ಕಲಬುರಗಿ:
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆಯೆನ್ನಲಾದ ಅಕ್ರಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸುನೀಲ್ ವೈ. ವಲ್ಯಾಪುರೆ ಅವರ ಕಲಬುರಗಿಯ ಮನೆ ಮೇಲೆ ಸಿಐಡಿ ತಂಡ ಶನಿವಾರ ದಾಳಿ ನಡೆಸಿದೆ.
ನಗರದ ಸಂತೋಷ ಕಾಲೋನಿಯಲ್ಲಿರುವ ವಲ್ಯಾಪುರೆ ಅವರ ನಿವಾಸದ ಮೇಲೆ ಸಿಐಡಿ ಪೊಲೀಸರ ತಂಡ ದಾಳಿಗೈದು ಶೋಧ ಕಾರ್ಯ ನಡೆಸಿತು.2022ರಲ್ಲಿ ಭೋವಿ ನಿಗಮದಲ್ಲಿ ಅಕ್ರಮ ನಡೆದಿದ್ದು, ವಲ್ಯಾಪುರೆ ಅವರು ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ನಿಗಮದ 12 ಕೋಟಿ ರೂ. ಹಣ ಅವ್ಯವಹಾರ ನಡೆಸಿ ತಮ್ಮ ಒಡೆತನದ ಸೋಮನಾಥೇಶ್ವರ ಎಂಟರ್‌ಪ್ರೈಸಸ್’ಗೆ ವರ್ಗಾವಣೆ ಮಾಡಿ ಲೂಟಿ ಮಾಡಿ ವಂಚಿಸಿದ್ದಾರೆಂಬ ಆರೋಪವಿದ್ದು, ಈ ಕುರಿತು ಕಲಬುರಗಿ ಜಿಲ್ಲೆಯ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
2022ರಲ್ಲಿ ಸುನೀಲ್ ವಲ್ಯಾಪುರೆ ಮತ್ತು ಪುತ್ರ ವಿನಯ್ ವಲ್ಯಾಪುರೆ ನಿಗಮದ 12 ಕೋಟಿ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪದ ಮೇಲೆ ಕೋರ್ಟ್ ಸರ್ಚ್ ವಾರೆಂಟ್ ಹಿನ್ನೆಲೆ ಸಿಐಡಿ ಅಧಿಕಾರಿಗಳು ಶನಿವಾರ ಕಲಬುರಗಿ ನಗರದ ಸಂತೋಷ್ ಕಾಲೋನಿಯಲ್ಲಿನ ವಲ್ಯಾಪುರೆ ಮತ್ತು ಪುತ್ರ ವಿನಯ್ ವಲ್ಯಾಪುರೆ ಮನೆಗೆ ಆಗಮಿಸಿದ ಸಿಐಡಿ ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ.