ಹುಬ್ಬಳ್ಳಿ:
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ಭಾರತ್ ಬ್ರ್ಯಾಂಡ್ ಅಡಿ ನೇರ ಗ್ರಾಹಕರಿಗೆ ಆಹಾರೋತ್ಪನ್ನ ವಿತರಿಸಲು ಕೇಂದ್ರ ಆಹಾರ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ನೀಡಲಿದ್ದಾರೆ.
ಹುಬ್ಬಳ್ಳಿಯ ಮೂರು ಸಾವಿರ ಮಠದ ಶಾಲಾ ಆವರಣದಲ್ಲಿ “ಭಾರತ್ ಬ್ರ್ಯಾಂಡ್” ಆಹಾರ ಉತ್ಪನ್ನಗಳ ವಿತರಣೆಗೆ ಚಾಲನೆ ನೀಡಲಾಗುತ್ತಿದ್ದು, ಜನಸಾಮಾನ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಭಾರತ ಅಕ್ಕಿ, ಭಾರತ್ ಬೇಳೆ, ಭಾರತ್ ಗೋಧಿ ಹಿಟ್ಟು, ಅಕ್ಕಿ ಹಿಟ್ಟು ಹೀಗೆ ಅಗತ್ಯ ಆಹಾರ ಉತ್ಪನ್ನಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮೊಬೈಲ್ ವಾಹನಗಳಲ್ಲಿ ವಿತರಿಸಲಾಗುತ್ತಿದೆ.








