200 ಜನರಿಗೆ ಪಂಗನಾಮ ಹಾಕಿದ ಇನ್ನೂ ಮೀಸೆ ಚಿಗುರದ ಹುಡುಗ!

ರಾಜಸ್ತಾನ

  ಅಜ್ಮೆರ್ನಲ್ಲಿ ಪೊಲೀಸರು 19 ವಯಸ್ಸಿನ ಒಬ್ಬ ಹುಡುಗನನ್ನು ಬಂಧಿಸಿದ್ದಾರೆ. ಈಗಷ್ಟೇ ಕಾಲೇಜು ಮೆಟ್ಟಿಲು ಏರಿದ ಹುಡುಗ ನಕಲಿ ಹೂಡಿಕೆ ಸ್ಕೀಮ್ನಲ್ಲಿ ಸುಮಾರು 200 ಜನರಿಗೆ ಯಾಮಾರಿಸಿ ಒಟ್ಟು 42 ಲಕ್ಷ ರೂಪಾಯಿ ಬಾಚಿಕೊಂಡಿದ್ದಾನೆ. ಸದ್ಯ ಪೊಲೀಸರು ಈತನನ್ನು ಹಿಡಿದು ಕಂಬಿಯ ಹಿಂದೆ ತಳ್ಳಿದ್ದಾರೆ.

  ಆರೋಪಿಯನ್ನು ಖಷೀಫ್ ಮಿರ್ಜಾ ಎಂದು ಗುರುತಿಸಲಾಗಿದೆ. ಈಗಷ್ಟೇ 11ನೇ ತರಗತಿ ಓದುತ್ತಿರುವ ಹುಡುಗ ಸೋಷಿಯಲ್ ಮೀಡಿಯಾದಲ್ಲಿ ನೀವು ಹಣ ಹೂಡಿದರೆ ಹೆಚ್ಚು ಲಾಭ ಮಾಡುತ್ತಿರಿ ಎಂದು ಜನರನ್ನು ನಂಬಿಸಿ ಹಣ ಪೀಕಿದ್ದಾನೆ. ಪೊಲೀಸರು ಹೇಳುವ ಪ್ರಕಾರ ಮಿರ್ಜಾ ಒಬ್ಬ ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಸಾಕಷ್ಟು ಫಾಲೋವರ್ಸ್ಗಳನ್ನು ಹೊಂದಿದ್ದಾನೆ. ಹೀಗಾಗಿ ಜನರನ್ನು ಸರಳವಾಗಿ ಮರಳು ಮಾಡಿದ್ದೇನಂತೆ

   ಅವನು ಸೋಷಿಯಲ್ ಮೀಡಿಯಾ ಬಳಕೆದಾರರಿಗೆ 1 ಲಕ್ಷ 39 ಸಾವಿರ 99 ರೂಪಾಯಿ ಹೂಡಿಕೆ ಮಾಡಿದ್ರೆ, 13 ವಾರಗಳಲ್ಲಿ ಅದು 99 ಲಕ್ಷ 99 ಸಾವಿರ ಆಗಲಿದೆ ಎಂದು ಹೇಳಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದನಂತೆ. ಆರಂಭದಲ್ಲಿ ಕೆಲವರಿಗೆ ಲಾಭ ನೀಡಿದಂತೆ ಮಾಡಿದ ಮಿರ್ಜಾ ಹೆಚ್ಚು ಹೆಚ್ಚು ಜನರನ್ನು ತನ್ನತ್ತ ಬರುವಂತೆ ಮಾಡಿಕೊಂಡಿದ್ದಾನೆ. ಕೊನೆಗೆ 200 ಜನರಿಂದ ಹಣ ವಸೂಲಿ ಮಾಡಿದ ಈತ ಎಸ್ಕೇಪ್ ಆಗಿದ್ದ. ಸದ್ಯ ಅಜ್ಮೆರ್ ಪೊಲೀಸರು ಈತನ ಹೆಡೆಮುರಿ ಕಟ್ಟಿದ್ದು, ಆರೋಪಿಯಿಂದ ಕ್ಯಾಶ್ ಕೌಂಟಿಂಗ್ ಮಷಿನ್, ಮೊಬೈಲ್ಗಳು ಹಾಗೂ ಲ್ಯಾಪ್ಟಾಪ್ ಗಳನ್ನು ವಶಕ್ಕೆ ಪಡೆದಿದ್ದಾರೆ.

Recent Articles

spot_img

Related Stories

Share via
Copy link