ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ: 12 ಲಕ್ಷ ರೂ ವರೆಗೆ ಆದಾಯ ತೆರಿಗೆ ಇಲ್ಲ!

ಹೊಸದಿಲ್ಲಿ:

    2025ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಧ್ಯಮ ವರ್ಗದ ವೇತನದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ವಾರ್ಷಿಕ 12 ಲಕ್ಷ ರೂಪಾಯಿ ತನಕ ಆದಾಯಕ್ಕೆ ಇನ್ನು ಮುಂದೆ ಆದಾಯ ತೆರಿಗೆ ಇಲ್ಲ. ಇದು ಹೊಸ ತೆರಿಗೆ ಪದ್ಧತಿಯಲ್ಲಿ ಅನ್ವಯವಾಗಲಿದೆ. ವೇತನದಾರರಿಗೆ 12,75,000 ರೂಪಾಯಿ ತನಕ ಯಾವುದೇ ಆದಾಯ ತೆರಿಗೆ ಕಟ್ಟುವ ಅಗತ್ಯವಿಲ್ಲ. 

    ಮಧ್ಯಮ ವರ್ಗದ ತೆರಿಗೆಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಮತ್ತು ಅವರಿಗೆ ಹೆಚ್ಚಿನ ಹಣವನ್ನು ನೀಡುವ ಗುರಿಯೊಂದಿಗೆ ಸರ್ಕಾರವು ಹೊಸ ತೆರಿಗೆ ಶ್ರೇಣಿಗಳನ್ನು ರೂಪಿಸಿದೆ. ಇದು ಮನೆಯ ಬಳಕೆ, ಉಳಿತಾಯ ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತದೆ. 

   ಮುಂದಿನ ವಾರ ಹೊಸ ಆದಾಯ ತೆರಿಗೆ ವಿಧೇಯಕ ಮಂಡನೆಯಾಗಲಿದೆ. ಅದರಲ್ಲಿ ಮತ್ತಷ್ಟು ವಿವರಗಳು ತಿಳಿಯಲಿದೆ. ಮುಖ್ಯವಾಗಿ ಸರ್ಕಾರ ನೇರ ತೆರಿಗೆ ಪದ್ಧತಿಯನ್ನು ಮತ್ತಷ್ಟು ಸರಳ ಮತ್ತು ಸುಧಾರಣೆ ಮಾಡುವ ಉದ್ದೇಶದಿಂದ ಈ ವಿಧೇಯಕವನ್ನು ತರುತ್ತಿದೆ.

ಹೊಸ ತೆರಿಗೆ ದರದ ಶ್ರೇಣಿ ಇಂತಿದೆ

ಶೂನ್ಯದಿಂದ 4,00,000 ರೂ. – ತೆರಿಗೆ ಇಲ್ಲ(ರಿಬೆಟ್‌ ಸಿಕ್ಕಾಗ)

4,00.000 ರೂ.ಗಳಿಂದ 8,00,000 – 5%

8,00,000 ರೂ.ಗಳಿಂದ 12,00,000 ರೂ : 10%

12,00,001 ರೂ.ಗಳಿಂದ 16 ಲಕ್ಷ ರೂ. : 15%

16,00,001 ರೂ.ಗಳಿಂದ 20 ಲಕ್ಷ ರೂ.: 20%

20,00,001 ರೂ.ಗಳಿಂದ 24 ಲಕ್ಷ ರೂ. ತನಕ 30% 

   ತೆರಿಗೆ ಹೊರೆಯನ್ನು ಇಳಿಸಿದ ಪರಿಣಾಮ ಮಧ್ಯಮ ವರ್ಗದ ವೇತನದಾರರಿಗೆ ಕೈಯಲ್ಲಿ ಹಣ ಉಳಿಯಲಿದೆ. ಇನ್ನು ಮುಂದೆ 12 ಲಕ್ಷ ರೂ. ತನಕ ಆದಾಯ ಇರುವ ಮಧ್ಯಮ ವರ್ಗದ ವೇತನದಾರರು ಯಾವುದೇ ನೇರ ತೆರಿಗೆ ಕಟ್ಟಬೇಕಾಗಿಲ್ಲ. ಇದುವರೆಗೆ ಇವರು ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ಜಿಎಸ್‌ಟಿಯನ್ನೂ ಕಟ್ಟಬೇಕಾಗಿರುತ್ತಿತ್ತು. ಹೀಗಾಗಿ ಕೈಯಲ್ಲಿ ಖರ್ಚಿಗೆ ದುಡ್ಡು ಉಳಿಯುತ್ತಿರಲಿಲ್ಲ. ಇದು ಕೇಂದ್ರ ಸರ್ಕಾರದ ಮಹತ್ವದ ತೆರಿಗೆದಾರ ಸ್ನೇಹಿ ಘೋಷಣೆಯಾಗಿದೆ. ತೆರಿಗೆ ಉಳಿತಾಯದ ಹಣದಿಂದ ಜನರು ಖರ್ಚುಗಳನ್ನು ಮಾಡಬಹುದು. ಬೇರೆ ಕಡೆ ಹೂಡಿಕೆ ಮಾಡಬಹುದು. ಇದರಿಂದ ಮತ್ತೆ ಆರ್ಥಿಕ ಚಟುವಟಿಕೆಗೂ ಪುಷ್ಟಿ ಸಿಗಲಿದೆ. 

    ಸಣ್ಣ ತೆರಿಗೆದಾರರಿಗೆ ಬಾಡಿಗೆ ಮೇಲಿನ ಟಿಡಿಎಸ್‌ ಮಿತಿಯನ್ನೂ ಈಗಿನ 2.40 ಲಕ್ಷ ರೂ.ಗಳಿಂದ 6 ಲಕ್ಷ ರೂ.ಗೆ ಏರಿಸಲಾಗಿದೆ. ಹಿರಿಯ ನಾಗರಿಕರಿಗೆ ಡೆಪಾಸಿಟ್‌ಗಳ ಬಡ್ಡಿಗೆ ಸಂಬಂಧಿಸಿದ ಟಿಡಿಎಸ್‌ ಮಿತಿಯನ್ನು ಈಗಿನ 50,000 ರೂ.ಗಳಿಂದ 1 ಲಕ್ಷ ರೂ.ಗೆ ಏರಿಸಲಾಗಿದೆ. ಅಂದರೆ ಒಂದು ಲಕ್ಷ ರೂ. ತನಕ ಡೆಪಾಸಿಟ್‌ ಬಡ್ಡಿ ಅದಾಯಕ್ಕೆ ಟಿಡಿಎಸ್‌ ಕಡಿತವಾಗುವುದಿಲ್ಲ.

Recent Articles

spot_img

Related Stories

Share via
Copy link