ದೇಶದ ಹಲವೆಡೆ ಸಿಎನ್​ಜಿ ದರ ಏರಿಕೆ….!

ನವದೆಹಲಿ

   ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಕೇವಲ ಎರಡು ದಿನಗಳ ನಂತರ, ಮುಂಬೈ ಮತ್ತು ಇತರ ಹಲವಾರು ನಗರಗಳಲ್ಲಿ ಸಿಎನ್‌ಜಿ ಬೆಲೆಯನ್ನು ಕೆಜಿಗೆ 2 ರೂ.ಗಳಷ್ಟು ಹೆಚ್ಚಿಸಲಾಗಿದೆ. ಮುಂಬೈ ಸೇರಿದಂತೆ ದೇಶದ ಹಲವೆಡೆ ಸಿಎನ್​ಜಿ ದರ ಏರಿಕೆ ಮಾಡಲಾಗಿದ್ದು, ದೆಹಲಿಗೆ ವಿನಾಯಿತಿ ನೀಡಲಾಗಿದೆ.

   ದೇಶೀಯವಾಗಿ ಕಚ್ಚಾ ನೈಸರ್ಗಿಕ ಅನಿಲದ ಉತ್ಪಾದನೆ ಕಡಿಮೆಗೊಳಿಸಲಾಗುತ್ತಿದ್ದು, ಇದರಿಂದ ಸಿಎನ್ಜಿ ರೀಟೇಲ್ ಬೆಲೆ ಹೆಚ್ಚಳವಾಗಿದೆ. ಸತತ ಎರಡನೇ ತಿಂಗಳಲ್ಲಿ ಕೂಡ ಅಗ್ಗದ ಗ್ಯಾಸ್ ಪೂರೈಕೆ ಕಡಿತಗೊಂಡ ಹಿನ್ನೆಲೆಯಲ್ಲಿ ಸಿಎನ್ ಜಿ ಬೆಲೆ ಏರಿಕೆ ಮಾಡುವಂತೆ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಮತ್ತು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ನ ಪ್ರಸ್ತಾಪವನ್ನು ಕೇಂದ್ರ ಮೊದಲು ತಳ್ಳಿ ಹಾಕಿತ್ತು. ಬೆಂಗಳೂರಿನಲ್ಲಿ ಸಿಎನ್​ಜಿ ದರ ಪ್ರತಿ ಕೆಜಿಗೆ 86.85 ರೂ.ನಷ್ಟಿದೆ.

   ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್ ಮತ್ತು ಇತರ ನಗರಗಳಲ್ಲಿ ಸಿಎನ್‌ಜಿ ಬೆಲೆಯನ್ನು ಹೆಚ್ಚಿಸಲಾಗಿದೆ, ಆದರೆ ದೆಹಲಿಗೆ ಇದರಿಂದ ವಿನಾಯಿತಿ ನೀಡಲಾಗಿದೆ, ಅಲ್ಲಿ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್‌ಜಿ ಬೆಲೆಯನ್ನು ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿದೆ.

   ಗ್ಯಾಸ್ ಬೆಲೆಯಲ್ಲಿ ಹೆಚ್ಚಳವಾದ ನಂತರ, ಈ ನಗರಗಳಲ್ಲಿ ಆಟೋ ದರಗಳು ಮತ್ತು ಟ್ಯಾಕ್ಸಿ ದರಗಳು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಕಾನ್ಪುರ, ಹಮೀರ್‌ಪುರ, ಫತೇಪುರ್, ನೋಯ್ಡಾ, ಘಾಜಿಯಾಬಾದ್, ಗುರ್ಗಾಂವ್, ಕರ್ನಾಲ್, ಕೈತಾಲ್, ಮುಜಾಫರ್‌ನಗರ, ಮೀರತ್, ಶಾಮ್ಲಿ, ಮಹೋಹಾ, ಬಂದಾ, ಅಜ್ಮೀರ್, ಪಾಲಿ ಸೇರಿದಂತೆ ಹಲವು ನಗರಗಳಲ್ಲಿ ಸಿಎನ್‌ಜಿ ಬೆಲೆಯನ್ನು ಹೆಚ್ಚಿಸಲಾಗಿದೆ.
   ಕಾನ್ಪುರ, ಹಮೀರ್‌ಪುರ, ಫತೇಪುರ್‌ನಲ್ಲಿ ಐಜಿಎಲ್ ಸಿಎನ್‌ಜಿ ಬೆಲೆಯನ್ನು ಕೆಜಿಗೆ 4 ರೂ.ಗಳಷ್ಟು ಹೆಚ್ಚಿಸಿದೆ. ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ, ಕರ್ನಾಲ್ ಮತ್ತು ಕೈತಾಲ್‌ನಲ್ಲಿ ಕಂಪನಿಯು ಸಿಎನ್‌ಜಿ ಬೆಲೆಯನ್ನು ಕೆಜಿಗೆ 2 ರೂ. ಇದಲ್ಲದೇ ಮುಜಾಫರ್‌ನಗರ, ಮೀರತ್, ಶಾಮ್ಲಿ, ಮಹೋಬಾ, ಬಂದಾ, ಚಿತ್ರಕೂಟದಲ್ಲಿ ಪ್ರತಿ ಕೆಜಿಗೆ 3 ರೂಪಾಯಿ ಏರಿಕೆಯಾಗಿದೆ. ಇದಲ್ಲದೇ ಇಂದಿನಿಂದ ಅಜ್ಮೀರ್, ಪಾಲಿ ಮತ್ತು ರಾಜ್‌ಸಮಂದ್‌ನಲ್ಲಿ ಸಿಎನ್‌ಜಿ ಪ್ರತಿ ಕೆಜಿಗೆ 1.5 ರೂಪಾಯಿಗಳಷ್ಟು ದುಬಾರಿಯಾಗಿದೆ.

Recent Articles

spot_img

Related Stories

Share via
Copy link