ನಯನತಾರಾಗೆ ದುಬಾರಿ ಆದ 3 ಸೆಕೆಂಡ್ ವಿಡಿಯೋ…..!

ತಮಿಳುನಾಡು :

    ನಟಿ ನಯನತಾರಾ ಅವರಿಗೆ ಸಂಕಷ್ಟ ಹೆಚ್ಚಿದೆ. ‘ನಾನುಂ ರೌಡಿ ದಾನ್’ ಚಿತ್ರದ ಮೂರು ಸೆಕೆಂಡ್ ವಿಡಿಯೋನ ಒಪ್ಪಿಗೆ ಇಲ್ಲದೆ ಅವರು ಬಳಕೆ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಧನುಷ್   ಅವರ ನಿರ್ಮಾಣ ಸಂಸ್ಥೆ ‘ವುಂಗಬಾ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಪರಿಹಾರ ಕೋರಿ ಕೇಸ್ ಹಾಕಿದೆ. ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ. ಒಪ್ಪಿಗೆ ಇಲ್ಲದೆ ಅವರು ಬಳಕೆ ಮಾಡಿದ ಮೂರು ಸೆಕೆಂಡ್ ವಿಡಿಯೋ ಈಗ ಸಾಕಷ್ಟು ದುಬಾರಿ ಆಗಿದೆ. 

   ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರ ವಿರುದ್ಧವೂ ಕೇಸ್ ಹಾಕಲಾಗಿದೆ. ‘ನಾನುಂ ರೌಡಿ ದಾನ್ ಚಿತ್ರದ ತೆರೆ ಹಿಂದಿನ ದೃಶ್ಯಗಳನ್ನು ನಯನಾತಾರಾ ಹಾಗೂ ವಿಘ್ನೇಶ್ ಅವರು ನೆಟ್​ಫ್ಲಿಕ್ಸ್ ಡಾಕ್ಯುಮೆಂಟರಿ ‘ನಯನತಾರಾ: ಬಿಯಾಂಡ್ ದಿ ಫೇರ್​ಸ್ಟೈಲ್’ನಲ್ಲಿ ಬಳಕೆ ಮಾಡಿದ್ದಾರೆ. ಇದಕ್ಕೆ ಅವರು ಒಪ್ಪಿಗೆ ಪಡೆದಿಲ್ಲ’ ಎಂದು ಅರ್ಜಿಯಲ್ಲಿ ಬರೆಯಲಾಗಿದೆ.

   ‘ನಾನುಂ ರೌಡಿ ದಾನ್ ಚಿತ್ರದ ನಿರ್ದೇಶಕ ವಿಘ್ನೇಶ್ ಶಿವನ್ ಅವರು ನಯನತಾರಾ ಮೇಲೆ ಮಾತ್ರ ಗಮನ ಹರಿಸಿದ್ದರು. ಹೀಗಾಗಿ, ಚಿತ್ರದ ಇತರ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಅವರು ನಿರ್ಲಕ್ಷಿಸಿದರು. ನಯನಾತಾರಾ ಮಾತ್ರ ಒಳ್ಳೆಯ ರೀತಿಯಲ್ಲಿ ನಟಿಸುತ್ತಾರೆ ಎಂದು ಹೇಳುತ್ತಿದ್ದರು. ಅವರ ಗಮನ ಸಂಪೂರ್ಣವಾಗಿ ನಯನಾತಾರಾ ಮೇಲೆ ಇತ್ತೇ ಹೊರತು, ಪ್ರಾಜೆಕ್ಟ್ ಮೇಲೆ ಇರಲಿಲ್ಲ’ ಎಂದು ದೂರಲಾಗಿದೆ.

Recent Articles

spot_img

Related Stories

Share via
Copy link