ದ್ವಿತೀಯ ಪಿಯು ಗಣಿತ ಪರೀಕ್ಷೆಗೆ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು

ಬೆಂಗಳೂರು

   ಸೋಮವಾರ ನಡೆದ ದ್ವಿತೀಯ ಪಿಯುಸಿ ಗಣಿತ ಪರೀಕ್ಷೆಗೆ ಕರ್ನಾಟಕದಾದ್ಯಂತ 12,533 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗಿದ ಅಥವಾ ದುಷ್ಕೃತ್ಯ ಎಸಗಿದ ಪ್ರಕರಣಗಳು ವರದಿಯಾಗಿಲ್ಲ. 2024 ರ ಪರೀಕ್ಷೆಗಳಿಂದ ಜಾರಿಗೆ ತರಲಾದ ಪರೀಕ್ಷೆಗಳ ವೆಬ್ ಸ್ಟ್ರೀಮಿಂ ಹಾಗೂ ಇತರ ಕಟ್ಟುನಿಟ್ಟಿನ ಕ್ರಮಗಳು ಅಕ್ರಮವನ್ನು ತಟೆಗಟ್ಟುವಲ್ಲಿ ನೆರವಾಗಿವೆ ಎಂದು ಅಧಿಕಾರಿಗಳು ಅಬಿಪ್ರಾಯಪಟ್ಟಿದ್ದಾರೆ.

   ಮೂರು ಪರೀಕ್ಷೆಗಳ ಆಯ್ಕೆ ಇರುವುದರಿಂದ ಗೈರುಹಾಜರಾದವರ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯ ಬಗ್ಗೆ ವಿಶ್ವಾಸ ಹೊಂದಿಲ್ಲದಿದ್ದರೆ ಇನ್ನೂ ಎರಡು ಪರೀಕ್ಷೆಗಳಿಗೆ ಹಾಜರಾಗಲು ಅವಕಾಶವಿರುವುದರಿಂದ, ಅವರು ಪರೀಕ್ಷೆಗಳಿಗೆ ಗೈರಾಗುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. 

   ಬೆಂಗಳೂರು ದಕ್ಷಿಣದಿಂದ ಅತಿ ಹೆಚ್ಚು ವಿದ್ಯಾರ್ಥಿಗಳು (1,510) ಗೈರುಹಾಜರಾಗಿದ್ದು, ರಾಯಚೂರು ಜಿಲ್ಲೆಯಲ್ಲಿ 1,058 ಮತ್ತು ವಿಜಯಪುರ 1,010 ಮಂದಿ ಗೈರಾಗಿದ್ದರು. ಬೆಂಗಳೂರು ಗ್ರಾಮಾಂತರದಲ್ಲಿ 79, ಚಾಮರಾಜನಗರದಲ್ಲಿ 80 ಮತ್ತು ಹಾಸನದಲ್ಲಿ119 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದರು.

Recent Articles

spot_img

Related Stories

Share via
Copy link