ವಿಜಯಪುರ :
ಗ್ಯಾರಂಟಿಗಳನ್ನು ನಕಲುಮಾಡಿ ಮೋದಿ ಕಾ ಗ್ಯಾರಂಟಿ ಹೆಸರಿನಲ್ಲಿ ಮತದಾರರಿಗೆ ಭರವಸೆ ನೀಡುತ್ತಾರೆ! ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಗ್ಯಾರಂಟಿಗಳ ಬಗೆಗೆ ಮೋದಿಯವರು ಟೀಕೆ ಮಾಡುತ್ತಾರೆ! ಆದರೆ ನಮ್ಮದೆ ಗ್ಯಾರಂಟಿಗಳನ್ನು ನಕಲುಮಾಡಿ, ಚುನಾವಣೆ ನಡೆಯುತ್ತಿರುವ ದೇಶದ ಎಲ್ಲ ರಾಜ್ಯಗಳಲ್ಲಿ ಮೋದಿ ಕಾ ಗ್ಯಾರಂಟಿ ಹೆಸರಿನಲ್ಲಿ ಮತದಾರರಿಗೆ ಭರವಸೆ ನೀಡುತ್ತಾರೆ! ಕರ್ನಾಟಕದಲ್ಲಿ ನಮ್ಮ ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಈ ಕುರಿತು ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು ಘೋಷಿಸಿರುವಂತೆ #ನಮ್ಮಸರಕಾರ 5 ವರ್ಷಗಳ ಕಾಲ ಗ್ಯಾರಂಟಿಗಳನ್ನು ಮುಂದುವರೆಸುತ್ತದೆ. ನಮ್ಮ ಗ್ಯಾರಂಟಿಯನ್ನ ಅವರೇ ಕಾಪಿ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಮೈತ್ರಿ ಪಕ್ಷ ಗ್ಯಾರಂಟಿಯನ್ನ ಘೋಷಿಸಿದ್ದಾರೆ ಎಂದರು.
