ದೇಶದಲ್ಲಿ ನಾನ್‌ ವೆಜ್‌ ಬ್ಯಾನ್‌ ಮಾಡಿ : ಶತ್ರುಘ್ನ ಸಿನ್ಹಾ

ನವದೆಹಲಿ :

   ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಅವರು ಮಾತನಾಡುವಾಗ ಎಡವಿ ಸಾಕಷ್ಟು ವಿವಾದ ಮಾಡಿಕೊಂಡಿದ್ದು ಇದೆ. ಈಗ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುನಿಫಾರ್ಮ್​ ಸಿವಿಲ್ ಕೋಡ್) ಜಾರಿಗೆ ಬಂದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ದೇಶಾದ್ಯಂತ ಮಾಂಸಾಹಾರವನ್ನು ಬ್ಯಾನ್ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅವರ ಹೇಳಿಕೆ ಈಗ ಸಾಕಷ್ಟು ಟೀಕೆಗಳನ್ನು ಎದುರಿಸಿದೆ.

   ‘ಏಕರೂಪ ನಾಗರಿಕ ಸಂಹಿತೆಯಲ್ಲಿ ಹಲವು ಸೂಕ್ಷ್ಮ ವಿಚಾರ ಮತ್ತು ಲೋಪದೋಷಗಳಿವೆ. ಕೇವಲ ಗೋಮಾಂಸವಲ್ಲ, ಒಟ್ಟಾರೆಯಾಗಿ ಮಾಂಸಾಹಾರವನ್ನೇ ದೇಶದಲ್ಲಿ ನಿಷೇಧಿಸಬೇಕು. ಆದರೆ ಉತ್ತರ ಭಾರತದಲ್ಲಿ ಹೇರಬಹುದಾದ ನಿಯಮಗಳನ್ನು ಈಶಾನ್ಯ ರಾಜ್ಯಗಳಲ್ಲಿ ಹೇರಲು ಸಾಧ್ಯವಿಲ್ಲ. ಯುಸಿಸಿ ನಿಬಂಧನೆಗಳನ್ನು ರಚಿಸುವ ಮೊದಲು ಸರ್ವಪಕ್ಷ ಸಭೆ ನಡೆಸಬೇಕು’ ಎಂದು ಅವರು ಹೇಳಿದ್ದಾರೆ.

  ಶತ್ರುಘ್ನ ಅವರ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ‘ಯುಸಿಸಿಯಲ್ಲಿ ಯಾವ ಆಹರ ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬುದನ್ನು ಹೇಳುತ್ತಾರಾ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ‘ಯುಸಿಸಿ ಆಹಾರ ಮತ್ತು ಅಭ್ಯಾಸಗಳ ಬಗ್ಗೆ ಇಲ್ಲ. ಇದು ಮದುವೆ ಮತ್ತು ಆಸ್ತಿಗಳ ಹಕ್ಕಿನ ಬಗ್ಗೆ ಇರುವ ಕಾಯ್ದೆ’ ಎಂದು ಕೆಲವರು ಹೇಳಿದ್ದಾರೆ.‌ 

   ಈ ವಿಚಾರದಲ್ಲಿ ಸತ್ರುಘ್ನ ಸಿನ್ಹಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಮೊದಲು ಶತ್ರುಘ್ನ ಸಿನ್ಹಾ ಮಗಳು ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್​ನ ವಿವಾಹ ಆದಾಗ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಮದುವೆಗೆ ಶತ್ರುಘ್ನ ಅವರ ಒಪ್ಪಿಗೆ ಇಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅವರು ಒಪ್ಪಿ ವಿವಾಹ ಮಾಡಿಕೊಟ್ಟರು. ಈ ಬಗ್ಗೆ ಟೀಕೆ ಮಾಡಿದವರ ವಿರುದ್ಧ ಶತ್ರುಘ್ನ ಸಿನ್ಹಾ ಕಿಡಿಕಾರಿದ್ದರು.

Recent Articles

spot_img

Related Stories

Share via
Copy link