ಅಥಣಿ:
ಸತತ ಹದಿನಾಲ್ಕು ವರ್ಷಗಳ ಕಾಲ ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಂಡು ಹಲವಾರು ಸಮಾಜಕ್ಕೆ ಕೊಡುಗೆಗಳನ್ನು ಕೊಟ್ಟಿರುವ ಅನ್ನದಾತ ನಿಜಪ್ಪ ಹೆರೇಮನಿ ದಂಪತಿಗಳ ಕಾರ್ಯ ಶ್ಲಾಘನೀಯವಾದದ್ದು ಎಂದು ಕಾಂಗ್ರೆಸ್ ಮುಖಂಡ ಶಾಮ ಪುಜಾರಿ ಹೇಳಿದರು
ಅಥಣಿ ಪಟ್ಟಣದ ರಾಯಲ್ ಹಾಲ್ ಸಭಾ ಭವನದಲ್ಲಿ ನಡೆದ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯಿಂದ ನಡೆದ ಊಡುಗೊರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶೇಷ ಮಕ್ಕಳ ದೇವರ ಸೇವೆ ಎಂದು ತನ್ನ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಪೋಶಿಸುತ್ತಾ ಬಂದಿದ್ದು ಇವರ ಸೇವೆ ಇತರರಿಗೆ ಪ್ರೇರಣೆಯಾಗಲಿ
ಎಂದ ಅವರು ಈ ಸಂಸ್ಥೆಯಲ್ಲಿ ದೇವರ ಮಕ್ಕಳ ಆರೋಗ್ಯ ಪೋಷಣೆ ಆಗುತ್ತಿದೆ ಪ್ರತಿದಿನ ನೂರಾರು ಜನರಿಗೆ ಅಣ್ಣ ದಾಸೋಹ ಶಾಲಾ ಕಾಲೇಜುಗಳಲ್ಲಿ ಎಚ್ ಆಯ್ ವಿ ಏಡ್ಸ ರೋಗದ ಜಾಗೃತಿ ಮೂಡಿಸುವುದು ಬೀದಿ ಬದಿಗಳಲ್ಲಿ ಬಿದ್ದಿರುವ ಮಾನಸಿಕ ಅಸ್ವಸ್ಥರನ್ನು ಮನೆಗೆ ಕರೆದುಕೊಂಡು ಬಂದು ಸ್ವಚಿಗೊಳಿಸಿ ವೈಧ್ಯಕೀಯ ಸೌಲಭ್ಯ ನೀಡಿ ಆಶ್ರಯದಲ್ಲಿ ಇಟ್ಟುಕೊಂಡು ಆತ್ಮ ಸಮಾಲೋಚನೆ ಮಾಡಿ ಪುನಹ ಅವರವರ ಮನೆಗೆ ಹೋಗುವುದಕ್ಕಾಗಿ ಉತ್ತೆಜಿಸುವುದು ಜಾತ್ರಾ ಮಹೋತ್ಸವಗಳಲ್ಲಿ ಎಚ್ ಆಯ್ ವಿ ಹಾಗೂ ದೇವದಾಸಿ ಪದ್ದತಿಯ ನಿರ್ಮುಲನೆಯ ಬಗ್ಗೆ ಜಾಗೃತಿಗೊಳಿಸಿದ್ದಾರೆ ಅದರೆ ಈ ಸಂಸ್ಥೆ ಹದಿನೈದು ವರ್ಷಗಳು ಕಳೆದರು ಸ್ವಂತ ಸ್ಥಳ ಹಾಗೂ ಕಟ್ಟಡ ಇಲ್ಲದೆ ಇರುವುದು ವಿಪರ್ಯಾಸವಾಗಿದೆ ಸರ್ಕಾರ ಅಥವಾ ದಾನಿಗಳು ಇತ್ತ ಕಡೆ ಗಮನಸಿದ್ದಾರೆ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲು ನಿಜಪ್ಪ ದಂಪತಿಗಳು ಅನಿಯಾಗುತ್ತಾರೆ ಎಂದರು
ಈ ವೇಳೆ ಡಾ. ಶ್ರೀವಸ್ತ ಕುಲಕರ್ಣಿ ಮಾತನಾಡಿ ಜಗತ್ತಿನಲ್ಲಿ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಸೊಂಕು ಎಂದರೆ ಎಚ್ ಆಯ್ ವಿ ಏಡ್ಸ ಅತ್ಯಂತ ವಿನಾಶಕಾರಿಕ ರೊಗಗಳಲ್ಲಿ ಇದು ಒಂದು ಸೊಂಕಿತರನ್ನು ಕೀಳರಿಮೆಯಿಂದ ಕಾನಬಾರದು ಅವರಿಗೆ ಬೆಂಬಲ ನೀಡುವ ಮೂಲಕ ಅವರು ಅನುಭವಿಸುತ್ತಿರುವ ತಾರತಮ್ಯವನ್ನು ತೊಡೆದು ಹಾಕಬೇಕಾಗಿದೆ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ಯಾವು ತೊಡಗಬಾರದು ಎಡ್ಸ ರೋಗಗಳು ಒಂಟಿಯಲ್ಲ ಅವರೊಂದಿಗೆ ನಾವೆಲ್ಲರು ಇದ್ದೆವೆ ಎಂದು ಎಂಬ ಬಾವನೆ ಮೂಡಿಸಬೇಕಾಗಿದೆ ಈ ಸೊಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಏಡ್ಸ ಬಗ್ಗೆ ಭಯ ಬೇಡ ಜಾಗೃತಿ ಇರಲಿ ಎಂದರು.
ಈ ಸಂದರ್ಭದಲ್ಲಿ ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಮಾತನಾಡಿ ಅಸುರಕ್ಷಿತ ಲೆಂಗಿಕತೆ ಚುಚ್ಚು ಮದ್ದುಗಳ ಮರು ಬಳಕೆ ಸೊಂಕಿತ ಗರ್ಭಿಣಿಯರ ಮಕ್ಕಳಿಗೆ ಏಡ್ಸ ಬರಲು ಪ್ರಮುಖ ಕಾರಣ ತಾವು ಸೊಂಕಿಗೆ ಒಳಗಾಗುವದರ ಜೊತೆಗೆ ಸೊಂಕು ಹೊರಡಲು ಕಾರಣರಾಗುತ್ತಾರೆ ಎಂದರು.
ಕೃಪ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಸಂಸ್ಥಾಕ ಅಧ್ಯಕ್ಷ ನಿಜಪ್ಪ ಹಿರೇಮನಿ, ಸಂಸ್ಥೆಯ ಅಧ್ಯಕ್ಷ ಸಂಗೀತಾ ಹಿರೇಮನಿ,
ಡಾ.ಬಿ ಎಸ್ ಕಾಂಬಳೆ,ಡಾ.ಸಂಗಮೇಶ ಮಮದಾಪೂರ,ಪ್ರಾಚಾರ್ಯ ಜಗದೀಶ ಹವಾಲ್ದಾರ, ಶ್ರೀಮಂತ ಸೋನಕರ,ಗುರು ಮಿರಜಿ,ಪ್ರಕಾಶ ಲೊಣಾರೆ,ಸಾಮಸನ್,ರಾಜೇಂದ್ರ ಐಹೊಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು