ಬೆಂಗಳೂರು
ಬೆಂಗಳೂರು-ಮೈಸೂರು ರೈಲು ಕೆಲ ದಿನಗಳ ಕಾಲ 90 ನಿಮಿಷ ತಡವಾಗಿ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಬೆಂಗಳೂರು ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ಅಗತ್ಯ ಸುರಕ್ಷತೆ ಮತ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ರೈಲು ತಡವಾಗಿ ಹೊರಡಲಿದೆ.
ಪ್ರಯಾಣಿಕರಲ್ಲಿನ ಗೊಂದಲ ನಿವಾರಿಸಲು ನೈಋತ್ಯ ರೈಲ್ವೆಯು 116 ವಿಶೇಷ ಪ್ರಯಾಣಿಕ ರೈಲುಗಳಿಗೆ 2025ರ ಜನವರಿ 1ರಿಂದ ನಿಯಮಿತ ರೈಲುಗಳ ಸಂಖ್ಯೆ ನೀಡುತ್ತಿದೆ. ಈವರೆಗೆ ವಿಶೇಷ ರೈಲುಗಳ ಸಂಖ್ಯೆ ‘0’ (ಸೊನ್ನೆ) ಸಂಖ್ಯೆಯಿಂದ ಪ್ರಾರಂಭವಾಗುತ್ತಿತ್ತು. ಇನ್ಮುಂದೆ ಈ ರೈಲುಗಳ ಸಂಖ್ಯೆ “5,6,7” ರಿಂದ ಆರಂಭವಾಗಲಿದೆ.
ಕೋವಿಡ್ ಸಂದರ್ಭದಲ್ಲಿ ಹಾಗೂ ಇನ್ನಿತರ ಕಾರಣಗಳಿಂದ ರದ್ದುಗೊಂಡು ಬಳಿಕ ಪುನಃ ವಿಶೇಷ ರೈಲುಗಳಾಗಿ ಇವು ಸಂಚಾರ ಮಾಡುತ್ತಿದ್ದವು. ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ವಿಶೇಷ ರೈಲುಗಳ ಟಿಕೆಟ್ ಶುಲ್ಕ ಹೆಚ್ಚು ಹಾಗೂ ಪದೇ ಪದೇ ಸಂಚಾರ ಅವಧಿ ವಿಸ್ತರಿಸಬೇಕಾದ ಕಾರಣ ಮುಂಗಡ ಬುಕ್ಕಿಂಗ್ ಕೂಡ ಸಮಸ್ಯೆ ಆಗುತ್ತದೆ. ಕಳೆದ ಲೋಕ ಸಭೆ ಚುನಾವಣೆ ವೇಳೆ ಸಂದರ್ಭದಲ್ಲಿ ಈ ರೈಲುಗಳನ್ನು ನೈಋತ್ಯ ರೈಲ್ವೆ ವಲಯವು ನಿಯಮಿತ ರೈಲುಗಳಾಗಿ ಪರಿವರ್ತಿಸಿ ಓಡಿಸುತ್ತಿದೆ. ಅದಾಗಲೇ ಈ ರೈಲುಗಳ ದರ ಹಿಂದಿನಂತೆ ಕಡಿಮೆಗೊಂಡಿದೆ.