ಹುಬ್ಬಳ್ಳಿ:
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮುಂದುವರೆದಿದ್ದು, ಬಡ್ಡಿ ಕಿರುಕುಳದಿಂದಾಗಿ ವ್ಯಕ್ತಿಯೋರ್ವ ಡೆತ್ ನೋಟ್ ಬರೆದಿಟ್ಟು ನಗರದ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ನಗರದ ಉಣಕಲ್ ನಿವಾಸಿ ಶಿವಾನಂದ ಕಳ್ಳಿಮನಿ (36) ಎಂಬಾತನೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಹಲವು ತಿಂಗಳ ಹಿಂದೆ ಕಾರ್ತಿಕ್ ಎಂಬುವವರ ಬಳಿ ನಾಲ್ಕು ಲಕ್ಷ ರೂ. ಸಾಲ ಪಡೆದು, ನಾಲ್ಕು ಲಕ್ಷಕ್ಕೆ ಈಗಾಗಲೇ ನಾಲ್ಕು ಲಕ್ಷ ರೂ. ಬಡ್ಡಿಯನ್ನು ಶಿವಾನಂದ ತುಂಬಿದ್ದ ನಿರಂತರ ಬಡ್ಡಿ ಕಿರುಕುಳದಿಂದಾಗಿ ಶಿವಾನಂದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ದೇಹವನ್ನು ನಗರದ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಡ್ಡಿ ಕಿರುಕುಳಕ್ಕೆ ಶಿವಾನಂದ ಆತ್ಮಹತ್ಯೆಗೆ ಶರಣಾಗಿದ್ದು, ಕಿಮ್ಸ್ ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
