ಹಿಮಾಲಯದಲ್ಲಿ ಪತ್ತೆಯಾಯ್ತು ಹೊಸ ಹಾವಿನ ಪ್ರಭೇಧ ಪತ್ತೆ

ಹಿಮಾಲಯ

   ಹಾವಿನ ಹೊಸ ಪ್ರಭೇದವೊಂದು ಪತ್ತೆಯಾಗಿದ್ದು, ಅದಕ್ಕೆ ಲಿಯೊನಾರ್ಡೊ ಡಿಕ್ಯಾಪ್ರಿಯೋ ಎಂದು ನಾಮಕರಣ ಮಾಡಲಾಗಿದೆ. ಹಿಮಾಲಯದಲ್ಲಿ ಸಂಶೋಧಕರ ತಂಡವು ಆ ಹಾವಿಗೆ ಹಾಲಿವುಡ್ ನಟ, ನಿರ್ಮಾಪಕ ಪ್ರಾಣಿಗಳ  ಸಂರಕ್ಷಣೆಗೆ ನೀಡಿದ ಕೊಡುಗೆಗೆ ಗೌರವಾರ್ಥವಾಗಿ ಅವರ ಹೆಸರಿಡಲಾಗಿದೆ.

    ಜರ್ಮನಿ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಸಂಶೋಧಕರ ತಂಡವು 2020 ರಲ್ಲಿ ಭಾರತದ ಸರೀಸೃಪಗಳ ಮೇಲಿನ ಯೋಜನೆಯ ಭಾಗವಾಗಿ ಹುಡುಕುತ್ತಿರುವಾಗ ಕಂಡುಬಂದಿತ್ತು. ಸೈಂಟಿಫಿಕ್ ರಿಪೋರ್ಟ್ಸ್, ಪೀರ್-ರಿವ್ಯೂಡ್ ಜರ್ನಲ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಹಾವನ್ನು ಆಂಗ್ಯುಲಸ್ ಎಂಬ ಹೊಸ ಜಾತಿಯ ಅಡಿಯಲ್ಲಿ ವರ್ಗೀಕರಿಸಿದ್ದಾರೆ ಹಾಗೆಂದರೆ ಸಣ್ಣ ಹಾವು ಎಂದರ್ಥ.

   ಸಂಶೋಧಕರ ತಂಡವು ಪಶ್ಚಿಮ ಹಿಮಾಲಯದ ಪರ್ವತ ಪ್ರದೇಶಗಳಿಗೆ ಭೇಟಿ ನೀಡಿದಾಗ ಮಣ್ಣಿನ ರಸ್ತೆಯಲ್ಲಿ ಕೆಲವು ಕಂದು ಬಣ್ಣದ ಹಾವುಗಳನ್ನು ಕಂಡಿದ್ದಾರೆ. ಆದರೆ ಆಶ್ಚರ್ಯವೇನೆಂದರೆ ಈ ಹಾವನ್ನು ಹಿಡಿಯುವವರೆಗೂ ಅದು ಚಲನರಹಿತವಾಗಿಯೇ ಇತ್ತು ಮತ್ತು ಕಚ್ಚುವ ಯಾವ ಪ್ರಯತ್ನವನ್ನೂ ಮಾಡಿರಲಿಲ್ಲ. 

  ಹಿಮಾಚಲ ಪ್ರದೇಶದ ಚಂಬಾ ಮತ್ತು ಕುಲು ಪ್ರದೇಶಗಳಲ್ಲಿ, ಉತ್ತರಾಖಂಡದ ನೈನಿತಾಲ್ ಮತ್ತು ನೇಪಾಳದ ಚಿತ್ವಾನ್ ರಾಷ್ಟ್ರೀಯ ಉದ್ಯಾನವನದಲ್ಲಿಯೂ ಹೊಸ ಪ್ರಭೇದಗಳು ಕಂಡುಬಂದಿವೆ ಎಂದು ಜೋರಾಂ ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಸದಸ್ಯ ಎಚ್‌ಟಿ ಲಾಲ್ರೆಮ್‌ಸಂಗ ಹೇಳಿದರು.

Recent Articles

spot_img

Related Stories

Share via
Copy link