ನಟ ಧನುಶ್-ಐಶ್ವರ್ಯಾ 20 ವರ್ಷದ ದಾಂಪತ್ಯ ಅಂತ್ಯ

ಚೆನ್ನೈ :

    ತಮಿಳಿನ ಸ್ಟಾರ್ ನಟ ಧನುಶ್ ಹಾಗೂ ರಜನೀಕಾಂತ್​ರ ಪುತ್ರಿ ಐಶ್ವರ್ಯಾ ಅವರಿಗೆ ವಿಚ್ಛೇದನ ಮಂಜೂರಾಗಿದೆ. ಎರಡು ವರ್ಷದ ಹಿಂದೆಯೇ ಈ ಜೋಡಿ ತಾವು ದೂರಾಗುತ್ತಿರುವುದಾಗಿ ಹೇಳಿ ವಿಚ್ಛೇದನಕ್ಕೆ ಅರ್ಜಿ ಹಾಕಿಕೊಂಡಿದ್ದರು. ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ನಿನ್ನೆ ಧನುಶ್ ಹಾಗೂ ಐಶ್ವರ್ಯಾ ಅವರಿಗೆ ವಿಚ್ಛೇದನ ಮಂಜೂರಾಗಿದೆ. ಆ ಮೂಲಕ 20 ವರ್ಷಗಳ ಅವರ ದಾಂಪತ್ಯ ಜೀವನ ಅಂತ್ಯವಾಗಿದೆ.

    2004 ರಲ್ಲಿ ಧನುಶ್ ಮತ್ತು ಐಶ್ವರ್ಯಾ ಅವರುಗಳು ವಿವಾಹವಾಗಿದ್ದರು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿದ್ದಾಗಲೇ ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿಯನ್ನು ಪ್ರೀತಿಸಿ ವಿವಾಹವಾಗಿದ್ದರು ಧನುಶ್. ಇವರ ಮದುವೆ ಆಗಿನ ಕಾಲಕ್ಕೆ ಭಾರಿ ಅದ್ಧೂರಿಯಾಗಿ ನಡೆದಿತ್ತು. ಈಗ ಬರೋಬ್ಬರಿ 20 ವರ್ಷದ ಬಳಿಕ ಈ ಜೋಡಿ ವಿಚ್ಛೇದನ ಪಡೆದುಕೊಂಡಿದೆ. ನವೆಂಬರ್ 27 ರಂದು ಅಧಿಕೃತವಾಗಿ ಇವರಿಗೆ ವಿಚ್ಛೇದನ ದೊರೆತಿದೆ.

   2022 ರಲ್ಲಿ ಈ ಜೋಡಿ ತಾವು ಪರಸ್ಪರ ದೂರಾಗುತ್ತಿರುವುದಾಗಿ ಹೇಳಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ರಜನೀಕಾಂತ್​ಗೆ ಅನಾರೋಗ್ಯ ಇದ್ದ ಸಮಯದಲ್ಲಿಯೇ ಈ ಘೋಷನೆ ಬಂದಿತ್ತು. ಮಕ್ಕಳನ್ನು ಒಟ್ಟಿಗೆ ಸಾಕುವುದಾಗಿ ದಂಪತಿಗಳು ಘೋಷಿಸಿದ್ದರು. ಆದರೆ ಅದಾದ ಬಳಿಕ ಮತ್ತೆ ಈ ಜೋಡಿ ಒಂದಾಗಲಿದೆ. ರಜನೀಕಾಂತ್ ಸಂಧಾನ ನಡೆಸಿದ್ದು ಈ ಜೋಡಿ ಮತ್ತೆ ಒಟ್ಟಿಗೆ ಬಾಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈಗ ಅದು ಸುಳ್ಳಾಗಿದೆ. ನವೆಂಬರ್ 21 ರಂದು ಕೊನೆಯ ವಿಚಾರಣೆಗಾಗಿ ಚೆನ್ನೈನ ಫ್ಯಾಮಿಲಿ ಕೋರ್ಟ್​ಗೆ ಈ ಜೋಡಿ ಹಾಜರಾಗಿತ್ತು. ನವೆಂಬರ್ 27 ರಂದು ನ್ಯಾಯಾಲಯವು ಈ ದಂಪತಿಗಳಗೆ ವಿಚ್ಛೇದನ ನೀಡಿದೆ. 

   ಧನುಶ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಐಶ್ವರ್ಯಾ ಸಹ ಸಿನಿಮಾ ನಿರ್ದೇಶಕಿಯಾಗಿದ್ದು, ಧನುಶ್ ನಟನೆಯ ‘3’, ಇತ್ತೀಚೆಗೆ ಬಿಡುಗಡೆ ಆದ ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಇನ್ನೂ ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸ್ಟುಡಿಯೋ ಸೇರಿದಂತೆ ಕೆಲವು ಉದ್ಯಮಗಳನ್ನು ಸಹ ನಿಭಾಯಿಸುತ್ತಿದ್ದಾರೆ.

   ಧನುಶ್​ ಹೆಸರು ಇತ್ತೀಚೆಗೆ ಸಿನಿಮಾಯೇತರ ಕಾರಣಕ್ಕೆ ಹೆಚ್ಚು ಸುದ್ದಿಗೆ ಬರುತ್ತಿದೆ. ನಯನತಾರಾ, ಧನುಶ್ ವಿರುದ್ಧ ಸುದೀರ್ಘ ಪತ್ರ ಬರೆದಿದ್ದು, ಧನುಶ್ ಅನ್ನು ನೀಚ ಇತ್ಯಾದಿ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಇದೀಗ ಧನುಶ್, ನಯನತಾರಾ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಧನುಶ್ ನಿರ್ಮಾಣ ಮಾಡಿದ್ದ ‘ನಾನುಂ ರೌಡಿ ದಾ’ ಸಿನಿಮಾದ ಕೆಲವು ದೃಶ್ಯಗಳನ್ನು ಡಾಕ್ಯುಮೆಂಟರಿಯಲ್ಲಿ ಬಳಸಿದ್ದಕ್ಕೆ ಧನುಶ್, ನಯನತಾರಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರ ನಡುವೆ ಈಗ ಧನುಶ್​ಗೆ ವಿಚ್ಛೇದನ ಸಹ ದೊರೆತಿದೆ.

Recent Articles

spot_img

Related Stories

Share via
Copy link