KSRTC : ಎಲ್ಲ ಬಸ್​ಗಳಿಗೂ ವಿಸ್ತರಣೆಯಾಯ್ತು ಕ್ಯುಆರ್ ಕೋಡ್ ಟಿಕೆಟ್

ಬೆಂಗಳೂರು

    ಇನ್ನು ಮುಂದೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಜತೆ ಚಿಲ್ಲರೆಗಾಗಿ ಜಗಳ ಮಾಡಬೇಕಿಲ್ಲ! ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಬಹುತೇಕ ಎಲ್ಲ ಕೆಎಸ್​ಆರ್​​ಟಿಸಿ ಬಸ್​ಗಳಿಗೂ ಇದೀಗ ವಿಸ್ತರಣೆಯಾಗಿದ್ದು, ಯುಪಿಐ ಆ್ಯಪ್ ಮೂಲಕವೇ ಟಿಕೆಟ್ ಹಣ ಪಾವತಿ ಮಾಡಬಹುದಾಗಿದೆ. ಸುಮಾರು 9,000 ಬಸ್‌ಗಳಲ್ಲಿ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಕೆಎಸ್​ಆರ್​​ಟಿಸಿ ಮೂಲಗಳು ತಿಳಿಸಿವೆ.

   2024-25 ಆರ್ಥಿಕ ವರ್ಷದ ಅಂತ್ಯದ ವೇಳೆಗೆ, ತನ್ನ ದೈನಂದಿನ ಆದಾಯದ ಶೇ 60-70 ರಷ್ಟನ್ನು ಡಿಜಿಟಲ್ ಮತ್ತು ಕ್ಯುಆರ್ ಪಾವತಿ ವಿಧಾನಗಳ ಮೂಲಕ ಪಡೆಯುವ ಗುರಿಯನ್ನು ಕೆಎಸ್​ಆರ್​ಟಿಸಿ ಹೊಂದಿದೆ. 

   ಯುಪಿಐ ಪಾವತಿ ಸುಲಭಗೊಳಿಸಲು ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ಇಟಿಎಂ) ನಿಯೋಜನೆಯೊಂದಿಗೆ ಪ್ರಾಯೋಗಿಕ ಆಧಾರದ ಮೇಲೆ ಕ್ಯುಆರ್ ಪಾವತಿ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ನವೆಂಬರ್ 11 ರ ಹೊತ್ತಿಗೆ, ಎಲ್ಲಾ 83 ಡಿಪೋಗಳು ತಲಾ ಐದು ಯಂತ್ರಗಳನ್ನು ಪಡೆದಿವೆ ಮತ್ತು ನವೆಂಬರ್ 18 ರ ಹೊತ್ತಿಗೆ, ಪ್ರತಿಯೊಂದು ಬಸ್‌ಗಳು ಅವುಗಳನ್ನು ಅಳವಡಿಸಿಕೊಂಡಿವೆ.

   ಕ್ಯುಆರ್ ಕೋಡ್ ಆಧಾರಿತ ಟಿಕೆಟ್ ಪಾವತಿ ವ್ಯವಸ್ಥೆಯು ಎಲ್ಲಾ ಕೆಎಸ್ಆರ್​ಟಿಸಿ ಬಸ್​​ಗಳಲ್ಲಿ ಲಭ್ಯವಿದೆ. ಸುಮಾರು ಒಂದು ವರ್ಷದಲ್ಲಿ, ನಮ್ಮ ದೈನಂದಿನ ಆದಾಯದ ಪ್ರಮುಖ ಭಾಗವು ಡಿಜಿಟಲ್ ಮತ್ತು ಕ್ಯುಆರ್ ಪಾವತಿಗಳಿಂದ ಬರುತ್ತದೆ ಎಂಬ ಭರವಸೆ ಹೊಂದಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. 

   ಕೆಎಸ್‌ಆರ್‌ಟಿಸಿ ಪ್ರಕಾರ, ಕ್ಯುಆರ್​​ ಕೋಡ್ ಪಾವತಿ ವ್ಯವಸ್ಥೆ ಅಳವಡಿಸಿದ ಕೆಲವೇ ಸಾರಿಗೆ ನಿಗಮಗಳಲ್ಲಿ ಕರ್ನಾಟಕದ್ದು ಒಂದಾಗಿದೆ. ಡೈನಾಮಿಕ್ ಕ್ಯುಆರ್​​ ಆಧಾರಿತ ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಕರ್ನಾಟಕದಲ್ಲಿಯೇ ಮೊದಲು. ಪಾವತಿಗಳಿಗಾಗಿ ಇದು ಯಾವುದೇ ಮಧ್ಯವರ್ತಿ ಶುಲ್ಕವನ್ನು ವಿಧಿಸುವುದಿಲ್ಲ.

Recent Articles

spot_img

Related Stories

Share via
Copy link