ಇಂಜಿನಿಯರಿಂಗ್ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಯ ಮರಣ ದಂಡನೆ ಶಿಕ್ಷೆಗೆ ಸುಪ್ರೀಂ ತಡೆ

ನವದೆಹಲಿ:

     ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣದ 30 ವರ್ಷದ ಆರೋಪಿಯ ಜೀವಾವಧಿ ಶಿಕ್ಷೆಗೆ ಸುಪ್ರೀಂಕೋರ್ಟ್ ಮಂಗಳವಾರ ತಡೆ ನೀಡಿದೆ.

   ವಿಚಾರಣಾ ನ್ಯಾಯಾಲಯದ ಅನುವಾದದ ಪ್ರತಿ ಹಾಗೂ ಹೈಕೋರ್ಟ್ ದಾಖಲೆಗಳನ್ನು ಕೇಳಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಪಂಕಜ್ ಮಿಥಾಲ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠ,. ಮರಣ ದಂಡನೆ ಶಿಕ್ಷೆಗೆ ತಡೆ ನೀಡಿತು. ಅಲ್ಲದೇ ವಿಚಾರಣಾ ನ್ಯಾಯಾಲಯ, ಹೈಕೋರ್ಟ್ ದಾಖಲೆಗಳನ್ನು ವಶಕ್ಕೆ ಪಡೆಯುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಿತು. ಡಿಸೆಂಬರ್ 15-16 2016 ರಂದು ಸಂಭವಿಸಿದ್ದ ಈ ಘಟನೆ ರಾಂಚಿಯ ನಿರ್ಭಯಾ ಪ್ರಕರಣ ಎಂದೇ ಕುಖ್ಯಾತಿ ಪಡೆದಿತ್ತು. ಬುತಿ ಬಸ್ತಿ ನಿವಾಸದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ರಾಂಚಿಯ ಆರ್‌ಟಿಸಿ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿನಿಯ ಮನೆ ಒಳಗೆ ನುಗ್ಗಿದ್ದ ಆರೋಪಿ ರಾಹುಲ್ ರಾಜ್, ವೈರ್ ನಿಂದ ಆಕೆಯನ್ನು ಬಿಗಿದು ಅತ್ಯಾಚಾರ ನಡೆಸಿದ್ದ. ಬಳಿಕ ಮೊಬೈಲ್ ಎಣ್ಣೆಯಿಂದ ಆಕೆಗೆ ಬೆಂಕಿ ಹಚ್ಚಿ, ಅಲ್ಲಿಂದ ಪರಾರಿಯಾಗಿದ್ದ. ಈ ಭಯಾನಕ ಘಟನೆ ರಾಂಚಿಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. 

  ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ವಿಚಾರಣೆ ವೇಳೆ ರಾಹುಲ್ ರಾಜ್ ತಪ್ಪೊಪ್ಪಿಕೊಂಡಿದ್ದ. ನಂತರ ಸಿಬಿಐ ನ್ಯಾಯಾಲಯಕ್ಕೆ ಸಮಗ್ರ ಆರೋಪ ಪಟ್ಟಿ ಸಲ್ಲಿಸಿತ್ತು. ಡಿಸೆಂಬರ್ 2019ರಲ್ಲಿ ರಾಂಚಿ ಸಿಬಿಐ ಕೋರ್ಟ್ ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ಸೆಪ್ಟೆಂಬರ್ 2024ರಲ್ಲಿ ಜಾರ್ಖಂಡ್ ಹೈಕೋರ್ಟ್ ಎತ್ತಿಹಿಡಿದಿತ್ತು. ಇದೀಗ ಸುಪ್ರೀಂಕೋರ್ಟ್ ಮರಣ ದಂಡನೆ ಶಿಕ್ಷೆಗೆ ತಡೆ ನೀಡಿ ತೀರ್ಪು ಪ್ರಕಟಿಸಿದೆ.

Recent Articles

spot_img

Related Stories

Share via
Copy link