ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದಿಂದ ಪ್ರತಿಭಟನೆ

ಬೆಂಗಳೂರು :

  ದೇಶದಲ್ಲಿ ಮಹಿಳೆಯರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಎದುರಿಸಿರುತ್ತಿರುವ ಅಪೌಷ್ಟಿಕತೆ ರಕ್ತಹೀನತೆ, ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕುವ ಹಿನ್ನೆಲೆಯಲ್ಲಿ 1975 ಅಕ್ಟೋಬರ್ 2ರಂದು ಪ್ರಾರಂಭಿಸಲಾದ ಸಮಗ್ರ ಶಿಶು ಅಭಿವೃದ್ಧಿಯೋಜನೆಯ (ಐ.ಸಿ.ಡಿ.ಎಸ್) ಪರಿಣಾಮಕಾರಿಯಾಗಲು ಅಂಗನವಾಡಿ ಕಾರ್ಯಕರ್ತೆಯರು ಸಾಕಷ್ಟು ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿದ್ದೇವೆ. 

   ಕೇಂದ್ರ ಹಾಗೂ ರಾಜ್ಯ ಸರ್ಕಾರದ (ಐ.ಸಿ.ಡಿ.ಎಸ್) ಯೋಜನೆಯಲ್ಲಿ 3 ರಿಂದ 6ವರ್ಷದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಪೂರಕ ಪೌಷ್ಠಿಕ ಆಹರ ವಿತರಣೆ, ಮಕ್ಕಳಿಗೆ ಚುಚ್ಚು ಮದ್ದು ಕೊಡಿಸುವುದು, ಭಾಗ್ಯಲಕ್ಷ್ಮೀ ಅರ್ಜಿ ಹಾಗೂ ಮಾತೃವಂದನ ಅರ್ಜಿಯನ್ನು ಫಲಾನುಭವಿಗಳಿಗೆ ನೀಡುವುದು, ಬಿ.ಎಲ್.ಓ. ಕೆಲಸ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಪೋಷಣ್ ಟ್ರ್ಯಾಕರ್‌ನಲ್ಲಿ ಮಕ್ಕಳು ಮತ್ತು ಗರ್ಭಿಣಿಯರು, ಬಾಣಂತಿಯರ, ತೂಕ ಮತ್ತು ಎತ್ತರವನ್ನು ನಮೂದಿಸಿರುತ್ತಿದ್ದೇವೆ. ಈ ಹಿಂದೆ 2020, 21, 22ನೇ ಸಾಲಿನಲ್ಲಿ ಕರೋನ ವಾರಿಯರ್ನಗಳಾಗಿ ಜೀವದ ಹಂಗುತೋರೆದು ಆರೋಗ್ಯ ಇಲಾಖೆಯವರ ಜೊತೆ ಕೆಲಸ ನಿರ್ವಹಿಸಿದ್ದೇವೆ. ಆ ಸಂದರ್ಭದಲ್ಲಿ ಕರೋನ ವೈರಸ್‌ಗೆ ತುತ್ತಾಗಿ ತಂಬಾ ಕಾರ್ಯಕರ್ತೆಯರು ಮರಣ ಹೊಂದಿದ್ದು ಅವರ ಕುಟುಂಬಗಳು ಬೀದಿಗೆ ಬಂದಿರುತ್ತವೆ.

  ಹೀಗೆ ನಮ್ಮ ಕೆಲಸದ ಜೊತೆಗೆ ಇತರೆ ಇಲಾಖೆಗಳ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರು 50 ವರ್ಷಗಳಿಂದ ಕೆಲಸ ನಿರ್ವಸಿಕೊಂಡು ಬರುತ್ತಿದ್ದೇವೆ ಆದರು ನಮಗೆ ಕನಿಷ್ಠ ಕೂಲಿಯನ್ನು ನೀಡುತ್ತಿಲ್ಲ ಗೌರವಧನದ ಆದರದಲ್ಲಿ ಮಹಿಳೆಯರನ್ನು ಹೀಗೆ ದುಡಿಸಿಕೊಳ್ಳುತ್ತಿರುವುದು ಖಂಡಿಸಿ ನಮ್ಮ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ (ಐ.ಸಿ.ಡಿ.ಎಸ್) ಯೋಜನೆಯ 50 ನೇ ವರ್ಷ ಸುವರ್ಣಮಹೋತ್ಸವವನ್ನು ಅರ್ಥಪೂರ್ವಕವಾಗಿ ಆಚರಿಸಲು ಸರ್ಕಾರ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ರಾಜ್ಯ ಅಧ್ಯಕ್ಷರಾದ ಬಿ. ಪ್ರೇಮ ತಿಳಿಸಿದ್ದಾರೆ.

ಬೇಡಿಕೆಗಳು;

1. ಅಂಗನವಾಡಿ ಕಾರ್ಯಕರ್ತೆಯರಿಗೆ 25,000-00 ರೂ ಹಾಗೂ ಅಂಗನವಾಡಿ ಸಹಾಯಕಿಯರಿಗೆ 12,000-00 ಸಾವಿರ ರೂ. ಕನಿಷ್ಠ ವೇತನವನ್ನು ನಿಗದಿಮಾಡಬೇಕು.

2) ಕಾರ್ಯಕರ್ತೆಯರನ್ನು ಸಿ.ದರ್ಜೆ ಎಂದು ಮತ್ತು ಸಹಾಯಕಿಯರನ್ನು ಡಿ. ದರ್ಜೆ ಸರ್ಕಾರಿ ನೌಕರರೆಂದು ಪರಿಗಣಿಸಿ, ಗುಜರಾತ್ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ನಮ್ಮ ಕರ್ನಾಟಕದಲ್ಲಿಯೂ ಜಾರಿ ಮಾಡಿ ಸರ್ಕಾರಿ ನೌಕರರೆಂದು ಪರಿಗಣಿಸಬೇಕು .

Recent Articles

spot_img

Related Stories

Share via
Copy link