ವಾಹನ ಸವಾರರರೇ ಹುಷಾರ್‌ : ಈ ಕೆಲಸ ಮಾಡಿದ್ರೆ ನಿಮ್ಮ ಲೈಸೆನ್ಸ್‌ ರದ್ದಾಗುತ್ತೆ….!

ಬೆಂಗಳೂರು:

   ಪಾದಚಾರಿ ಮಾರ್ಗದ ಮೇಲೆ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಗರದ ಸಂಚಾರಿ ಪೊಲೀಸರು ಮುಂದಾಗಿದ್ದಾರೆ.ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವವರ ವಾಹನ ಪರವಾನಗಿಯನ್ನು (ಡಿಎಲ್) ರದ್ದು ಮಾಡಲು ನಿರ್ಧಾರ ಕೈಗೊಂಡಿದ್ದಾರೆ.

   ಪಾದಚಾರಿಗಳ ಸುರಕ್ಷತೆ ದೃಷ್ಠಿಯಿಂದ ಸಂಚಾರಿ ಪೊಲೀಸರು ಈ ನಿಯಮ ಜಾರಿಗೆ ತಂದಿದ್ದಾರೆ. ಈ ಹಿಂದೆ ಪಾದಚಾರಿ ಮಾರ್ಗದ​​ ಮೇಲೆ ಗಾಡಿ ಓಡಿಸಿದರೆ ಸಂಚಾರಿ ಪೊಲೀಸರು ದಂಡ ಹಾಕುತ್ತಿದ್ದರು. ದಂಡ ವಿಧಿಸಿದರೂ ಸವಾರರು ಮಾತ್ರ ನಿಯಮ ಉಲ್ಲಂಘಿಸುವುದನ್ನು ಮುಂದುವರೆಸಿದ್ದಾರೆ.

  ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಕಠಿಣ ಕ್ರಮಕ್ಕೆ ಮುಂಂದಾಗಿದ್ದಾರೆ. ನಿಯಮ ಉಲ್ಲಂಘಿಸುವ ಸವಾರರ ಡ್ರೈವಿಂಗ್​ ಲೈಸೆನ್ಸ್​​ ಅಮಾನತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ ಮೊದಲ ಬಾರಿಗೆ ಸಿಕ್ಕಿಬಿದ್ದರೆ ದಂಡ ಹಾಕಲಾಗುತ್ತದೆ. ಮತ್ತೆ ಮತ್ತೆ ಸಿಕ್ಕಿಬಿದ್ದರೇ ಲೈಸೆನ್ಸ್​ ಅಮಾನತು ಮಾಡುವಂತೆ ಸಂಚಾರಿ ಪೊಲೀಸರು ಶಿಪಾರಸ್ಸು ಮಾಡಲಿದ್ದಾರೆ.

Recent Articles

spot_img

Related Stories

Share via
Copy link