ಅಮೃತಸರ:
ಪಂಜಾಬ್‌ನ ಪಠಾಣ್‌ಕೋಟ್‌ನ ಅಂತರಾಷ್ಟ್ರೀಯ ಗಡಿಯಲ್ಲಿ ಬುಧವಾರ ಮುಂಜಾನೆ ಬಿಎಸ್‌ಎಫ್ ಪಡೆಗಳು ಪಾಕಿಸ್ತಾನಿ ಒಳನುಸುಳುಕೋರನನ್ನು ಗುಂಡಿಕ್ಕಿ ಕೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಂತಾರಾಷ್ಟ್ರೀಯ ಗಡಿಯ ಔಟ್ ಪೋಸ್ಟ್ ತಶ್ಪತನ್ ಪ್ರದೇಶದಲ್ಲಿ ಯಾರೋ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಡಿ ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ
ಬಿಎಸ್ ಎಫ್ ಪಡೆಗಳ ಪ್ರತಿರೋಧದ ನಡುವೆಯೂ ನುಸುಳುಕೋರ ದೇಶದ ಗಡಿಯೊಳಗೆ ಒಳ ನುಗ್ಗಿದ್ದಾನೆ. ಬಳಿಕ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು,ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರಾಶ್ರಿತರು-ಒಳನುಸುಳುಕೋರರ ನಡುವೆ ವ್ಯತ್ಯಾಸ ಗ್ರಹಿಸಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತಿಲ್ಲ; ಮೋದಿ ಲೇವಡಿ
ಘಟನೆಯ ಬಗ್ಗೆ ಪಾಕಿಸ್ತಾನ ರೇಂಜರ್‌ಗಳೊಂದಿಗೆ ತೀವ್ರ ಪ್ರತಿಭಟನೆಯನ್ನು ದಾಖಲಿಸಲಾಗುವುದು ಎಂದು ಬಿಎಸ್‌ಎಫ್, ಜಮ್ಮು ಗಡಿರೇಖೆಯ ವಕ್ತಾರರು ಹೇಳಿದ್ದಾರೆ. ಪಂಜಾಬ್‌ನಲ್ಲಿ 553ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಂತೆ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ BSF ಸಿಬ್ಬಂದಿ ಹಗಲಿರುಳು ದೇಶ ಕಾಯುತ್ತಿದ್ದಾರೆ.
