ಮಂಡ್ಯ: ಪ್ರತಿಷ್ಠಿತ ಕಂಪನಿ ಹೆಸರಲ್ಲಿ ನಕಲಿ ಮದ್ಯ ತಯಾರಿಕೆ….!

ಮಂಡ್ಯ

    ಈಗಂತೂ ಯಾವುದು ನಕಲಿಯೋ ಯಾವುದೋ ಅಸಲಿಯೋ ಒಂದೂ ಗೊತ್ತಾಗುವುದಿಲ್ಲ. ಇನ್ಮುಂದೆ ಮದ್ಯಪ್ರಿಯರು ಬಾರ್ ಇಲ್ಲವೇ ವೈನ್‌ಶಾಪ್‌ಗಳಲ್ಲಿ ಮದ್ಯ ಖರೀದಿಸುವುದಕ್ಕೂ ಮುನ್ನ ಸ್ವಲ್ಪ ಯೋಚನೆ ಮಾಡುವುದು ಒಳ್ಳೆಯದು. ಯಾಕಂದರೆ, ಅಲ್ಲಿ ಕೊಡುವ ಮದ್ಯ ಅಸಲಿಯೋ ನಕಲಿಯೋ ಎಂಬುದೇ ಅನುಮಾನವಾಗಿದೆ. ಮಂಡ್ಯ ಜಿಲ್ಲೆಯ ಬಿಟಿ ಲಲಿತಾ ನಾಯಕ್ ಬಡಾವಣೆಯಲ್ಲಿ ಭಾನುವಾರ ಅಬಕಾರಿ ಇಲಾಖೆ ನಡೆಸಿದ ರೇಡ್‌ನಲ್ಲಿ ಬೃಹತ್ ನಕಲಿ ಲಿಕ್ಕರ್ ದಂಧೆ ಬಯಲಾಗಿದೆ. ಸಾಲು ಸಾಲಾಗಿ ಜೋಡಿಸಿಟ್ಟಿರುವ ಸ್ಪಿರಿಟ್ ತುಂಬಿರುವ ಕ್ಯಾನ್‌ಗಳು, ಮತ್ತೊಂದೆಡೆ ದುಬಾರಿ ಮದ್ಯದ ಬಾಟಲ್‌ಗಳು ಪತ್ತೆಯಾಗಿವೆ.

   ಪಕ್ಕಾ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಹಂಡ್ರೆಡ್ ಪೈಪರ್ಸ್‌, ಎಂಸಿ ವಿಸ್ಕಿ, ಬ್ಲಾಕ್ ಆ್ಯಂಡ್ ವೈಟ್, ಟೀಚರ್ಸ್ ಸ್ಕಾಚ್, ಇಂಪೀರಿಯಲ್ ಬ್ಲೂ, ಹಂಡ್ರೆಡ್ ಪೈಪರ್ಸ್, ಎಂಸಿ ವಿಸ್ಕಿ, ಸಿಲ್ವರ್ ಕಪ್ ಸ್ಯಾಚೆಟ್ ಪತ್ತೆಯಾಗಿವೆ. ದಾಳಿ ವೇಳೆ 35 ಲೀಟರ್ ನಕಲಿ ಮದ್ಯದ ಸ್ಯಾಚೆಟ್​ಗಳು ಸಿಕ್ಕಿವೆ. 590 ಲೀಟರ್ ಸ್ಪಿರಿಟ್, 30 ಲೀಟರ್ ನಕಲಿ ಮದ್ಯ. ಸ್ಟಿಕ್ಕರ್ ತಯಾರಿಸುವ ಯಂತ್ರ, ಕಚ್ಚಾ ಸಾಮಗ್ರಿಯನ್ನ ಸೀಜ್ ಮಾಡಲಾಗಿದೆ. ಒಬ್ಬ ಆರೋಪಿ ಸೆರೆಸಿಕ್ಕಿದ್ದು ಉಳಿದವರು ಪರಾರಿಯಾಗಿದ್ದಾರೆ. ಮದ್ಯಪ್ರಿಯರ ಜೀವದ ಜತೆ ಚೆಲ್ಲಾಟ ಆಡುತ್ತಿರುವ ಈ ದಂಧೆ ಹಿಂದೆ ದೊಡ್ಡ ಜಾಲವೇ ಇದೆ. ಖದೀಮರ ಗ್ಯಾಂಗ್‌ ನಕಲಿ ಮದ್ಯವನ್ನು ಯಾವ್ಯಾವ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಪೂರೈಕೆ ಮಾಡುತ್ತಿತ್ತು ಎಂಬುದು ತನಿಖೆಯಿಂದ ತಿಳಿಯಬೇಕಿದೆ.

Recent Articles

spot_img

Related Stories

Share via
Copy link