೊಂಡು ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ದಾವಣಗೆಯಲ್ಲಿ ವಾಸ್ತವ್ಯ ಹೂಡಿದ್ದ ಪಾಕಿಸ್ತಾನದ ಮಹಿಳೆ ನಕಲಿ ದಾಖಲೆ ಸೃಷ್ಟಿಸಿ ಭಾರತದಲ್ಲಿ ನೆಲೆಯಾಗಿರುವುದು ಪೊಲೀಸರಿಗೆ ತಿಳಿದುಬಂದಿದೆ. ಪಾಕ್ ಮೂಲದ ಮಹಿಳೆ ಫಾತಿಮಾ ದಾವಣಗೆರೆಯ ಅಲ್ತಾಫ್ ಜೊತೆ ವಿವಾಹವಾಗಿದ್ದಳು.

  ಉಳಿದಂತೆ, ಮೊಹಮ್ಮದ್ ಹನೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ಕೂಡ ಪಾಕಿಸ್ತಾನದವನಾಗಿದ್ದಾನೆ. ಹನೀಫ್ ಸೊಸೆ, ಮಗಳು, ಅಳಿಯನನ್ನೂ ಬಂಧಿಸಲಾಗಿದೆ. ರಶೀದ್ ಅಲಿ ಸಿದ್ದಿಕಿ ಎಂಬಾತನ ಮಾವ ಮೊಹಮ್ಮದ್ ಹನೀಫ್ ಬೆಂಗಳೂರಿನಲ್ಲಿ ಸೆರೆ ಸಿಕ್ಕಿರುವ ಪ್ರಮುಖ ಆರೋಪಿಯಾಗಿದ್ದಾನೆ.

  ಸಿದ್ದಿಕಿ ಮೊಹಮ್ಮದ್ ಯಾಸಿನ್ (ಮಗ), ಜೈನಾಬಿ ನೂರ್ (ಸೊಸೆ), ಫಾತಿಮಾ (ಮಗಳು), ಅಲ್ತಾಫ್ ಬಂಧಿತ ಆರೋಪಿಗಳಾಗಿದ್ದಾರೆ. ಅಲ್ತಾಫ್ ಪತ್ನಿ ಫಾತಿಮಾ ಪಾಕ್ ಪ್ರಜೆಯಾಗಿದ್ದಾಳೆ. 

  ಬಂಧಿತರ ಪೈಕಿ ರಶೀದ್ ಅಲಿ ಸಿದ್ದಿಕಿ ಶಂಕರ್ ಶರ್ಮಾ (48) ಎಂದು ಹೆಸರಿಟ್ಟುಕೊಂಡಿದ್ದರೆ, ಆಯೇಷಾ ಹನೀಫ್ @ ಆಶಾ ಶರ್ಮಾ (38), ಮೊಹಮ್ಮದ್ ಹನೀಫ್ @ ರಾಮ್ ಬಾಬಾ ಶರ್ಮಾ (73) ರುಬೀನಾ (61) ಎಂದು ಹೆಸರುಗಳನ್ನಿಟ್ಟುಕೊಂಡಿದ್ದರು. 

  ಏತನ್ಮಧ್ಯೆ, ಬೆಂಗಳೂರಿನ ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳು ಬಂಧನವಾಗಿರುವ ಸಂಬಂಧ ಹೆಚ್ಚಿನ ತನಿಖೆಗಾಗಿ ಪೊಲೀಸರ 4 ತಂಡಗಳ ರಚನೆ ಮಾಡಲಾಗಿದೆ. ಡಿವೈಎಸ್​ಪಿ ಮೋಹನ್​ಕುಮಾರ್ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಲಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್ ಕೃಷ್ಣಕುಮಾರ್, ಜಿಗಣಿ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಮಂಜುನಾಥ್, ಅತ್ತಿಬೆಲೆ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ರಾಘವೇಂದ್ರ, ಸರ್ಜಾಪುರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್​ಗಳಾದ ನವೀನ್​, ಕುಮಾರ್ ಅವರ ತಂಡ ರಚನೆ ಮಾಡಲಾಗಿದೆ. 

  ಈ ತನಿಖಾ ತಂಡಗಳು ದೆಹಲಿ, ಚೆನ್ನೈ ಬೆಳಗಾವಿ, ಮುಂಬೈ ಸೇರಿ ಹಲವೆಡೆ ತೆರಳಿ ಮಾಹಿತಿ ಕಲೆ ಹಾಕಲಿವೆ. ಪಾಕಿಸ್ತಾನ ಪ್ರಜೆಗಳಿಗೆ ನಕಲಿ ಆಧಾರ್​ ಮಾಡಿಕೊಟ್ಟವರು ಯಾರು? ಭಾರತೀಯ ದಾಖಲಾತಿಗಳನ್ನು ಮಾಡಿಕೊಟ್ಟವರನ್ನು ತಲಾಶ್ ಮಾಡಲಿದೆ.

Recent Articles

spot_img

Related Stories

Share via
Copy link