ಗಾಂಜಾ ಮಾರಾಟ : ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು …!

ಕೊರಟಗೆರೆ 

   ಗಾಂಜಾ ಸೊಪ್ಪು ಮಾರಾಟಕ್ಕೆ ಮುಂದಾಗಿದ್ದ ಇಬ್ಬರು ಆರೋಪಿಗಳನ್ನ ಮಾರುವೇಷದಲ್ಲಿ ಕೊರಟಗೆರೆ ಪಿಎಸ್ಐ ಚೇತನ್ ಗೌಡ ಮಾಲು ಸಹಿತ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

  ಕೊರಟಗೆರೆ ತಾಲೂಕು ಚನ್ನರಾಯನ ದುರ್ಗ ಹೋಬಳಿ ತುಂಬಾಡಿ ಗ್ರಾಪಂ ವ್ಯಾಪ್ತಿಯ ಬೀರದೇನಹಳ್ಳಿ ತಂಗುದಾಣ ದಲ್ಲಿ ಗಾಂಜಾಸೊಪ್ಪು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಗಾಂಜಾ ಪೆಡ್ಲರ್ ಗಳಿಂದ 1 ಲಕ್ಷ 50 ಸಾವಿರ ರೂ. ಮೌಲ್ಯದ 2 ಕೆಜಿ 400 ಗ್ರಾಂ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ.

   ಸಿದ್ದರಬೆಟ್ಟದ ಸೂರ್ಯಗುಹೆ ಸಮೀಪದ ಅರಣ್ಯದಲ್ಲಿ ಗಾಂಜಾಸೊಪ್ಪಿನ ಗಿಡಗಳನ್ನು ಬೆಳೆದು ಗಿಡ ಬಾಡಿದ ನಂತರ
ಸೊಪ್ಪು ಮತ್ತು ಬೀಜ ಎರಡನ್ನೂ ಕೊರಟಗೆರೆ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಕೊರಟಗೆರೆ ಪೊಲೀಸರ ತಂಡ ಭೇದಿಸುವಲ್ಲಿ ಯಶಸ್ವಿಯಾಗಿದೆ.

   ಸಿದ್ದರಬೆಟ್ಟದ ಹೇಮಂತ್ (21) ಮತ್ತು ನೇಗಲಾಲದ ಭೀಮರಾಜು (35) ಬಂಧಿತ ಆರೋಪಿಗಳು. ದಾಳಿಯ ವೇಳೆ ಪಿಎಸ್ಥೆ ಚೇತನ್, ಸಿಬ್ಬಂದಿಯಾದ ದೊಡ್ಡಲಿಂಗಯ್ಯ, ಮೋಹನ್, ಪ್ರದೀಪ್, ಸಿದ್ದರಾಮು . ಹಾಜರಿದ್ದು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಸಹಕರಿಸಿದ್ದಾರೆ ಎನ್ನಲಾಗಿದೆ.

   ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೂ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಹಾಗೂ ಪಿಎಸ್ಐ ಚೇತನ್ ಗೌಡ ಆರೋಪಿಗಳನ್ನ ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Recent Articles

spot_img

Related Stories

Share via
Copy link