ಜೈಲಿನಿಂದ ಬಿಡುಗಡೆಯಾಗಿರುವ ಅಲ್ಲು ಅರ್ಜುನ್‌ ಹೆಳಿದ್ದಾದರೂ ಏನು ….?

ತೆಲಂಗಾಣ : 

    ​ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಎ11 ಆರೋಪಿ ಆಗಿರೋ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಈಗ ಅವರು ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ಜೈಲಿನಿಂದ ಇಂದು ಮುಂಜಾನೆ ರಿಲೀಸ್ ಆದ ಅವರು, ಪೊಲೀಸ್ ಭಧ್ರತೆಯೊಂದಿಗೆ ನೇರವಾಗಿ ಮನೆ ಸೇರಿದರು. ಅವರು ನಿವಾಸಕ್ಕೆ ಬಂದ ಬಳಿಕ ಮಾಧ್ಯಮಗಳಿಗೆ ರಿಯಾಕ್ಷನ್ ನೀಡಿದ್ದಾರೆ. ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳುವುದನ್ನು ಮರೆತಿಲ್ಲ. ಜೊತೆಗೆ ಕಾನೂನಿಗೆ ತಲೆ ಬಾಗೋದಾಗಿ ಹೇಳಿದ್ದಾರೆ.

 
   ‘ಆ ರೀತಿ ಮಾಡಬೇಕು ಎಂಬ ಯಾವುದೇ ಉದ್ದೇಶ ಇರಲಿಲ್ಲ. ಅವರ ಕುಟುಂಬಕ್ಕೆ ನಾನು ಕ್ಷಮೆ ಕೇಳುತ್ತೇನೆ. ಅದು ನನ್ನ ವೈಯಕ್ತಿಕ ನಿಯಂತ್ರಣದಲ್ಲಿ ಇರಲಿಲ್ಲ. ನಾನು ಕಳೆದ 20 ವರ್ಷಗಳಿಂದ ಅಲ್ಲಿಗೆ ಸಿನಿಮಾ ನೋಡಲು ಹೋಗುತ್ತಿದ್ದೇನೆ. ನನ್ನದು ಮಾತ್ರವಲ್ಲದೆ, ನನ್ನ ಅಂಕಲ್ ಸಿನಿಮಾಗಳನ್ನೂ ಅಲ್ಲಿ ನೋಡಿದ್ದೇನೆ. 30ಕ್ಕೂ ಹೆಚ್ಚು ಬಾರಿ ಆ ಥಿಯೇಟರ್​ಗೆ ಭೇಟಿ ಕೊಟ್ಟಿದ್ದೇನೆ. ಯಾವಾಗಲೂ ಈ ರೀತಿ ಆಗಿರಲಿಲ್ಲ. ಸಾವಿನ ನಷ್ಟ ತುಂಬಲು ಸಾಧ್ಯವಿಲ್ಲ. ಆದರೆ, ನನ್ನ ಕೈಲಾದ ಸಹಾಯ ಮಾಡುತ್ತೇನೆ’ ಎಂದು ಅಲ್ಲು ಅರ್ಜುನ್ ಭರವಸೆ ನೀಡಿದ್ದಾರೆ.
   ಈ ಬಂಧನದ ಹಿಂದೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೈವಾಡ ಇದೆ ಎಂಬ ಆರೋಪ ಇದೆ. ಈ ಬಗ್ಗೆ ಅವರಿಗೆ ಪ್ರಶ್ನೆ ಮಾಡಲಾಗಿದೆ. ಆದರೆ, ಈ ಬಗ್ಗೆ ಅಲ್ಲು ಅರ್ಜುನ್ ಅವರು ಪ್ರತಿಕ್ರಿಯೆ ನೀಡಿಲ್ಲ. ಅವರು ಈ ಬಂಧನಕ್ಕೆ ಯಾರನ್ನೂ ದೂರಿಲ್ಲ. ಇತ್ತೀಚೆಗೆ ಮಾತನಾಡಿದ್ದ ರೇವಂತ್ ರೆಡ್ಡಿ ಅವರು, ‘ನನ್ನ ಹಸ್ತಕ್ಷೇಪ ಇಲ್ಲ’ ಎಂದು ಸ್ಪಷ್ಟಪಡಿಸಿದ್ದರು.
  ‘ಏನೇ ಇದ್ದರೂ ಕಾನೂನು ನೋಡಿಕೊಳ್ಳುತ್ತದೆ. ಪ್ರಕರಣ ತನಿಖೆಯಲ್ಲಿ ಇದೆ. ಹೀಗಾಗಿ, ಆ ಬಗ್ಗೆ ಮಾತನಾಡುವುದಿಲ್ಲ. ನಾನು ಕಾನೂನನ್ನು ಗೌರವಿಸುತ್ತೇನೆ’ ಎಂದು ಹೇಳಿಕೆ ನೀಡಿದ್ದಾರೆ ಅಲ್ಲು ಅರ್ಜುನ್. ಅವರು ಬಂಧನಕ್ಕೆ ಒಳಗಾದಾಗ ಕುಟುಂಬ ಸವಾಲಿನ ಪರಿಸ್ಥಿತಿ ಎದುರಿಸಿತ್ತು. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನಿಮ್ಮ ಪ್ರೀತಿಗೆ ಧನ್ಯವಾದ. ಎಲ್ಲರಿಗೂ ಧನ್ಯವಾದ. ಅಭಿಮಾನಿಗಳು ತೋರಿದ ಪ್ರೀತಿ-ಬೆಂಬಲಕ್ಕೆ ಧನ್ಯವಾದ’ ಎಂದಿದ್ದಾರೆ.

Recent Articles

spot_img

Related Stories

Share via
Copy link