ಬೆಂಗಳೂರು
ಸಾಮಾಜಿಕ ನ್ಯಾಯಕ್ಕಾಗಿ ಮುವ್ವತ್ತು ವರ್ಷಗಳ ಒಳಮೀಸಲಾತಿ ಹೋರಾಟಕ್ಕೆ ಮತ್ತು ಸುಪ್ರೀಂ ಕೋರ್ಟ್ ತೀರ್ಪಿಗೆ ಮನ್ನಣೆ ನೀಡಿ ಸಚಿವ ಸಂಪುಟದಲ್ಲಿ ನಿರ್ಧರಿಸಿ ನ್ಯಾ.ನಾಗಮೋಹನ್ ದಾನ್ ಎಕಸದಸ್ಯ ಆಯೋಗದಿಂದ ಮಧ್ಯಂತರ ವರದಿ ತರಿಸಿಕೊಂಡು ಮಾದಿಗ ಮತ್ತು ಮಾದಿಗ ಸಂಬಂಧಿತ ಉಪಜಾತಿಗಳಿಗೆ 6% ಒಳಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕು. ಒಳಮೀಸಲಾತಿ ಜಾರಿಯಾಗುವವರೆಗೆ ಯಾವುದೇ ಕಾರಣಕ್ಕೂ ಎಸ್ಟಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬಾರದು ಮತ್ತು ಯಾವುದೇ ಹೊಸ ಅಧಿಸೂಚನೆ ಅಥವಾ ಮುಂಬಡ್ತಿ ಆದೇಶ ಹೊರಡಿಸಬಾರದು.
ಭಾರತೀಯ ಯೋಜನಾ ಆಯೋಗದ (Planning Commission Of India) ನಿಯಮಗಳ ಅನುಸಾರದೇ SCSP/TSP ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಯಾವುದೇ ಕಾರಣಕ್ಕೂ SCSP/TSP ನಿಧಿಯನ್ನು ಗ್ಯಾರಂಟಿ ಯೋಜನೆ ಅಥವಾ ಬೇರೆ ಯಾವುದೇ ಉದ್ದೇಶಗಳಿಗಾಗಿ ಬಳಸಬಾರದು. ಮಾದಿಗ ಸಮುದಾಯದ ಮೇಲೆ ರಾಜ್ಯದಾದ್ಯಂತ ನಡೆಯುತ್ತಿರುವ ನಿರಂತರ ದೌರ್ಜನ್ಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಶಿಕ್ಷಿಸುವ ಮತ್ತು ಅಂತಹ ಘಟನೆಗಳು ಮತ್ತೆ ಮರುಕಳಿಸದಂತೆ ತಡೆಹಿಡಿಯಲು ವಿಶೇಷ ಕಾನೂನು ಪ್ರಾಧಿಕಾರವನ್ನು ರಚಿಸಬೇಕು.
ಪ್ರತಿಭಟನೆಯಲ್ಲಿ ಸತ್ಯಾಗ್ರಹಕ್ಕೆ ಯಾದಗಿರಿ ಜಿಲ್ಲೆಯಿಂದ ಆಗಮಿಸಿದ್ದ ನಾಯಕರು ಗಣೇಶ್ ದುಪ್ಪಲ್ಲಿ ರಾಜ್ಯ ಉಪಾಧ್ಯಕ್ಷರು, ಕಾಶಪ್ಪ ಮಾದಿಗ ಹೆಗ್ಗಣಗೇರ ಜಿಲ್ಲಾಧ್ಯಕ್ಷರು ಯಾದಗಿರಿ ಜಿಲ್ಲೆ, ರವಿ, ಚಂದ್ರು ಮುಂಡರಗಿ, ರಾಜು ಕಡೆಚೂರ್, ತಿಪ್ಪಣ್ಣ ಗೊಂಡೆನುರ್, ಬಸು ಸುರಪುರ, ಷಣ್ಮುಖ ಸೈದಾಪುರ, ಮಲ್ಲಪ್ಪ ಕೂದಲೂರ್, ಸೈದಪ್ಪ ಶಿವನೂರು, ಬಾಲಪ್ಪ ತಾತನಗೇರಿ, ಹನುಮಂತ ಕೂದಲೂರು, ರಮೇಶ , ಮಲ್ಲಪ್ಪ ರಾಮಸಂದ್ರ
ಕೊಪ್ಪಳ ಜಿಲ್ಲೆಯಿಂದ ಇಂದು ಧರಣಿ ಸತ್ಯಾಗ್ರಹಕ್ಕೆ ಆಗಮಿಸಿದ್ದ ನಾಯಕರು ಕೊಪ್ಪಳ ಜಿಲ್ಲಾಧ್ಯಕ್ಷ ಸುಭಾಷ ಕೆ, ಜಿಲ್ಲಾ ಕಾರ್ಯಾಧ್ಯಕ್ಷ ಗಂಗಣ್ಣ ಸಿದ್ದಾಪುರ, ಮರಿಯಪ್ಪ ಲಕ್ಕುಂಪುರ, ರಾಮಣ್ಣ ಇಂಗಳದಾಳ, ಮೂರ್ತಿ ಸಂಗಾಪುರ, ಮಹಾದೇವ ಬಡಿಗೇರ, ಶಿವಣ್ಣ ಇಲಿಗನೂರು, ದುರುಗೇಶ್ ಕನಕಗಿರಿ.
