ಬೆಂಗಳೂರು
ಬಾಂಬ್ ಇದೆ ಎಂದು ಆಟೋ ಸಮೇತ ಚಾಲಕ ಜಯನಗರ ಪೊಲೀಸ್ ಠಾಣೆಗೆ ಬಂದಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿ ಆಟೋದಲ್ಲಿ ಬ್ಯಾಗ್ ಇಟ್ಟು ಹೋಗಿದ್ದರು. ಬಾಂಬ್ ಸ್ಕ್ವಾಡ್ನಿಂದ ಪರಿಶೀಲನೆ ಮಾಡಿದ್ದಾಗ ಯಾವುದೇ ಸ್ಫೋಟಕ ವಸ್ತು ಪತ್ತೆ ಆಗಿಲ್ಲ.
ಬಾಂಬ್ ಇದೆ ಎಂದು ಆಟೋ ಚಾಲಕ ಜಯನಗರ ಪೊಲೀಸ್ ಠಾಣೆಗೆ ಬರುತ್ತಿದ್ದಂತೆ ತಕ್ಷಣ ಬಿಎಸ್ಎನ್ಎಲ್ ಟೆಲಿಪೋನ್ ಎಕ್ಸ್ಚೇಂಚ್ ಎದುರು ಇರುವ ಆಟದ ಮೈದಾನಕ್ಕೆ ತೆಗೆದುಕೊಂಡು ಬಂದಿದ್ದಾರೆ. ಬಳಿಕ ಬಾಂಬ್ ಸ್ಕ್ವಾಡ್ ಸಿಬ್ಬಂದಿಯಿಂದ ಪರಿಶೀಲನೆ ಮಾಡಿದಾಗ ಆಟೋದ ಹಿಂದಿನ ಸೀಟ್ನಲ್ಲಿ ಎರಡು ಚೀಲಗಳು ಪತ್ತೆ ಆಗಿದೆ. ಬ್ಯಾಗ್ ತೆರೆದು ನೋಡಿದಾಗ ಡ್ರಿಲ್ಲಿಂಗ್ ಮಷಿನ್ ಬಿಡಿ ಭಾಗಗಳು ಪತ್ತೆ ಆಗಿಲ್ಲ. ಯಾವುದೇ ರೀತಿಯ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.
