ಏರುಗತಿಯಲ್ಲಿ ಸಾಗಿದೆ ಷೇರುಪೇಟೆ …..!

ಮುಂಬೈ: 

   2025ರ ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ಶನಿವಾರದ ಆರಂಭಿಕ ಷೇರುಪೇಟೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಏರಿಕೆಯಾಗಿರುವುದು ಕಂಬಂದಿವೆ. ಬಿಎಸ್ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 136.44 ಅಂಕಗಳ ಜಿಗಿತ ಕಂಡು ಬಂದಿದ್ದು, 77,637.01ಕ್ಕೆ ತಲುಪಿತು. ಎನ್ಎಸ್ಇ ನಿಫ್ಟಿ 20.2 ಅಂಕಗಳ ಏರಿಕೆಯಾಗಿ 23,528.60ಕ್ಕೆ ತಲುಪಿತು.

   ಐಟಿಸಿ ಹೋಟೆಲ್ಸ್, ಇಂಡಸ್ಇಂಡ್ ಬ್ಯಾಂಕ್, ಮಹೀಂದ್ರಾ & ಮಹೀಂದ್ರಾ, ಸನ್ ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಎನ್ಟಿಪಿಸಿ ಅತಿ ಹೆಚ್ಚು ಲಾಭ ಗಳಿಸಿದೆ. ಟೈಟಾನ್, ಕೋಟಕ್ ಮಹೀಂದ್ರಾ ಬ್ಯಾಂಕ್, ನೆಸ್ಲೆ, ಏಷ್ಯನ್ ಪೇಂಟ್ಸ್, ಎಚ್ಸಿಎಲ್ ಟೆಕ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳ ಮೌಲ್ಯವು ಇಳಿಕೆ ಕಂಡು ಬಂದಿದೆ.

  “ಕೇಂದ್ರ ಬಜೆಟ್ ಹಿನ್ನೆಲೆ, ಬಜೆಟ್ನಲ್ಲಿ ಘೋಷಣೆಗಳು ಮಾರುಕಟ್ಟೆಯ ಮೇಲೆ ತ್ವರಿತವಾದ ಪರಿಣಾಮಗಳನ್ನು ಬೀರುತ್ತವೆ. ಮಧ್ಯಮ ವರ್ಗಕ್ಕೆ ಪರಿಹಾರ ಒದಗಿಸಲು ಹಾಗೂ ಬಳಕೆಯನ್ನು ಹೆಚ್ಚಿಸಲು ವೈಯಕ್ತಿಕ ಆದಾಯ ತೆರಿಗೆ ಕಡಿತಗೊಳಿಸುವುದು ಬಜೆಟ್ನ ಮುಖ್ಯ ನಿರೀಕ್ಷೆಯಾಗಿವೆ. ಇದರಿಂದ ಮಾರುಕಟ್ಟೆಯಲ್ಲಿ ಚೇತರಿಕೆಗೆ ಅನುಕೂಲ ಆಗಲಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ತಿಳಿಸಿದ್ದಾರೆ.  

   ಮುಂಬರುವ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.3ರಿಂದ 6.8 ರಷ್ಟು ವಿಸ್ತರಿಸುವ ಸಾಧ್ಯತೆಯಿದೆ. ಇದು ಅಭಿವೃದ್ಧಿ ಹೊಂದಿದ ದೇಶವಾಗಲು ಅಗತ್ಯವಿರುವ ಪ್ರಮಾಣಕ್ಕಿಂತ ತೀರಾ ಕಡಿಮೆಯಾಗಿದೆ. ಜೊತೆಗೆ ಬೆಳವಣಿಗೆಯನ್ನು ಉತ್ತೇಜಿಸಲು ಭೂಮಿ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿ ಅನಿಯಂತ್ರಣ ಮತ್ತು ಸುಧಾರಣೆಗಳ ಅಗತ್ಯವಿದೆ ಎಂದು ಸರ್ಕಾರದ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ ಹೇಳಿದೆ.

Recent Articles

spot_img

Related Stories

Share via
Copy link