ಹೈದ್ರಾಬಾದನಿಂದ ಹಾರಿದ್ದ ಏರ್ ಬಲೂನ್ ಹುಮನಾಬಾದ್‌ನಲ್ಲಿ ಪತ್ತೆ

ಹುಮನಾಬಾದ್

    ತೆಲಂಗಾಣ ಹೈದ್ರಾಬಾದನಿಂದ ಹವಾಮಾನ ಪರಿಶೀಲನೆಗಾಗಿ ಜ.17ರಂದು ಹಾರಿಬಿಟ್ಟ ಟಿ.ಐ.ಎಫ್.ಆರ್ ಏರ್ ಬಲೂನ್ ಶನಿವಾರ ಬೆಳಿಗ್ಗೆ 7ಕ್ಕೆ ತಾಲ್ಲೂಕಿನ ಜಲಸಂಗವಿಯಲ್ಲಿ ಬಿದ್ದು ಗ್ರಾಮಸ್ಥರ ಆತಂಕ ಸೃಷ್ಟಿಸಿತು.ಏರ್ ಬಲೂನ್ ಹಾರಿಸಿಬಿಟ್ಟ ಹೈದ್ರಾಬಾದ್ ತಂಡ ಬಲೂನನ್ನು ಹಿಂಬಾಲಿಸಿಕೊಂಡು ಬರುತಿತ್ತು. ವಿಷಯ ತಿಳಿಯುತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿನೀಡಿ, ಪರಿಶೀಲನೆ ನಡೆಸಿ, ಅದರ ಸಾಧಕ ಬಾಧಕಗಳ ಕುರಿತು ದೂರವಾಣಿ ಮೂಲಕ ಮಾಹಿತಿ ಕಲೆಹಾಕಿ ಹೀಗೆ ಬೀಳುವುದರಿಂದ ಯಾವುದೇ ಅಪಾಯ ಆಗುವುದಿಲ್ಲ. ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಅಭಯ ನೀಡಿದ ನಂತರ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರುಬಿಟ್ಟು ಸಹಜ ಸ್ಥಿತಿಗೆ ಬಂದರು. ಬಳಿಕ ಪೊಲೀಸರು. ಬಲೂನ್ ವಶಕ್ಕೆ ತೆಗೆದುಕೊಂಡರು.

Recent Articles

spot_img

Related Stories

Share via
Copy link