ಇಲಾಖೆಯ ಕೆಳ ಹಂತದಲ್ಲಿ ಭ್ರಷ್ಟಾಚಾರ ಇದೆ: ಸದನದಲ್ಲೇ ಒಪ್ಪಿಕೊಂಡ ಸಚಿವ ಕೃಷ್ಣಬೈರೇಗೌಡ

ಬೆಳಗಾವಿ

    ಕಂದಾಯ ಮತ್ತು ಭೂಮಾಪನ ಇಲಾಖೆಯಲ್ಲಿ ಕೆಳ ಹಂತದಲ್ಲಿ ಭ್ರಷ್ಟಾಚಾರ ನಡೆಯುಯತ್ತಿರುವುದು ನಿಜ ಎಂದು ಖುದ್ದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೇ ಒಪ್ಪಿಕೊಂಡಿದ್ದಾರೆ. ವಿಧಾನಪರಿಷತ್‌ನಲ್ಲಿ ಬುಧವಾರ ಮಾತನಾಡಿದ ಅವರು, ಕೆಳಮಟ್ಟದಲ್ಲಿ ಭ್ರಷ್ಟಾಚಾರ ತಡೆಯುವುದು ಸುಲಭವಲ್ಲ. ಇದು ಹಿಂದೆಯೂ ಇತ್ತು ಮತ್ತು ಈಗಲೂ ಮುಂದುವರಿಯುತ್ತಿದೆ. ಆದರೆ ನಾವು ಅದನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದರು.

  ಇ-ಖಾತಾವನ್ನು ವಿರೋಧಿಸುವ ಸದನದ ಸದಸ್ಯರು ಸರ್ಕಾರವು ಅಕ್ರಮವಾಗಿ ಆದಾಯವನ್ನು ಗಳಿಸಬೇಕೆಂದು ಬಯಸುತ್ತಾರೆಯೇ ಎಂದು ಸಚಿವರು ಪ್ರಶ್ನಿಸಿದ್ದಾರೆ. ಇ-ಖಾತಾ ಜಾರಿಗೆ ಬಂದಾಗ ಆರಂಭದಲ್ಲಿ ಅನಾನುಕೂಲತೆಗಳಿದ್ದವು ಎಂಬ ಅಂಶವನ್ನು ಒಪ್ಪಿಕೊಂಡ ಕೃಷ್ಣಬೈರೇಗೌಡ, ಶೇ 90ರಷ್ಟು ಸಮಸ್ಯೆ ಬಗೆಹರಿದಿದೆ ಎಂದು ಸದನಕ್ಕೆ ತಿಳಿಸಿದ್ದಾರೆ.
  ನಾವು ಆರಂಭದಲ್ಲಿ ಹೆಣಗಾಡಿದ್ದೇವೆ. ಆಗ ಸ್ವೀಕರಿಸಿದ 15,000 ಅರ್ಜಿಗಳಲ್ಲಿ ಕೇವಲ 300 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲು ನಮಗೆ ಸಾಧ್ಯವಾಯಿತು. ಆದರೆ ಈಗ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದು, ಬಿಬಿಎಂಪಿ ಇದುವರೆಗೆ 54,000 ಇ-ಖಾತಾಗಳನ್ನು ನೀಡಿದೆ. ಪ್ರತಿದಿನ ಸುಮಾರು 3,000 ಇ-ಖಾತಾಗಳನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಪುರಸಭೆ ಆಡಳಿತ ಮಟ್ಟದಲ್ಲಿ ಭ್ರಷ್ಟಾಚಾರ ತಡೆಯಲು ಇ-ಖಾತಾ ಸಹಕಾರಿಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

Recent Articles

spot_img

Related Stories

Share via
Copy link