ಪಿ. ಜಿ. ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಸುದ್ಧಿ ಗೋಷ್ಠಿ

ಬೆಂಗಳೂರು : 

    ಪಿಜಿ ಮಾಲೀಕರ ಜಾಗೃತಿ ಸಮಾವೇಶ 2024” ವನ್ನು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟ ದಿಂದ ದಿನಾಂಕ 16.10.24 ಬುಧವಾರ ಬೆಳಗ್ಗೆ 10.30 ಗಂಟೆಗೆ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲಿ( ಹೊಸಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರ ) ಅಯೋಜಿಸಲಾಗಿದೆ ಎಂದು ಪಿ. ಜಿ. ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ..

    ಈ ಕಾರ್ಯಕ್ರಮವು ನಗರದ ಪಿಜಿ ಮಾಲೀಕರುಗಳಲ್ಲಿ ಜಾಗೃತಿ ಹಾಗೂ ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆಯ ಮಾರ್ಗಸೂಚಿಗಳ ಪಾಲನೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿದೆ.ಈ ಕಾರ್ಯಕ್ರಮಕ್ಕೆ ಬಿಬಿಎಂಪಿಯ ವಿಶೇಷ ಆಯುಕ್ತರಾದ ಶ್ರೀ ಸುರಳ್ಳರ್ ವಿಕಾಸ್ ಕಿಶೋರ್ ಅವರು ಆಗಮಿಸಲಿದ್ದು, ವಿಶೇಷವಾಗಿ ಪಿಜಿಗಳ ಮಾರ್ಗಸೂಚಿ ಅನುಸರಿಸುವ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.ವಿಶೇಷ ಆಹ್ವಾನಿತರಾಗಿ ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ಅವರು ಕಾನೂನು ಬದ್ಧ ವಾಗಿ ಪಿಜಿಗಳು ನಡೆಸುವ ಬಗ್ಗೆ ಮಾರ್ಗದರ್ಶನ ಕೊಡಲಿದ್ದಾರೆ. ಬಿಬಿಎಂಪಿಯ ಮಾಜಿ ಮಹಾಪೌರರಾದ ಶ್ರೀಮತಿ ಗಂಗಾಂಬಿಕಾ ಮಲ್ಲಿಕಾರ್ಜುನ್ ಅವರು ಉಪಸ್ಥಿತರಿದ್ದು ಇರುತ್ತಾರೆ

   ಬಿಬಿಎಂಪಿಯ ಎಂಟು ವಲಯಗಳ ಆರೋಗ್ಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೂ ಎರಡುವರೆ ಸಾವಿರಕ್ಕೂ ಹೆಚ್ಚು ನಗರದ ಪಿಜಿ ಮಾಲೀಕರು ಹಾಗೂ ಪಿಜಿ ವ್ಯವಸ್ಥಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಲಿದ್ದಾರೆ.ಈ ಸಂದರ್ಭದಲ್ಲಿ ಪಿಜಿ ಮಾಲೀಕರ ಕ್ಷಮಾಭಿವೃದ್ಧಿ ಸಂಘಗಳ ಒಕ್ಕೂಟವು ಪಿಜಿ ಮಾಲೀಕರ ಸಾಧಕ ಬಾಧಕಗಳ ಬಗ್ಗೆ ಮಾನ್ಯ ಆಯುಕ್ತರಲ್ಲಿ ಮನವಿ ಸಲ್ಲಿಸಲಿದ್ದು, ಪ್ರಸಕ್ತವಾಗಿ ನಗರ ಪ್ರದೇಶದಲ್ಲಿ ಸಾವಿರಾರು ಪಿಜಿಗಳಿದ್ದು,ಲಕ್ಷಾಂತರ ಜನರು ಪಿಜಿಗಳಲ್ಲಿ ವಾಸವಾಗಿದ್ದಾರೆ ಹಾಗೆ ತಮ್ಮ ಬದುಕನ್ನು ಕಟ್ಟಿಕೊಳಲು ತಮ್ಮ ಸಾಧನೆಯನ್ನು ಮಾಡಲು ದೂರದ ಊರುಗಳಿಂದ ಆಗಮಿಸಿ ತಮ್ಮ ಓದು ಹಾಗೂ ಕೆಲಸ ಹರಸಿ ಬಂದಿರುವವರಿಗೆ ಪಿಜಿಗಳು ಸಹಕಾರಿಯಾಗಿವೆ.ಹಾಗೆ ಮುಂಬರುವ ದಿನಗಳಲ್ಲಿ ಕಾನೂನು ಬದ್ಧವಾಗಿ ಹಾಗೂ ಬಿಬಿಎಂಪಿಯ ಹಾಗೂ ಪೊಲೀಸ್ ಇಲಾಖೆಯ ಮಾರ್ಗಸೂಚಿ ನಿಯಮದಡಿಯಲ್ಲಿ ನಡೆಸುವಂತಹ ಪಿಜಿಗಳ ಉದ್ಯಮಕ್ಕೆ ಅನುಕೂಲಕರ ರೀತಿಯಲ್ಲಿ ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಲಾಗುತ್ತದೆ.

   ಪಿಜಿ ಒಂದು ಸಾಮಾಜಿಕ ಸೇವೆ ಮತ್ತು ಸಾವಿರಾರು ಜನ ಪಿಜಿ ನಡೆಸುವವರು ತಮ್ಮ ಜೀವನೋಪಾಯಕ್ಕಾಗಿ ಸಾಮಾಜಿಕ ಸೇವೆಯಂತಿರುವ ಈ ಪಿಜಿ ಉದ್ಯೋಗವನ್ನು ಪ್ರಸಕ್ತ ಕೆಲಮಾಲೀಕರು ಆಯ್ಕೆ ಮಾಡಿಕೊಂಡಿರುತ್ತಾರೆ.

   ಹಾಗೆ ನೂರಾರು ಕನಸು ಕಟ್ಟಿಕೊಂಡು ಬಂದಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಪುರುಷ ಹಾಗೂ ಮಹಿಳೆಯರಿಗೆ ಈ ಪಿಜಿಗಳಿಂದ ಅನೇಕ ಲಾಭದಾಯಕ ಹಾಗೂ ಉಪಯೋಗ ಆಗುತ್ತಿರುವುದನ್ನು ಗಮನಕ್ಕೆ ತಂದು ಕನಿಷ್ಠ ಮಾನದಂಡವನ್ನು ಹಾಗೂ ವ್ಯವಸ್ಥಿತವಾಗಿ ಪಿಜಿ ನಡೆಸುವವರಿಗೆ ಪ್ರೋತ್ಸಾಹ ನೀಡುವಂತೆ ಒತ್ತಾಯಿಸಲಾಗುತ್ತದೆ.

   ಸುದ್ಧಿಗೋಷ್ಠಿಯಲ್ಲಿ ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಅರುಣ್ ಕುಮಾರ್ ಡಿ ಟಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಬಸವನಗುಡಿ ವಲಯದ ಮನೀಶ್, ವೈಟ್ ಫೀಲ್ಡ್ ವಲಯದ ಭಾಸ್ಕ‌ರ್ ರೆಡ್ಡಿ,ಜಯನಗರ ವಲಯದ ಅಂಜಯ್ಯ ರೆಡ್ಡಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap