ಒಂದು ಸಾಕಾಗಲ್ಲ 20 ಕೋಟಿ ಕೊಡಿ : ಪುಷ್ಪಾ-2 ನಿರ್ಮಾಪಕರಿಗೆ ಸಚಿವರ ಆಗ್ರಹ

ತೆಲಂಗಾಣ:

    ಸಂಧ್ಯಾ ಥಿಯೇಟರ್​ನಲ್ಲಿ ‘ಪುಷ್ಪ 2’ ಪ್ರೀಮಿಯರ್​ಗೆ ಅಲ್ಲು ಅರ್ಜುನ್ ಬಂದ ಸಮಯದಲ್ಲಿ ಕಾಲ್ತುಳಿತ ಉಂಟಾಗಿತ್ತು. ಇದರಿಂದ ಮಹಿಳೆ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅಲ್ಲು ಅರ್ಜುನ್ ಬಂಧನಕ್ಕೂ ಒಳಗಾಗಿದ್ದರು. ಅಲ್ಲು ಅರ್ಜುನ್ ಅವರು ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಕೊಡಬೇಕು ಎಂದು ಕೆಲವರು ಆಗ್ರಹಿಸಿದ್ದರು. ಹೀಗಿರುವಾಗಲೇ ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ಕೊಮಟಿ ವೆಂಕಟ್ ರೆಡ್ಡಿ ಹೊಸ ಬೇಡಿಕೆ ಇಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಅಲ್ಲು ಅರ್ಜುನ್ 20 ಕೋಟಿ ರೂಪಾಯಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

   ‘ಅಲ್ಲು ಅರ್ಜುನ್ ಬಳಿ ಥಿಯೇಟರ್​ ಬಳಿ ಬರಬಾರದು ಎಂದಿತ್ತು. ಆದಾಗ್ಯೂ ಅವರು ಬಂದರು. ಅವರು ಕಾರಿನ ಸನ್​ರೂಫ್ ಬಳಿ ಬಂದು ಕೈ ಬೀಸಿದರು. ಇದರಿಂದ ಸಾಕಷ್ಟು ಜನರು ಸೇರುವಂತೆ ಆಯಿತು. ಇದರಿಂದ ಸಾವು ಸಂಭವಿಸಿತು. ಈ ಘಟನೆ ಬಗ್ಗೆ ಅಲ್ಲು ಅರ್ಜುನ್ ಅವರಿಗೆ ಮಾಹಿತಿ ನೀಡಲಾಯಿತು. ಆದಾಗ್ಯೂ ಅಲ್ಲು ಅರ್ಜುನ್ ಅವರು ಸಿನಿಮಾ ನೋಡುವುದನ್ನು ಮುಂದುವರಿಸಿದರು. ಇದು ನಿರ್ಲಕ್ಷ್ಯದ ಸೂಚನೆ’ ಎಂದಿದ್ದಾರೆ ಅವರು. 

   ‘ಸಿನಿಮಾ 2000 ಕೋಟಿ ರೂಪಾಯಿ ಗಳಿಸಿದೆ, 3000 ಕೋಟಿ ರೂಪಾಯಿ ಗಳಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಅವರ ಕುಟುಂಬಕ್ಕೆ 20 ಕೋಟಿ ರೂಪಾಯಿ ಕೊಡಬಹುದಲ್ಲ. ಇದು ನನ್ನ ಬೇಡಿಕೆ. ಅಲ್ಲು ಅರ್ಜುನ್ ಹಾಗೂ ಸಿನಿಮಾ ನಿರ್ಮಾಪಕರು 20 ಕೋಟಿ ರೂಪಾಯಿ ಕೊಡಬೇಕು’ ಎಂದು ಕೊಮಟಿ ರೆಡ್ಡಿ ಆಗ್ರಹಿಸಿದ್ದಾರೆ.

Recent Articles

spot_img

Related Stories

Share via
Copy link