ಪ್ರಧಾನಿ ಮೋದಿ ಮುಡಾ ವಿಚಾರ ಪ್ರಸ್ತಾಪಿಸುವ ಅವಶ್ಯಕತೆ ಏನು : ಪರಂ ಪ್ರಶ್ನೆ

ಹುಬ್ಬಳ್ಳಿ:

    ಮುಡಾ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪದೇ ಪದ ರಾಜಕಾರಣ ಮಾಡುತ್ತಿವೆ.ಪ್ರಕರಣ ದಾಖಲಾಗಿದೆ. ತನಿಖೆ ಮಾಡಲು ಅವಕಾಶ ಮಾಡಿಕೊಡಬೇಕು. ಅದನ್ನು ಬಿಟ್ಟು ನಿತ್ಯ ರಾಜಕಾರಣ ಮಾಡೋದು ಸರಿಯಲ್ಲ. ಪ್ರಧಾನಿ ಮೋದಿ ಅಂಥವರು ರಾಜಕಾರಣ ಮಾಡ್ತಿದ್ದಾರೆ ಎಂದರೆ ವಿಪರ್ಯಾಸ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

   ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಪ್ರಧಾನಿ ಮೋದಿ ಮುಡಾ ವಿಚಾರ ಪ್ರಸ್ತಾಪಿಸುವ ಅವಶ್ಯಕತೆ ಏನು ಎಂದು ಪ್ರಶ್ನಿಸಿದರು.

    ನಾನು ರಾಜೀನಾಮೆ ಕೊಡಲು ಸಿದ್ದ. ಸಿಎಂ ರಾಜೀನಾಮೆ ಕೊಡ್ತಾರಾ ಎಂಬ ಆರ್. ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಆರ್. ಅಶೋಕ್ ಮೊದಲು ರಾಜೀನಾಮೆ ಕೊಡಲಿ. ನಂತರ ಬೇಕಿದ್ದರೆ ಅದರ ಬಗ್ಗೆ ವಿಚಾರ ಮಾಡೋಣ ಎಂದರು. ಅಲ್ಲದೆ, ಸಚಿವ ಸತೀಶ ಜಾರಕಿಹೊಳಿ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜಾರಕಿಹೊಳಿ ಅವರ ಮಗಳು ಸಂಸದೆ. ಮಗಳಿಗೆ ಕ್ವಾಟ್ರಸ್ ಬೇಕು ಎಂಬ ಕಾರಣಕ್ಕೆ ದೆಹಲಿಗೆ ಭೇಟಿ ನೀಡಿದ್ದರು. ಜಮ್ಮು ಕಾಶ್ಮೀರ ಚುನಾವಣಾ ರ‌್ಯಾಲಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಕುಸಿದು ಬಿದ್ದಿದ್ದರು. ಹೀಗಾಗಿ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ ಎಂದರು.

   ಯಾರ ಮೇಲೂ ನಾವು ಸೇಡಿನ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿ ಯವರೇ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಪ್ರತಿ ಪಕ್ಷದವರು ಸರ್ಕಾರಕ್ಕೆ ಸಲಹೆ, ಸೂಚನೆ ಕೊಡಬೇಕು. ಅದನ್ನು ಮೀರಿ ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದರು ಗುಡುಗಿದರು ಬೆಂಗಳೂರಿನಲ್ಲಿ ಪಾಕಿಸ್ತಾನದವರು ಅಕ್ರಮವಾಗಿ ನೆಲೆಸಿದ್ದನ್ನು ಪತ್ತೆ ಹಚ್ಚಿ, ಬಂಧಿಸಿರುವುದು ಕರ್ನಾಟಕದ ಪೋಲಿಸರು. ಕೇಂದ್ರ ಎಜೆನ್ಸಿಗಳು ಪಾಕಿಸ್ತಾನದ ವರ ಇರುವಿಕೆ ಪತ್ತೆ ಹಚ್ಚುವಲ್ಲಿ ವಿಫಲವಾಗಿವೆ ಎಂದು ಕಿಡಿ ಕಾರಿದರು.

 

Recent Articles

spot_img

Related Stories

Share via
Copy link