ಚಾಮರಾಜನಗರ: ಬುಡಕಟ್ಟು ಕುಟುಂಬಗಳಿಗೆ ಶೀಘ್ರದಲ್ಲೇ ವಿದ್ಯುತ್ ಸಂಪರ್ಕ

ಚಾಮರಾಜನಗರ

     ಚಾಮರಾಜನಗರ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ವಾಸವಾಗಿರುವ 1,800ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳು ಶೀಘ್ರದಲ್ಲೇ ಶಾಶ್ವತ​ ವಿದ್ಯುತ್ ಸಂಪರ್ಕ​​ ಹೊಂದಲಿವೆ. ಈ ಕುಟುಂಬಗಳಿಗೆ ವಿದ್ಯುತ್​ ಸಂಪರ್ಕ ಕಲ್ಪಿಸಲು 42 ಕೋಟಿ ರೂ. ವೆಚ್ಚದಲ್ಲಿ ಭೂಗತ (ಯುಜಿ) ಕೇಬಲ್​ ಅಳವಡಿಕೆ ಕಾಮಗಾರಿ ಆರಂಭವಾಗಲಿದೆ.

ಕಾಡಿನೊಳಗೆ ವಿದ್ಯುತ್ ಕಂಬಗಳು ಬಂದರೆ ವಿದ್ಯುತ್​ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರಾಣಿಗಳು ಮತ್ತು ಅರಣ್ಯಕ್ಕೆ ಹಾನಿಯಾಗಬಹುದು ಎಂದು ಪ್ರಸ್ತಾವ ತಿರಸ್ಕರಿಸಾಗಿದೆ. ಈ ಕಾರಣದಿಂದ ಜಿಲ್ಲಾಡಳಿತ ಮತ್ತು ಸೆಸ್ಕ್​ ಯುಜಿ ಕೇಬಲ್​ ಅಳವಡಿಸಲು ನಿರ್ಧರಿಸಿದೆ.

    ಈ ಹಿಂದೆ ಸೋಲಾರ್ ಉಪಕರಣಗಳ ಮೂಲಕ ವಿದ್ಯುತ್​​ ಸಂಪರ್ಕ ನೀಡುವ ಪ್ರಯತ್ನಗಳು ನಡೆದಿದ್ದವು. ಆದರೆ ಅವು ನಿರ್ವಹಣೆಯು ಕೊರತೆಯಿಂದ ಯಶಸ್ಸು ದೊರೆಯಲಿಲ್ಲ. ಇದೀಗ, ಯುಜಿ ಕೇಬಲ್​ ಅಳವಡಿಕೆಯಿಂದ ವಿದ್ಯುತ್​ ಸಂಪರ್ಕ ದೊರೆತರೆ ಆದಿವಾಸಿಗಳ ಜೀವನಮಟ್ಟ ಸುಧಾರಿಸಲಿದೆ ಎಂದು​ ಚಾಮರಾಜನಗರದ ಉಪ ಆಯುಕ್ತೆ ಶಿಲ್ಪಾ ನಾಗ್ ಹೇಳಿದರು. 

   ಜಿಲ್ಲಾಡಳಿತ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರು (CESC) ಅನುಷ್ಠಾನಕ್ಕೆ ಮುಂದಾಗಿದ್ದು, ಅರಣ್ಯ ಇಲಾಖೆಯಿಂದ ಅನುಮತಿ ಕೋರಿ ಆರು ತಿಂಗಳ ಹಿಂದೆಯೇ ಯೋಜನೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಕಾಮಗಾರಿ ಚುರುಕುಗೊಂಡಿದ್ದು, ಮುಂದಿನ 15 ದಿನಗಳಲ್ಲಿ ಕೇಬಲ್ ಅಳವಡಿಕೆ ಕಾರ್ಯ ಆರಂಭಗೊಂಡು ನಾಲ್ಕು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಶಿಲ್ಪಾ ತಿಳಿಸಿದರು.

   ಸೆಸ್ಕ್​​ ವ್ಯವಸ್ಥಾಪಕ ನಿರ್ದೇಶಕಿ ಜಿ ಶೀಲಾ ಮಾತನಾಡಿ, ಕಂಬಗಳ ಮೂಲಕ ಕೇಬಲ್ ಅಳವಡಿಕೆಗೆ ಅರಣ್ಯ ಇಲಾಖೆ ಅನುಮೋದನೆ ನೀಡಿಲ್ಲ. ಆದ್ದರಿಂದ ವಿದ್ಯುತ್ ಅಪಘಾತಗಳನ್ನು ತಡೆಯಲು ಭೂಗತ ಕೇಬಲ್‌ ಏಕೈಕ ಮಾರ್ಗವಾಗಿದೆ. ಇತ್ತೀಚೆಗೆ, ನಾನು ವಿದ್ಯುತ್ ಸಚಿವಾಲಯದ ಕಾರ್ಯದರ್ಶಿಯನ್ನು ಭೇಟಿ ಮಾಡಿದ್ದೇನೆ, ಅವರು ಈ ಯೋಜನೆಗೆ ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

Recent Articles

spot_img

Related Stories

Share via
Copy link