ಬೆಂಗಳೂರು ಏರ್​ ಶೋ: ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ….!

ಬೆ೦ಗಳೂರು

    ಬೆ೦ಗಳೂರು ನಗರ ಯಲಹಂಕ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆಬ್ರವರಿ 10 ರಿಂದ 14 ರ ರವರೆಗೆ ಪ್ರತಿಷ್ಠಿತ ಏರೋ ಇಂಡಿಯಾ 2025 ವೈಮಾನಿಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಫೆಬ್ರವರಿ 10 ರಂದು ಬೆಳಿಗ್ಗೆ ಕಾರ್ಯಕ್ರಮದ ಉದ್ಭಾಟನಾ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ರಾಷ್ಟೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹಲವಾರು ಗಣ್ಯರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ.

    ಈ ಕಾರ್ಯಕ್ರಮ ನಡೆಯುವ ಸ್ಥಳವು, ಯಲಹಂಕ ವಾಯುಸೇನಾ ನೆಲೆಯು ಬೆ೦ಗಳೂರು-ಬಳ್ಳಾರಿ ರಾಷ್ಟೀಯ ಹೆದ್ಬಾರಿ-44 (ಅಂತರಾಷ್ಟ್ರೀಯ ಏರ್‌ಪೊರ್ಟ್‌ ರಸ್ತೆ) ಗೆ ಹೊಂದಿಕೊಂಡಿದೆ. ಹೀಗಾಗಿ ರಸ್ತೆಯಲ್ಲಿ ಅಂತರಾಷ್ಟೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳು, ತುರ್ತು ಸೇವಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತವೆ. ಸುಗಮ ಸಂಚಾರದ ದೃಷ್ಟಿಯಿ೦ದ 10 ರಂದು ಬೆಳಗಿನ ಜಾವ 5 ಗಂಟೆಯಿಂದ 14 ರ ರಾತ್ರಿ 10 ರ ರವರೆಗೆ ಪರ್ಯಾರ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಎಲ್ಲೆಲ್ಲಿ ವನ್ ವೇ ಸಂಚಾರ?

  • ನಿಟ್ಟೆ ಮೀನಾಕ್ಷಿ ಕಾಲೇಜ್‌ ರಸ್ತೆ (ಪೂರ್ವದಿಕ್ಕಿನಿಂದ ಪಶ್ಚಿಮ ದಿಕ್ಕಿನ ಕಡೆಗೆ).
  • ಬಾಗಲೂರು ಮುಖ್ಯರಸ್ತೆ (ಪಶ್ಚಿಮದಿಂದ ಪೂರ್ವದಿಕ್ಕಿನ ಕಡೆಗೆ)

ಏರೋ ಇಂಡಿಯಾಗೆ ಬರುವವರಿಗೆ ಎಲ್ಲಿ ಪಾರ್ಕಿಂಗ್‌?

ಜಿಕೆವಿಕೆ ಕ್ಯಾಂಪಸ್​​ನಲ್ಲಿ ಉಚಿತ ಪಾರ್ಕಿಂಗ್‌: ಜಿಕೆವಿಕೆ ಪಾರ್ಕಿಂಗ್‌ ಸ್ಥಳದಿಂದ ಅಡ್ವಾ ಪಾರ್ಕಿಂಗ್‌ ಹಾಗೂ ಡೊಮೆಸ್ಟಿಕ್‌ ಪಾರ್ಕಿಂಗ್‌ ಸ್ಥಳಕ್ಕೆ ತೆರಳಲು ಹಾಗೂ ವಾಪಸ್‌ ಜಿಕೆವಿಕೆ ಪಾರ್ಕಿಂಗ್‌ ಸ್ಥಳಕ್ಕೆ ಬರಲು ಬಿಎಂಟಿಸಿ ವತಿಯಿಂದ ಉಚಿತ ಎಸಿ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಿದೆ ಎಂದು ಟ್ರಾಫಿಕ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಪೇಯ್ಡ್ ಪಾರ್ಕಿಂಗ್ ಎಲ್ಲಿ?

  • ಏರ್ ಡಿಸ್​ಪ್ಲೇ ಪ್ರದೇಶಕ್ಕೆ ಗೇಟ್‌ ನಂ 8 ಹಾಗೂ 9 ರ ಮುಖಾಂತರ ಪ್ರವೇಶಿಸಬಹುದಾಗಿದೆ.
  • ಡೊಮೆಸ್ಟಿಕ್‌ ಪಾರ್ಕಿಂಗ್‌: ಗೇಟ್‌ ನಂ 5ರ ಮುಖಾಂತರ ಪ್ರವೇಶಿಸಬಹುದಾಗಿದೆ.

ಸಂಚಾರ ಸಲಹೆ

  • ಬೆಂಗಳೂರು ಪೂರ್ವ ದಿಕ್ಕಿನಿಂದ ಅಡ್ವಾ (ಏರ್ ಡಿಸ್​ಪ್ಲೇ ಪ್ರದೇಶ) ಪಾರ್ಕಿಂಗ್‌ ಕಡೆ ಬರುವವರು ಕೆ.ಆರ್‌.ಪುರ – ನಾಗವಾರ ಜಂಕ್ಷನ್‌ – ಬಲತಿರುವು – ಥಣಿಸಂದ್ರ – ನಾರಾಯಣಪುರ ಕ್ರಾಸ್‌ – ಎಡ ತಿರುವು – ಟೆಲಿಕಾ೦ ಲೇಔಟ್‌ – ಜಕ್ಕೂರು ಕ್ರಾಸ್‌ – ಬಲ ತಿರುವು – ಯಲಹಂಕ ಬೈಪಾಸ್‌ – ಯಲಹಂಕ ಕಾಫಿ ಡೇ – ಪಾಲನಹಳ್ಳಿ ಗೇಟ್‌ ಸರ್ವಿಸ್‌ ರಸ್ತೆ (ಗ್ರೀಲ್‌ ಓಪನ್‌) ಫೋರ್ಡ್‌ ಷೋ ರೂಂ – ಎಡ ತಿರುವು – ನಿಟ್ಟೆ ಮೀನಾಕ್ಷಿ ಕಾಲೇಜ್‌ ರಸ್ತೆ ಯಿಂದ ಬರಬೇಕು ಎಂದು ಟ್ರಾಫಿಕ್ ಪೊಲೀಸ್ ಪ್ರಕಟಣೆ ತಿಳಿಸಿದೆ.
  • ಬೆಂಗಳೂರು ಪೂರ್ವ ದಿಕ್ಕಿನಿಂದ ಡೊಮೆಸ್ಟಿಕ್‌ ಪಾರ್ಕಿಂಗ್‌ ಕಡೆ ಬರುವವರು ಕೆ.ಆರ್‌. ಪುರ೦ – ಹೆಣ್ಣೂರು ಕ್ರಾಸ್‌ – ಕೊತ್ತನೂರು – ಗುಬ್ಬಿ ಕ್ರಾಸ್‌ – ಕಣ್ಣೂರು – ಬಾಗಲೂರು. – ಬಾಗಲೂರು ಲೇಔಟ್‌ – ರಜಾಕ್‌ ಪಾಳ್ಯ – ವಿದ್ಯಾನಗರ ಕ್ರಾಸ್‌ -ಹುಣಸಮಾರನಹಳ್ಳಿ ಮೂಲಕ ಬರಬಹುದಾಗಿದೆ.
  • ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಏರ್ ಡಿಸ್​ಪ್ಲೇ ಪ್ರದೇಶ) ಪಾರ್ಕಿಂಗ್‌ ಕಡೆ ಬರುವವರು ಗೊರಗುಂಟಿಪಾಳ್ಯ – ಬಿ.ಇ.ಎಲ್‌ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್‌ ಪಾಳ್ಯ ಸರ್ಕಲ್‌- ಉನ್ನಿಕೃಷ್ಣನ್‌ ರಸ್ತೆ – ಮದರ್‌ ಡೈರಿ ಜಂಕ್ಷನ್‌ – ಉನ್ನಿ ಕೃಷ್ಣನ್‌ ಜಂಕ್ಷನ್‌ – ಎಡ ತಿರುವು – ದೊಡ್ಡಬಳ್ಳಾಪುರ ರಸ್ತೆ ನಾಗೇನಹಳ್ಳಿ ಗೇಟ್‌ – ಬಲ ತಿರುವು – ಹಾರೋಹಳ್ಳಿ – ಗಂಟಗಾನಹಳ್ಳಿ ಸರ್ಕಲ್‌ ಬಲ ತಿರುವು ಪಡೆದು ಬರಬಹುದಾಗಿದೆ.
  • ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಡೊಮೆಸ್ಟಿಕ್‌ ಪಾರ್ಕಿಂಗ್‌ ಕಡೆಗೆ ಬರುವವರು ಗೊರಗುಂಟೆಪಾಳ್ಯ ದ. ಬಿ.ಇ.ಎಲ್‌ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್‌ ಪಾಳ್ಯ ಸರ್ಕಲ್‌- ಉನ್ನಿಕೃಷ್ಣನ್‌ ರಸ್ತೆ -ಮದರ್‌ ಡೈರಿ ಜಂಕ್ಷನ್‌ – ಉನ್ನಿಕೃಷ್ಣನ್‌ ಜಂಕ್ಷನ್‌ – ಎಡ ತಿರುವು – ದೊಡ್ಡಬಳ್ಳಾಪುರ ರಸ್ತೆ -ರಾಜಾನುಕುಂಟೆ – ಬಲ ತಿರುವು -ಅದ್ದಿಗಾನಹಳ್ಳಿ -ತಿಮ್ಮಸಂದ್ರ – ಎಂ.ವಿ.ಐ.ಟಿ ಕ್ರಾಸ್‌ – ವಿದ್ಯಾನಗರ ಕ್ರಾಸ್‌ — ಯು ತಿರುವು – ಹುಣಸಮಾರನಹಳ್ಳಿ ಮೂಲಕ ಬರಬೇಕು ಎಂದು ಪ್ರಕಟಣೆ ತಿಳಿಸಿದೆ.
  • 4 ಬೆಂಗಳೂರು ದಕ್ಷಿಣ ದಿಕ್ಕಿನಿಂದ ಏರ್ ಶೋ ಪಾರ್ಕಿಂಗ್‌ ಕಡೆಗೆ ಬರುವವರು ಮೈಸೂರು ರಸ್ತೆ-ನಾಯಂಡನಹಳ್ಳಿ-ಚಂದ್ರಾ ಲೇಔಟ್‌-ಗೊರಗುಂಟಿಪಾಳ್ಯ-ಬಿ.ಇ.ಎಲ್‌ ವೃತ್ತ- ಗಂಗಮ್ಮ ವೃತ್ತ -ಎಂ.ಎಸ್‌ ಪಾಳ್ಯ ಸರ್ಕಲ್‌-ಮದರ್‌ ಡೈರಿ ಜಂಕ್ಷನ್‌ -ಉನ್ನಿ ಕೃಷ್ಣನ್‌ ಜ೦ಕ್ಷನ್‌ – ದೊಡ್ಡಬಳ್ಳಾಪುರ ಮುಖ್ಯ ರಸ್ತೆ -ನಾಗೇನಹಳ್ಳಿ ಗೇಟ್‌ -ಬಲ ತಿರುವು -ಹಾರೋಹಳ್ಳಿ ಗ೦ಟಗಾನಹಳ್ಳಿ ಸರ್ಕಲ್‌ ಮೂಲಕ ಬರಬೇಕು ಎಂದು ತಿಳಿಸಲಾಗಿದೆ.
  • ಬೆಂಗಳೂರು ದಕ್ಷಿಣ ದಿಕ್ಕಿನಿಂದ ಡೊಮೆಸ್ಟಿಕ್‌ ಪಾರ್ಕಿಂಗ್‌ ಕಡೆಗೆ ಬರುವವರು ಮೈಸೂರು ರಸ್ತೆ-ನಾಯಂಡನಹಳ್ಳಿ -ಚಂದ್ರಾ ಲೇಔಟ್‌- ಗೊರಗುಂಟೆಪಾಳ್ಯ -ಬಿ.ಇ.ಎಲ್‌ ವೃತ್ತ – ಗಂಗಮ್ಮ ವೃತ್ತ -ಎಂ.ಎಸ್‌ ಪಾಳ್ಯ ಸರ್ಕಲ್‌- ಮದರ್‌ ಡೈರಿ-ಉನ್ನಿ ಕೃಷ್ಣನ್‌ ಜ೦ಕ್ಟನ್‌ – ಎಡ ತಿರುವು-ದೊಡ್ಡಬಳ್ಳಾಪುರ ರಸ್ತೆ ರಾಜಾನುಕುಂಟೆ- ಬಲ ತಿರುವು- ಅದ್ದಿಗಾನಹಳ್ಳಿ -ಎಂ.ವಿ.ಐ.ಟಿ ಕ್ರಾಸ್‌- ವಿದ್ಯಾನಗರ ಕ್ರಾಸ್‌-ಯು ತಿರುವು ಪಡೆದು – ಹುಣಸಮಾರನಹಳ್ಳಿ ಮೂಲಕ ಬರಬೇಕು.

ವಿಮಾನ ನಿಲ್ದಾಣಕ್ಕೆ ಹೋಗಲು ಪರ್ಯಾಯ ಮಾರ್ಗ

  • ಬೆಂಗಳೂರು ಪೂರ್ವ ದಿಕ್ಕಿನಿಂದ ಹೋಗುವವರು ಕೆ.ಆರ್‌.ಪುರಂ-ಹೆಣ್ಣೂರು ಕ್ರಾಸ್‌ -ಕೊತ್ತನೂರು – ಗುಬ್ಬಿ ಕ್ರಾಸ್‌ – ಕಣ್ಣೂರು – ಬಾಗಲೂರು – ಮೈಲನಹಳ್ಳಿ – ಬೇಗೂರು ನೈರುತ್ಯ ಪ್ರವೇಶದ್ವಾರದ ಮೂಲಕ ತಲುಪಬಹುದು.
  • ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಹೋಗುವವರು ಗೊರಗುಂಟೆಪಾಳ್ಯ – ಬಿ.ಇ.ಎಲ್‌ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್‌ ಪಾಳ್ಯ ಸರ್ಕಲ್‌ – ಮದರ್‌ ಡೈರಿ – ಉನ್ನಿ ಕೃಷ್ಣನ್‌ ಜಂಕ್ಚನ್‌- ಎಡ ತಿರುವು – ದೊಡ್ಡಬಳ್ಳಾಪುರ ರಸ್ತೆ ರಾಜಾನುಕುಂಟೆ – ಅದ್ದಿಗಾನಹಳ್ಳಿ – ತಿಮ್ಮಸಂದ್ರ – ಎಂ.ವಿ.ಐ.ಟಿ ಕ್ರಾಸ್‌ – ವಿದ್ಯಾನಗರ ಕ್ರಾಸ್‌ ಮೂಲಕ ತಲುಪಬಹುದು.
  • ಬೆಂಗಳೂರು ದಕ್ಷಿಣ ದಿಕ್ಕಿನಿಂದ ತೆರಳುವವರು ಮೈಸೂರು ರಸ್ತೆ- ನಾಯಂಡನಹಳ್ಳಿ- ಚಂದ್ರಾ ಲೇಔಟ್‌ – ಗೊರಗುಂಟೆಪಾಳ್ಯ-ಬಿಇಎಲ್‌ ವೃತ್ತ – ಗಂಗಮ್ಮ ವೃತ್ತ -ಎಂ.ಎಸ್‌ ಪಾಳ್ಯ ಸರ್ಕಲ್‌- ಮದರ್‌ಡೈರಿ ಜಂಕ್ಷನ್‌ – ಉನ್ನಿಕೃಷ್ಣನ್‌ ಜ೦ಕ್ಷನ್‌ – ಎಡ ತಿರುವು – ದೊಡ್ಡಬಳ್ಳಾಪುರ ರಸ್ತೆ -ರಾಜಾನುಕುಂಟೆ – ಅದ್ದಿಗಾನಹಳ್ಳಿ-ಎಂ.ವಿ.ಐ.ಟಿ ಕ್ರಾಸ್‌ ವಿದ್ಯಾನಗರ ಕ್ರಾಸ್‌ ಮೂಲಕ ಏರ್​ಪೋರ್ಟ್ ತಲುಪಬಹುದು.

ಲಾರಿ, ಟ್ರಕ್, ಬಸ್ ಸೇರಿ ಭಾರಿ ವಾಹನ ಸಂಚಾರ ನಿರ್ಬಂಧ ಎಲ್ಲೆಲ್ಲಿ ?

  • ಬೆ೦ಗಳೂರು-ಬಳ್ಳಾರಿ ರಸ್ತೆಯಲ್ಲಿ, ಮೇಖ್ರಿ ವೃತ್ತದಿಂದ-ಎ೦ಂವಿಐಟಿ ಕ್ರಾಸ್‌ ವರೆಗೆ ಮತ್ತು ಎ೦ಂವಿಐಟಿ ಕ್ರಾಸ್​​ನಿಂದ ಮೇಖ್ರಿ ವೃತ್ತದ ವರೆಗೆ, ರಸ್ತೆಯ ಎರಡೂ ದಿಕ್ಕಿನಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.
  • ಗೊರಗುಂಟೆ ಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್‌ ವರೆಗೆ ರಸ್ತೆಯ ಎರಡು ದಿಕ್ಕಿನಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.
  • ನಾಗವಾರ ಜಂಕ್ಷನ್‌ನಿಂದ – ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ಬಾಗಲೂರು ಮುಖ್ಯ ರಸ್ತೆ ರೇವಾ ಕಾಲೇಜ್‌ ಜಂಕ್ಷನ್‌ವರೆಗೆ ಸಂಚಾರವನ್ನು ನಿಷೇಧಿಸಲಾಗಿದೆ.
  • ಹೆಸರಘಟ್ಟ ಮತ್ತು ಚಿಕ್ಕಬಾಣಾವರ ಕಡೆಯಿ೦ದ ಬೆ೦ಗಳೂರು ನಗರದ ಕಡೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ವಾಹನ ನಿಲುಗಡೆ ನಿಷೇಧ (ಎಲ್ಲಾ ಮಾದರಿಯ ವಾಹನಗಳಿಗೆ ರಸ್ತೆಯ ಎರಡೂ ಬದಿಗಳಲ್ಲಿ)

  • ನಾಗೇನಹಳ್ಳಿ ಗೇಟ್‌ನಿಂದ ಗಂಟಿಗಾನಹಳ್ಳಿ ಮಾರ್ಗವಾಗಿ ಬೆಂಗಳೂರು-ಬಳ್ಳಾರಿ ರಸ್ತೆಯನ್ನು ಸೇರುವ ಫೋರ್ಡ್‌ ಷೋರೂಂ ಕ್ರಾಸ್‌ವರೆಗೆ (ಬಿಬಿ ರಸ್ತ) ವರೆಗೆ.
  • ಬೆ೦ಗಳೂರು-ಬಳ್ಳಾರಿ ರಸ್ತೆಯ ಮೇಖ್ರಿ ಸರ್ಕಲ್‌ ನಿಂದ-ದೇವನಹಳ್ಳಿ ವರೆಗೆ.
  • ಬಾಗಲೂರು ಕ್ರಾಸ್‌ ಜಂಕ್ಷನ್‌ ನಿಂದ ಬಾಗಲೂರು ಮುಖ್ಯ ರಸ್ತೆಯ ಮಾರ್ಗವಾಗಿ ಸಾತನೂರು ವರೆಗೆ.
  • ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ರೇವಾ ಕಾಲೇಜ್‌ ಜಂಕ್ಷನ್‌ ವರೆಗೆ.
  • ಎಫ್‌ಟಿಐ ಜಂಕ್ಷನ್‌ನಿಂದ ಹೆಣ್ಣೂರು ಕ್ರಾಸ್‌ ಜಂಕ್ಷನ್‌ ವರೆಗೆ.
  • ಹೆಣ್ಣೂರು ಕ್ರಾಸ್‌ ನಿಂದ ಬೇಗೂರು ಬ್ಯಾಕ್‌ ಗೇಟ್‌ ವರೆಗೆ.
  • ನಾಗೇನಹಳ್ಳಿ ಗೇಟ್‌ ಜಂಕ್ಷನ್‌ ನಿಂದ ಯಲಹಂಕ ಸರ್ಕಲ್‌ ವರೆಗೆ.
  • ಎ೦ವಿಐಟ ಕ್ರಾಸ್‌ ನಿಂದ ನಾರಾಯಣಪುರ ರೈಲ್ವೇ ಕ್ರಾಸ್‌ ವರೆಗೆ.
  • ಕೋಗಿಲು ಕ್ರಾಸ್‌ ಜಂಕ್ಷನ್‌ ನಿ೦ದ ಕಣ್ಣೂರು ಜಂಕ್ಷನ್‌ ವರೆಗೆ.
  • ಮತ್ತಿಕೆರೆ ಕ್ರಾಸ್‌ ನಿಂದ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಉನ್ನಿಕೃಷ್ಣನ್‌ ಜಂಕ್ಷನ್‌ ವರೆಗೆ.
  • ಬಾಲಸಹಳ್ಳಿ ಕ್ರಾಸ್‌ ಜಂಕ್ಷನ್‌ ನಿಂದ ಗ೦ಗಮ್ಮ ಸರ್ಕಲ್‌ ಜಂಕ್ಷನ್‌ ವರೆಗೆ.

Recent Articles

spot_img

Related Stories

Share via
Copy link