ನವದೆಹಲಿ:
‘ಇಂಡಿಯಾಸ್ ಗಾಟ್ ಲ್ಯಾಟೆಂಟ್ ‘ ಆನ್‌ಲೈನ್ ಶೋ ನಲ್ಲಿ ಅಶ್ಲೀಲ ಹೇಳಿಕೆ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿದ್ದ ಯೂಟ್ಯೂಬ್‌ಗಳಾದ ರಣವೀರ್ ಅಲ್ಲಾಬಾಡಿಯಾ ಮತ್ತು ಅಪೂರ್ವ ಮುಖಿಜಾ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕ್ಷಮೆಯಾಚಿಸಿದ್ದಾರೆ.
ಗುರುವಾರ NCW ಮುಂದೆ ರಣವೀರ್ ಅಲ್ಲಾಬಾಡಿಯಾ, ಅಪೂರ್ವ ಮುಖಿಜಾ ಮತ್ತು ಶೋ ನಿರ್ಮಾಪಕರಾದ ಸೌರಭ್ ಬೋತ್ರಾ, ತುಷಾರ್ ಪೂಜಾರಿ ವಿಚಾರಣೆ ಹಾಜರಾಗಿದ್ದು, ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ NCW ಮುಖ್ಯಸ್ಥೆ ವಿಜಯ ರಾಹತ್ಕರ್, ಅನುಚಿತ ಭಾಷೆಯ ಬಳಕೆಯನ್ನು ಸಹಿಸುವುದಿಲ್ಲ. ಅಂತಹ ಟೀಕೆಗಳು ಕೇವಲ ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ಸಾಮಾಜಿಕ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ನೋಟಿಸ್ ನೀಡಲಾಗಿತ್ತು. ಆಯೋಗದ ಮುಂದೆ ಹಾಜರಾದ ಅವರು ತಮ್ಮ ಹೇಳಿಕೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾತನಾಡಬಾರದಿತ್ತು ಎಂದು ಹೇಳಿದ್ದು ಲಿಖಿತವಾಗಿ ಕ್ಷಮೆಯಾಚಿಸಿದ್ದಾರೆ ಎಂದು ಅವರು ತಿಳಿಸಿದರು.
ಅದರಲ್ಲೂ ಅಲ್ಲಾಬಾಡಿಯಾ ಭವಿಷ್ಯದಲ್ಲಿ ಹೆಚ್ಚು ಜಾಗರೂಕರಾಗಿರುವುದಾಗಿ NCW ಗೆ ಭರವಸೆ ನೀಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.”ಇಂತಹ ತಪ್ಪು ನಡೆದಿರುವುದು ಇದೇ ಮೊದಲು ಹಾಗೂ ಕೊನೆಯದು. ಇನ್ನು ಮುಂದೆ ನಾನು ಎಚ್ಚರಿಕೆಯಿಂದ ಯೋಚಿಸುತ್ತೇನೆ ಮತ್ತು ಮಹಿಳೆಯರ ಬಗ್ಗೆ ಗೌರವದಿಂದ ಮಾತನಾಡುತ್ತೇನೆ” ಎಂದು ಆಯೋಗದ ಹೇಳಿರುವುದಾಗಿ ತಿಳಿದುಬಂದಿದೆ.
ಬಿಯರ್ ಬೈಸೆಪ್ಸ್ ಸೇರಿದಂತೆ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನು ನಡೆಸುತ್ತಿರುವ ಅಲ್ಲಾಬಾಡಿಯಾ, ರೈನಾ ನಡೆಸಿಕೊಡುವ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಪೋಷಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ‘ನಿನ್ನ ಹೆತ್ತವರು ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡುತ್ತೀಯಾ ಅಥವಾ ಒಮ್ಮೆ ಅದರಲ್ಲಿ ಭಾಗವಹಿಸಿ ಅದನ್ನು ಶಾಶ್ವತವಾಗಿ ನಿಲ್ಲಿಸುತ್ತೀಯಾ?’ ಎಂದು ರಣವೀರ್ ಅಲ್ಲಾಬಾಡಿಯಾ ಸ್ಪರ್ಧಿಗೆ ಕೇಳಿದ್ದನು. ಅಲ್ಲದೆ ಈ ಕಾರ್ಯಕ್ರಮದಲ್ಲಿ ತಮ್ಮ ಖಾಸಗಿ ಭಾಗದ ಉದ್ದ ಎಂಬ ಅಸಂಬದ್ಧ ಪ್ರಶ್ನೆಗಳನ್ನು ಕೇಳುವ ಮೂಲಕ ಜೋಕ್ ಮಾಡಿದರು.
ನಂತರ ಅಲ್ಲಾಬಾಡಿಯಾ ವಿರುದ್ಧ ಅನೇಕ ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದ. ಆತನ ಮನಸ್ಥಿತಿಯನ್ನು ಕೊಳಕು ಎಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿತ್ತು. ಆದರೆ ಬಂಧನದಿಂದ ರಕ್ಷಿಸಿತ್ತು.
