ತುಮಕೂರು
ಕರ್ನಾಟಕ ಕಾರ್ಯನಿರತ ಪತ್ರಕರ್ತ ರ ಸಂಘದ ರಾಜ್ಯ, ಜಿಲ್ಲಾ ಘಟಕದ ವತಿಯಿಂದ ತುಮಕೂರು ಜಿಲ್ಲಾ ಡಳಿತದ ಸಹಭಾಗಿತ್ವದಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟವನ್ನು ನವೆಂಬರ್ 24ರಂದು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದು ಶುಕ್ರವಾರ ಜರುಗಿದ ಜಿಲ್ಲಾ ರಾಜ್ಯೋತ್ಸವ ವೇದಿಕೆ ಯಲ್ಲಿ ಲಾಂಛನವನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಬಿಡುಗಡೆ ಗೊಳಿಸಿದರು.
ಶಾಸಕರಾದ ಜಿ. ಬಿ. ಜ್ಯೋತಿ ಗಣೇಶ್, ಆರ್. ರಾಜೇಂದ್ರ, ಡಿಸಿ ಶುಭಕಲ್ಯಾಣ್, ಸಿಇಓ ಜಿ. ಪ್ರಭು, ಎಸ್ಪಿ ಕೆ. ವಿ. ಅಶೋಕ್, ಆಯುಕ್ತೆ ಬಿ. ವಿ. ಅಶ್ವಿಜ, ಎಡಿಸಿ ತಿಪ್ಪೇಸ್ವಾಮಿ, ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಧ್ಯಕ್ಷ ಚಿ. ನಿ. ಪುರುಷೋತ್ತಮ್, ರಾಷ್ಟ್ರೀಯ ಮಂಡಳಿ ಸದಸ್ಯರಾದ ಟಿ. ಎನ್. ಮಧುಕರ್, ಡಿ. ಎಂ. ಸತೀಶ್, ಶಾಂತರಾಜು, ಕಾರ್ಯದರ್ಶಿ ಸತೀಶ್ ಹಾರೋಗೆರೆ ಸೇರಿ ಪದಾಧಿಕಾರಿಗಳು ನಿರ್ದೇಶಕ ರುಗಳು ಉಪಸ್ಥಿತರಿದ್ದರು.