BJP ಮುಖಂಡ ರಾಜೇಶ್ ಬನ್ನೂರು ಮನೆ ನೆಲಸಮ….!

ಮಂಗಳೂರು:

   ದೇವಾಲಯದ ಪಶ್ಚಿಮ ಭಾಗದಲ್ಲಿರುವ ಬಿಜೆಪಿ ಕಾರ್ಯಾಧ್ಯಕ್ಷ ಮತ್ತು ಮಾಜಿ ಪರಿಷತ್ ಸದಸ್ಯ ರಾಜೇಶ್ ಬನ್ನೂರು ಅವರ ಮನೆ ಧ್ವಂಸಗೊಂಡ ನಂತರ ಶ್ರೀ ಮಹಾಲಿಂಗೇಶ್ವರ ದೇವಾಲಯ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.ನಿನ್ನೆ ತಡರಾತ್ರಿ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರ ಮನೆಯನ್ನು ನೆಲಸಮ ಮಾಡಲಾಗಿದೆ. ಮುಸುಕ ಧಾರಿಗಳು ಓಮ್ನಿ ಕಾರಿನಲ್ಲಿ ಬಂದು ನೆಲಸಮ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

   ಈ ವೇಳೆ ಮನೆಯಲ್ಲಿದ್ದ ನಾಯಿ ಮರಿ ಮಣ್ಣಿನಡಿ ಸಿಲುಕಿ ಸಾವನಪ್ಪಿದ್ದು, ಅಲ್ಲದೆ 32 ಗ್ರಾಂ ಚಿನ್ನ, ದಾಖಲೆ ಪತ್ರ, ಹಣಗಳನ್ನೆಲ್ಲ ಮುಸುಧಾರಿಗಳು ದೋಚಿದ್ದಾರೆ ಎಂದು ಆರೋಪಿಸಲಾಗಿದೆ.

   ಘಟನೆ ಬೆನ್ನಲ್ಲೇ ಈ ಹಿನ್ನಲೆ ಬಿಜೆಪಿ ಕಾರ್ಯಕರ್ತರು ಪುತ್ತೂರು ನಗರ ಪೋಲಿಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ಅಲ್ಲದೆ. ದರೋಡೆ ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು.

   ಬಳಿಕ ಪೊಲೀಸ್ ಠಾಣೆಗೆ ಆಗಮಿಸಿದ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು ಆಗಮಿಸಿ ಯಾವುದೇ ಸೂಚನೆ ನೀಡದೇ ರಾಜೇಶ್ ಬನ್ನೂರು ಅವರ ಮನೆ ಧ್ವಂಸಗೊಳಿಸಿದವರ ಮೇಲೆ ಕೇಸ್ ಹಾಕುವಂತೆ ಒತ್ತಾಯಿಸಿದರು.

   ಕೊನೇ ಕ್ಷಣದಲ್ಲಿ ಪುತ್ತೂರು ನಗರಠಾಣಾ ಪೊಲೀಸರು ಪುತ್ತೂರು ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಟ್ರಸ್ಟಿ ವಿನಯ ಸುವರ್ಣ ಮತ್ತು ಇತರರ ಮೇಲೆ ಕೇಸ್ ದಾಖಲಿಸಿದ್ದಾರೆ.ಪುತ್ತೂರು ಶಾಸಕ ಅಶೋಕ್ ರೈ ಸ್ಥಳಕ್ಕೆ ಭೇಟಿ ನೀಡಿ ಬನ್ನೂರು ಅವರ ಮನೆ ಧ್ವಂಸದಲ್ಲಿ ದೇವಾಲಯ ಆಡಳಿತ ಮಂಡಳಿಯ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.

  ರಾಜೇಶ್ ಬನ್ನೂರು ಅವರಲ್ಲಿ ಜಾಗದ ಹಕ್ಕುಪತ್ರ, ದಾಖಲೆಗಳಿದ್ದರೆ ಕೋರ್ಟಿಗೆ ಹೋಗಲಿ. ಈಗಲೂ ಹೋಗಿ ಸ್ಟೇ ತರಬಹುದು. 50-60 ವರ್ಷಗಳ ಹಿಂದೆ ಅವರ ಪೂರ್ವಜರಿಗೆ ಜಾಗ ಕೊಟ್ಟಿದ್ದು ಇರಬಹುದು. 30-40 ವರ್ಷಗಳಲ್ಲಿ ಏಳೆಂಟು ಕಟ್ಟಡಗಳಲ್ಲಿದ್ದವರು ಬಾಡಿಗೆ ಕೊಟ್ಟು ಸಂಪಾದನೆ ಮಾಡಿದ್ದಾರೆ. ಕೇಸು ಮಾಡಿದವರೂ ಈಗ ಜಾಗ ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದಾರೆ. ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಾರೆ. ಅವರ ಹಿಂದುತ್ವ ಎಂಥದ್ದು ಅಂತ ಎಲ್ಲರಿಗೂ ಗೊತ್ತಿದೆ. ಅವರಿಗಂತೂ ಅಭಿವೃದ್ಧಿ ಕೆಲಸ ಮಾಡಲು ಆಗಿಲ್ಲ. ಈಗ ಯಾಕೆ ಅಡ್ಡಿ ಬರುತ್ತಿದ್ದಾರೆ, ಪುತ್ತೂರಿನ ಜನತೆ ದೇವಸ್ಥಾನದ ಅಭಿವೃದ್ಧಿ ಕೆಲಸ ತಪ್ಪೆಂದು ಹೇಳಲಿ. ಇಲ್ಲಿಗೇ ಕೆಲಸ ನಿಲ್ಲಿಸುತ್ತೇವೆ ಎಂದು ತಿಳಿಸಿದರು.

   ದೇವಸ್ಥಾನದ ಅಭಿವೃದ್ಧಿಗಾಗಿ ದೇವಸ್ಥಾನದ ಜಮೀನಿನಲ್ಲಿ ಇದ್ದ ಎಂಟು ಮನೆಗಳ ತೆರವಿಗೆ ಸೂಚಿಸಲಾಗಿತ್ತು. ಈ ಪೈಕಿ ಆರು ಮನೆಗಳನ್ನು ಬಿಟ್ಟುಕೊಟ್ಟಿದ್ದರೆ, ಸ್ಥಳೀಯ ನ್ಯಾಯವಾದಿ ಹಾಗೂ ಬಿಜೆಪಿ ಮುಖಂಡರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವೇಳೆ ನ್ಯಾಯವಾದಿ ಮನೆಗೆ ಫೆ.2ರಂದು ಮರ ಬಿದ್ದಿತ್ತು. ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಜತೆಗೆ ಮಂಗಳವಾರ ಮಾತುಕತೆ ನಿಗದಿಯಾಗಿದ್ದರೂ ಅವರು ತೆರವಿಗೆ ಕಾಲಾವಕಾಶ ಕೋರಿದ್ದರು ಎನ್ನಲಾಗಿದೆ. ಆದರೆ ಮಂಗಳವಾರ ಮಧ್ಯರಾತ್ರಿ ರಾಜೇಶ್ ಬನ್ನೂರು ಸುಪರ್ದಿಯಲ್ಲಿದ್ದ ಮನೆಯನ್ನು ಜೆಸಿಬಿ ಬಳಸಿ ನೆಲಸಮ ಮಾಡಲಾಗಿದೆ. ಈ ಸಂದರ್ಭ ಮನೆಯಲ್ಲಿ ಸಾಕುಪ್ರಾಣಿಗಳನ್ನು ಹೊರತುಪಡಿಸಿದರೆ, ಬೇರೆ ಯಾರೂ ಇರಲಿಲ್ಲ. ಇದನ್ನು ಮಾಡಿದ್ದು ಯಾರು ಎಂಬುದು ಇಂದಿಗೂ ಖಚಿತವಾಗಿಲ್ಲ. ಆದರೆ ಪರಸ್ಪರ ಆರೋಪ ಪ್ರತ್ಯಾರೋಪಗಳು ಆರಂಭಗೊಂಡಿವೆ.

  ನಾನು ಮಂಗಳೂರಿನ ದೇವಸ್ಥಾನಕ್ಕೆ ಹೋಗಿ ಮರಳಿ ಬರುವಾಗ ರಾತ್ರಿ 2 ಗಂಟೆಯಾಗಿತ್ತು. ದೇವಾಲಯದ ವ್ಯವಸ್ಥಾಪನಾ ಸಮಿತಿಯವರೊಬ್ಬರಿಗೆ ಸೇರಿದ ಎರಡು ಹಿಟಾಚಿಯಲ್ಲಿ ಮನೆ ನೆಲಸಮ ಮಾಡುತ್ತಿದ್ದರು. ತಡೆಯಲು ಹೋದ ನನಗೆ ಬೆದರಿಕೆ ಹಾಕಿದ್ದು, ನಾನು ತಪ್ಪಿಸಿಕೊಂಡು ಹೋದೆ. ಇದಕ್ಕೆಲ್ಲಾ ಶಾಸಕ ಅಶೋಕ್ ರೈ ಪ್ರಚೋದನೆ ಕಾರಣ ಎಂದು ರಾಜೇಶ್ ಬನ್ನೂರು ಅವರು ಆರೋಪಿಸಿದ್ದಾರೆ.

   ರಾಜೇಶ್ ಬನ್ನೂರು ಅವರಲ್ಲಿ ಜಾಗದ ಹಕ್ಕುಪತ್ರ, ದಾಖಲೆಗಳಿದ್ದರೆ ಕೋರ್ಟಿಗೆ ಹೋಗಲಿ. ಈಗಲೂ ಹೋಗಿ ಸ್ಟೇ ತರಬಹುದು. 50-60 ವರ್ಷಗಳ ಹಿಂದೆ ಅವರ ಪೂರ್ವಜರಿಗೆ ಜಾಗ ಕೊಟ್ಟಿದ್ದು ಇರಬಹುದು. 30-40 ವರ್ಷಗಳಲ್ಲಿ ಏಳೆಂಟು ಕಟ್ಟಡಗಳಲ್ಲಿದ್ದವರು ಬಾಡಿಗೆ ಕೊಟ್ಟು ಸಂಪಾದನೆ ಮಾಡಿದ್ದಾರೆ. ಕೇಸು ಮಾಡಿದವರೂ ಈಗ ಜಾಗ ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದಾರೆ. ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಾರೆ. ಅವರ ಹಿಂದುತ್ವ ಎಂಥದ್ದು ಅಂತ ಎಲ್ಲರಿಗೂ ಗೊತ್ತಿದೆ. ಅವರಿಗಂತೂ ಅಭಿವೃದ್ಧಿ ಕೆಲಸ ಮಾಡಲು ಆಗಿಲ್ಲ. ಈಗ ಯಾಕೆ ಅಡ್ಡಿ ಬರುತ್ತಿದ್ದಾರೆ, ಪುತ್ತೂರಿನ ಜನತೆ ದೇವಸ್ಥಾನದ ಅಭಿವೃದ್ಧಿ ಕೆಲಸ ತಪ್ಪೆಂದು ಹೇಳಲಿ. ಇಲ್ಲಿಗೇ ಕೆಲಸ ನಿಲ್ಲಿಸುತ್ತೇವೆ ಎಂದು ಅಶೋಕ್ ರೈ ಹೇಳಿದರು.

Recent Articles

spot_img

Related Stories

Share via
Copy link