ರೂ.5317.83 ಕೋಟಿ ಪೂರಕ ಅಂದಾಜು ಬೇಡಿಕೆ ಮಂಡನೆ….!

ಬೆಳಗಾವಿ 

    ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಸಭೆ ಅಧಿವೇಶನದ ಸೋಮವಾರ ನಡೆದ ಕಲಾಪದಲ್ಲಿ, ಮುಖ್ಯಮಂತ್ರಿಗಳ ಪರವಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು 2024-25ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳನ್ನು ಮಂಡಿಸಿದರು.

    ಧನ ವಿನಯೋಗ ಅಧಿನಿಯಮದ ಆಧಾರದಲ್ಲಿ, ಹೊಸ ಸೇವೆಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪೂರಕ ಅಥವಾ ಹೆಚ್ಚಿನ ವೆಚ್ಚದ ಅವಶ್ಯಕತೆ ಉಂಟಾದರೆ, ಅಂದಾಜು ಮಾಡಿದ ವೆಚ್ಚದ ಮೊಬಲಗನ್ನು ತೋರಿಸುವ ಮತ್ತೊಂದು ವಿವರಣೆಯನ್ನು ರಾಜ್ಯ ವಿಧಾನ ಮಂಡಲದ ಮುಂದೆ ಮಂಡಿಸಲು ಸಂವಿಧಾನದ 205(1)(ಎ)ರ ಅನುಚ್ಛೇದವು ಅವಕಾಶ ಕಲ್ಪಿಸಿದೆ. ಇದರ ಅನುಸಾರ ಕಂದಾಯ ಸಚಿವ ರೂ.5317.83 ಕೋಟಿ ಪೂರಕ ಅಂದಾಜುಗಳು ಎರಡನೇ ಕಂತಿನ ಬೇಡಿಕೆಯನ್ನು ಸದನದಲ್ಲಿ ಮಂಡಿಸಿದರು.

Recent Articles

spot_img

Related Stories

Share via
Copy link