ಇ-ಖಾತಾ ಇಲ್ಲದ ಆಸ್ತಿಗಳಿಗೆ ಬಿ-ಖಾತಾ ನೀಡಲು ಸರ್ಕಾರ ಮುಂದು..!

ಬೆಂಗಳೂರು:

    ಬೆಂಗಳೂರು ಬಿಟ್ಟು ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳ ನಗರ ಪ್ರದೇಶ ವ್ಯಾಪ್ತಿಯಲ್ಲಿ ಇ–ಖಾತಾ ಹೊಂದಿಲ್ಲದ 30 ರಿಂದ 32 ಲಕ್ಷ ಆಸ್ತಿಗಳಿಗೆ ಬಿ– ಖಾತಾ ನೀಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸೋಮವಾರ ಹೇಳಿದರು.ವಿವಿಧ ಜಿಲ್ಲಾಧಿಕಾರಿಗಳ ಜತೆ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

   ಬೆಂಗಳೂರು ಹೊರಗೆ ನಗರ ಪ್ರದೇಶಗಳಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ಅಡಿಯಲ್ಲಿ 55 ಲಕ್ಷ ನಿವೇಶನಗಳಿವೆ. 22 ಲಕ್ಷ ಸೈಟ್ ಮಾಲೀಕರು ಇ-ಖಾತಾಗಳನ್ನು ಪಡೆದಿದ್ದಾರೆ. 30 ಲಕ್ಷಕ್ಕೂ ಹೆಚ್ಚು ನಿವೇಶನಗಳು ಅಂತಹ ಯಾವುದೇ ದಾಖಲೆಗಳನ್ನು ಹೊಂದಿಲ್ಲ. ಇದನ್ನು ಒಂದೇ ಬಾರಿ ಪರಿಗಣಿಸಿ, ಈ ನಿವೇಶನಗಳಿಗೆ ಬಿ–ಖಾತಾ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯಾ ಡಿಸಿಗಳಿಗೆ ಸೂಚನೆ ನೀಡಿದ್ದು, ಬಿ ಖಾತಾ ನೀಡುವಂತೆ ಸೂಚಿಸಿದ್ದಾರೆ ನಾವು ಇದನ್ನು ಅಭಿಯಾನವಾಗಿ ಕೈಗೆತ್ತಿಕೊಂಡು ಮೂರು ತಿಂಗಳೊಳಗೆ ಪೂರ್ಣಗೊಳಿಸಲು ಮತ್ತು ಇ-ಖಾತಾ ಇಲ್ಲದ ಆಸ್ತಿಗಳಿಗೆ ಬಿ-ಖಾಟಾ ನೀಡಲು ಸುತ್ತೋಲೆ ಹೊರಡಿಸಿದ್ದೇವೆಂದು ತಿಳಿಸಿದರು.

   ದಾಖಲೆಗಳಿಲ್ಲದಿದ್ದರೆ ಇ-ಪ್ರಾಪರ್ಟೀಸ್ ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಿದರೆ ಬಿ ಖಾತಾ ನೀಡಬಹುದು ಎಂದು ಸಿಎಂ ಇತ್ತೀಚಿನ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಹೀಗಾಗಿ ಫೆ. 10 ರೊಳಗೆ ಸುತ್ತೋಲೆ ಹೊರಡಿಸಿ, ಬಾಕಿ ಇರುವ ಆಸ್ತಿಗಳಿಗೆ ಗರಿಷ್ಠ ಮೂರು ತಿಂಗಳ ಒಳಗೆ ಅಭಿಯಾನ ಮಾದರಿಯಲ್ಲಿ ಬಿ–ಖಾತಾ (ಒನ್‌ ಟೈಮ್‌ ಮಾದರಿ) ಮಾಡಿಕೊಡಲಾಗುವುದು ಎಂದರು.

   ಅನಧಿಕೃತ ನಿವೇಶನಗಳ ಬಗ್ಗೆ ಸುಪ್ರೀಂ ಕೋರ್ಟ್‌ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಅದನ್ನು ಪಾಲಿಸಲೇಬೇಕಾದ ತುರ್ತು ಎದುರಾಗಿದೆ. ಹೀಗಾಗಿ ಎಷ್ಟು ಸ್ವತ್ತುಗಳು ಇವೆ ಎಂದು ಗುರುತಿಸಿ ಸರ್ಕಾರವೇ ಬಿ–ಖಾತಾ ಮಾಡಿಕೊಡಲಿದೆ. ಇದಾದ ಮೇಲೆ ರಾಜ್ಯದಲ್ಲಿ ಬಿ–ಖಾತಾ ವ್ಯವಸ್ಥೆ ಇರುವುದಿಲ್ಲ. ಎ–ಖಾತಾ ಮಾತ್ರ ಇರಲಿದ್ದು, ಮುಂದಿನ ದಿನಗಳಲ್ಲಿ ಅನಧಿಕೃತ ನಿವೇಶನಗಳಿಗೆ ಅವಕಾಶವೇ ಇರುವುದಿಲ್ಲ. ನಗರ ವ್ಯಾಪ್ತಿಯಲ್ಲಿ ಈ ಅಭಿಯಾನ ಮುಗಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇದೇ ಮಾದರಿ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.

 

Recent Articles

spot_img

Related Stories

Share via
Copy link