ಮಂಡ್ಯ : ಮಾತು ಉಳಿಸಿಕೊಂಡ ಕುಮಾರಸ್ವಾಮಿ …!

ಉತ್ತರ ಕನ್ನಡ

     ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತ   ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್​ ಮಾಲೀಕ ಜಗನಾಥ್​ ಅವರ ಪುತ್ರಿ ಎನ್.​ ಕೃತಿ ಅವರಿಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ   ಬಿಹೆಚ್​ಇಎಲ್​​ನಲ್ಲಿ   ಉದ್ಯೋಗ ಕಲ್ಪಿಸಿದ್ದಾರೆ. ಮಂಡ್ಯದ ಸರ್​ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳವನ್ನು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಅವರು ಕೃತಿಕಾ ಅವರಿಗೆ ನೇಮಕಾತಿ ಪತ್ರ ನೀಡಿದರು.

ವಿಶೇಷಚೇತನ ಯುವಕ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಸಂಪೂರ್ಣ ಅಂದ ಯುವಕ ಅಜಯ್ ಕುಮಾರ್ ಅವರು ಅರೋಹಿತ ಗ್ಲೋಬಲ್ ಬಿಪಿಒ ಕಂಪನಿಯಲ್ಲಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಜಯ್ ಕುಮಾರ್ ಅವರಿಗೆ ನೇಮಕಾತಿ ‌ಪತ್ರ ವಿತರಿಸಲಾಗಿದೆ.

   ಉದ್ಯೋಗ ‌ಮೇಳದ ಮುಖಾಂತರ ಆಟೋ ಡೈವರ್​ನ ಇಬ್ಬರು ಮಕ್ಕಳಿಗೆ ಕೆಲಸ ಸಿಕ್ಕಿದೆ. ಮಂಡ್ಯ ಮೂಲದ ನವ್ಯ ಮತ್ತು ನಂದಿತಾ ಎಂಬುವರಿಗೆ ಟಾಟಾ ಮೋಟರ್ಸ್​​​‌ನಲ್ಲಿ ಉದ್ಯೋಗ ಪಡೆದಿದ್ದಾರೆ. ಶುಕ್ರವಾರ ಆರಂಭವಾದ ಉದ್ಯೋಗ ಮೇಳಕ್ಕೆ ಇಂದು (ಅ.19) ತೆರೆ ಬೀಳಲಿದೆ. ಮಂಡ್ಯ ಟು ಇಂಡಿಯಾ ಘೋಷದೊಂದಿದೆ ನಡೆದ ಉದ್ಯೋಗ ಮೇಳದಲ್ಲಿ ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಭಾಗಿಯಾಗಿದ್ದರು. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಮಂಡ್ಯದ ಸರ್​ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

   ಇಂದಿನ ಸಮಾರೋಪ ಸಮಾರಂಭಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಉದ್ಯೋಗ ಮೇಳದ ಮುಖಾಂತ ಕೆಲಸ ಪಡೆದವರಿಗೆ, ಸಮಾರೋಪ ಸಮಾರಂಭದಲ್ಲಿ ಹೆಚ್​ಡಿ ಕುಮಾರಸ್ವಾಮಿ ಅವರು ನೇಮಕಾತಿ ಪತ್ರ ವಿತರಿಸಿದ್ದಾರೆ.

ಉದ್ಯೋಗ ಮೇಳದಲ್ಲಿ ಮೆಕಾನ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಐಎಲ್), ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್‌ಎಂಡಿಸಿ), ಲಾಯ್ಡ್ಸ್ ಮೆಟಲ್ಸ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್), ಮತ್ತು ಜಿಂದಾಲ್ ಸ್ಟೀಲ್ ಸೇರಿದಂತೆ ಪ್ರಮುಖ ಕಂಪನಿಗಳು ನೇರ ನೇಮಕಾತಿ ನಡೆಸಿದವು.

Recent Articles

spot_img

Related Stories

Share via
Copy link
Powered by Social Snap