ಬೆಂಗಳೂರು : 100ಕ್ಕೂ ಹೆಚ್ಚು ಶಾಲಾ ವಾಹನ ಸೀಜ್

ಬೆಂಗಳೂರು

    ಬೆಳ್ಳಂಬೆಳಗ್ಗೆ ಖಾಸಗಿ ಶಾಲಾ, ಕಾಲೇಜು ವಾಹನಗಳಿಗೆ ಆರ್​​ಟಿಓ ಅಧಿಕಾರಿಗಳು   ಬಿಸಿಮುಟ್ಟಿಸಿದ್ದಾರೆ. ನಿಯಮ ಪಾಲಿಸದ ನೂರಕ್ಕೂ ಹೆಚ್ಚು ಶಾಲಾ, ಕಾಲೇಜು ವಾಹನಗಳನ್ನು ಆರ್​ಟಿಓ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚಾಲಕರು ಮಕ್ಕಳನ್ನು ಕುರಿಗಳಂತೆ ಬೇಕಾಬಿಟ್ಟಿಯಾಗಿ ಓಮ್ನಿ ವಾಹನಗಳಲ್ಲಿ, ಕರೆದುಕೊಂಡು ಹೋಗುತ್ತಿದ್ದರು. ಎಫ್ಸಿ ರಿನಿವಲ್, ಪರ್ಮಿಟ್ ಇಲ್ಲದ, ಟ್ಯಾಕ್ಸ್ ಕಟ್ಟದ, ಚಾಲಕರ ಡಿ‌ಎಲ್ ನವೀಕರಣ ಇಲ್ಲದ, ಇನ್ಸುರೆನ್ಸ್ ನವೀಕರಣ ಆಗದ ವಾಹನಗಳನ್ನು ಸೀಜ್​ ಮಾಡಿದ್ದಾರೆ.

ಶಾಲೆಗಳು ಪಾಲಿಸಬೇಕಾದ ನಿಯಮಗಳು

  1. ಶಾಲಾ ವಾಹನಗಳು ಶಾಲೆ ಹೆಸರಿನಲ್ಲೇ ನೋಂದಣಿ ಆಗಿರಬೇಕು.
  2. ಶಾಲಾ-ಕಾಲೇಜು ವಾಹನಗಳ ಮೇಲೆ ಶಾಲೆ ಹೆಸರು ಮತ್ತು ವಿಳಾಸ, ದೂರವಾಣಿ ಸಂಖ್ಯೆ ಇರಬೇಕು.
  3. ವಾಹನದೊಳಗೆ ಸಿಸಿ ಕ್ಯಾಮರಾ, ಫ್ಯಾನಿಕ್ ಬಟನ್, ಫಸ್ಟ್ ಏಡ್ ಬಾಕ್ಸ್, ಫೈರ್ ಎಸ್ಟಿಂಗ್ ವಿಷರ್ ಇರಬೇಕು.

ಈ ಯಾವ ನಿಯಮಗಳನ್ನೂ ಕೂಡ ಪಾಲನೆಯಾಗದ ಹಿನ್ನೆಲೆಯಲ್ಲಿ ಶಾಲಾ ವಾಹನಗಳನ್ನು ಜಪ್ತಿ ಮಾಡಲಾಗಿದೆ.

Recent Articles

spot_img

Related Stories

Share via
Copy link