14 ಮಂದಿಗೆ ಅಭಿವೃದ್ಧಿ- ಪರಿಸರ ಪತ್ರಿಕೋದ್ಯಮ ಪ್ರಶಸ್ತಿ….!

ಬೆಂಗಳೂರು: 

    ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರ ವರ್ಷಗಳ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದೆ.

  ರಾಜ್ಯ ಸರ್ಕಾರವು 2017-2023ರ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗಾಗಿ 14 ಹೆಸರುಗಳನ್ನು ಪ್ರಕಟಿಸಿದೆ. ಪ್ರಶಸ್ತಿ ಪುರಸ್ಕೃತರು 1 ಲಕ್ಷ ರೂಪಾಯಿ ನಗದು ಪಡೆಯಲಿದ್ದಾರೆ. ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಲ್ಲಿ ಚಿ.ಜಾ ರಾಜೀವ್ (2017), ದೇವಯ್ಯ ಗುತ್ತೇದಾರ್ (2018), ಗಿರೀಶ್ ಲಿಂಗಣ್ಣ (2019), ಯೋಗೇಶ್ ಎಂಎನ್ (2020), ನೌಶಾದ್ ಬಿಜಾಪುರ (2021), ಸತೀಶ್ ಜಿಟಿ (2022) ಮತ್ತು ಎಸ್ ಗಿರೀಶ್ ಬಾಬು (2023) ಸೇರಿದ್ದಾರೆ.

   ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಲ್ಲಿ ವಿಜಯಲಕ್ಷ್ಮಿ ಶಿಬರೂರು (2017), ಬಿಎಂಟಿ ರಾಜೀವ್ (2018), ವಿನೋದ ನಾಯ್ಕ್ (2019), ಮಾಲ್ತೇಶ್ ಅಂಗೂರ (2020), ಸುಧೀರ್ ಶೆಟ್ಟಿ (2021), ಮಲ್ಲಿಕಾರ್ಜುನ್ ಹೊಸಪಾಳ್ಯ (2022) ಮತ್ತು ಆರ್ ಮಂಜುನಾಥ್ (20) ಸೇರಿದ್ದಾರೆ.

Recent Articles

spot_img

Related Stories

Share via
Copy link