ನವದೆಹಲಿ:
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ಮುಂಬೈನ ಬಾಂದ್ರಾ ವೆಸ್ಟ್ ಅಪಾರ್ಟ್ಮೆಂಟ್ ಅನ್ನು 22.50 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟಂಟ್ ಸ್ಕ್ವೇರ್ ಯಾರ್ಡ್ಸ್ ತಿಳಿಸಿದೆ.ಈ ಕುರಿತು ಸೋಮವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಈ ವಹಿವಾಟಿಗೆ ಸಂಬಂಧಿಸಿದ ಆಸ್ತಿ ನೋಂದಣಿ ದಾಖಲೆಗಳನ್ನು ಸ್ಕ್ವೇರ್ ಯಾರ್ಡ್ಸ್ ಪರಿಶೀಲಿಸಿದೆ ಎಂದಿದೆ.
‘ಸೋನಾಕ್ಷಿ ಸಿನ್ಹಾ ಅವರು ಮಾರಾಟ ಮಾಡಿರುವ ಆಪಾರ್ಟ್ಮೆಂಟ್ 81 Aureate ನಲ್ಲಿದೆ. ಇದು MJ Shah ಗ್ರೂಪ್ನ ಯೋಜನೆಯಾಗಿದ್ದು, ಇದು 4.48 ಎಕರೆಗಳಲ್ಲಿ ಹರಡಿದೆ ಮತ್ತು 4 BHK ಅಪಾರ್ಟ್ಮೆಂಟ್ಗಳನ್ನು ಒಳಗೊಂಡಿದೆ. ಈ ಅಪಾರ್ಟ್ಮೆಂಟ್ ಸುಮಾರು 4,632 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.ಈ ವಹಿವಾಟಿಗೆ 1.35 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಮತ್ತು 30,000 ರೂಪಾಯಿ ನೋಂದಣಿ ಶುಲ್ಕ ಪಾವತಿಸಲಾಗಿದೆ.
‘ಅದೇ ಅಪಾರ್ಟ್ಮೆಂಟ್ ಅನ್ನು ಸೋನಾಕ್ಷಿ ಸಿನ್ಹಾ ಅವರು 2020ರ ಮಾರ್ಚ್ನಲ್ಲಿ 14 ಕೋಟಿ ರೂಪಾಯಿಗೆ ಖರೀದಿಸಿದ್ದರು. ಈಗ ಅದನ್ನು 8 ಕೋಟಿ ರೂ. ಲಾಭದೊಂದಿಗೆ ಮಾರಾಟ ಮಾಡಲಾಗಿದೆ. ಸೋನಾಕ್ಷಿ ಸಿನ್ಹಾ ಅವರು 81 Aureate ನಲ್ಲಿಯೇ ಮತ್ತೊಂದು ಅಪಾರ್ಟ್ಮೆಂಟ್ ಹೊಂದಿದ್ದಾರೆ’ ಎಂದಿದೆ.