ಬೆಳಗಾವಿ :
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಶ್ರೀ ಲಕ್ಷ್ಮೀ ಕಲ್ಚರಲ್ ಮತ್ತು ಸೋಷಿಯಲ್ ವೆಲ್ಪೇರ್ ಅಸೋಸಿಯೇಷನ್ ಬೆಳಗಾವಿ ಆಶ್ರಯದಲ್ಲಿ ಅ.27 ರ ಸಂಜೆ 4 ಗಂಟೆಯಿಂದ ನಗರದ ಲೋಟಸ್ ಗಣಪತಿ ಮಂದಿರ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಮೂಹ ನೃತ್ಯ, ಜಾನಪದ ಗೀತೆ, ಭಾವಗೀತೆ, ವಚನ ಗಾಯನ, ನಾಡಗೀತೆ, ಕನ್ನಡ ಚಿತ್ರಗೀತೆಗಳು, ಭರತನಾಟ್ಯ ಸೇರಿದಂತೆ ನಾನಾ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.