ಕೆ ಐ ಏ ಡಿ ಬಿ ನಿವೇಶನ ವಾಪಸ್ ನೀಡಿದ ಖರ್ಗೆ ಕುಟುಂಬ

ಬೆಂಗಳೂರು:

ಕೆಐಎಡಿಬಿ ಹಂಚಿಕೆ ಮಾಡಿದ್ದ ಭೂಮಿಯನ್ನು ದ್ಧಾರ್ಥ್ ವಿಹಾರ ಟ್ರಸ್ಟ್‌ ವಾಪಸ್ ನೀಡಲು ತೀರ್ಮಾನಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತಂತೆ ಸಚಿವ ಪ್ರಿಯಾಂಕ್​​ ಖರ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ರಾಹುಲ್ ಖರ್ಗೆ ಅವರು ಕೆಐಎಡಿಬಿಗೆ ಪತ್ರ ಬರೆದಿದ್ದಾರೆ. ಈ ವಿಚಾರ ನಮಗೂ ತಿಳಿದರಲಿಲ್ಲ, ಸೆಪ್ಟೆಂಬರ್ 20 ರಂದು ಸೈಟ್ ವಾಪಸ್ ನೀಡಿದ್ದಾರೆ. ಕೆಐಎಡಿಬಿ ಸಿಇಒಗೆ ಪತ್ರ ಬರೆದು ನಿವೇಶನ ವಾಪಸ್ ಕೊಡೋದಾಗಿ ಹೇಳಿದ್ದಾರೆ. ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ 5 ಎಕರೆ ಸಿಎ ನಿವೇಶನ ಹಂಚಿಕೆ ಕಾನೂನು ಪ್ರಕಾರವೇ ಆಗಿದೆ. ಆದರೂ ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ.

ಹೀಗಾಗಿ ಇದನ್ನ ವಾಪಸ್ ನೀಡುವದಾಗಿ ತಿಳಿಸಿದ್ದಾರೆ, ಟ್ರಸ್ಟ್ ಲಾಭ ಮಾಡಲು ಇಲ್ಲ. ನಿಯಮದ ಪ್ರಕಾರವಾಗಿಯೇ ಹಂಚಿಕೆ ಆಗಿದೆ, ಏಕೆಂದರೆ ಸಿಎ ಸೈಟ್ ಕೊಡೋವಾಗ ಯಾವುದೇ ರಿಯಾಯ್ತಿ ಇರೋದಿಲ್ಲ. ಹಂಚಿಕೆ ಆಗಿರೋ ನಿವೇಶನ 10 ವರ್ಷಕ್ಕೆ ಅಲರ್ಟ್ ಆಗಿದೆ. ಅದಕ್ಕೆ ಲೆಟರ್ ಕೊಟ್ಟಿದ್ದಾರೆ. ನಮ್ಮ ಉದ್ದೇಶ ಸ್ಕಿಲ್ ಡೆವಲಪ್ಮೆಂಟ್, ಎಜುಕೇಶನ್ ನೀಡುವ ಉದ್ದೇಶಕ್ಕೆ ಇತ್ತು. ಆದರೆ ಬಿಜೆಪಿ ಅವರು ಅನಗತ್ಯವಾಗಿ ರಾಜಕೀಯ ಮಾಡಿದ್ದಾರೆ. ವೈಯಕ್ತಿಕ ರಾಜಕೀಯದಿಂದ ಬೇಸರ ಆಗಿದೆ.

ಕಲುಷಿತ ವಾತಾವರಣದಲ್ಲಿ ಟ್ರಸ್ಟ್ ಮುಂದುವರೆಸೋಕೆ ಸಾಧ್ಯವಿಲ್ಲ. ಹಾಗಾಗಿ ನಿವೇಶನ ವಾಪಸ್‌ ಪಡೆಯಬೇಕು ಅಂತ ರಾಹುಲ್‌ ಖರ್ಗೆ ಕೆಐಎಡಿಬಿಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ವೈಯಕ್ತಿಕವಾಗಿ ರಾಜಕೀಯ ಆರೋಪದಿಂದ ಬೇಸರವಾಗಿದೆ. ಹೀಗಾಗಿ ಸೈಟ್ ಬೇಡ ಎಂದಿದ್ದಾರೆ. ಸೆ.22ರಂದು ರಾಹುಲ್‌ ಖರ್ಗೆ ಪತ್ರ ಬರೆದಿದ್ದರು, ಸೆ.27ಕ್ಕೆ ಕೆಐಎಡಿಬಿ ನಿವೇಶನ ಹಿಂಪಡೆಯಲು ಒಪ್ಪಿಗೆ ನೀಡಿದೆ ಎಂದರು.

Recent Articles

spot_img

Related Stories

Share via
Copy link