ಬೆಂಗಳೂರು
ಕೆಎಸ್ಆರ್ಟಿಸಿ , ಬಿಎಂಟಿಸಿ , ಕೆಕೆಆರ್ಟಿಸಿ ಮತ್ತು ಎನ್ಡಬ್ಲೂಕೆಆರ್ಸಿ ನಾಲ್ಕೂ ನಿಗಮಗಳು ಕರ್ನಾಟಕದ ಜನರ ಜೀವನಾಡಿಯಾಗಿವೆ. ನಾಲ್ಕೂ ನಿಗಮಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಿದ್ದಾರೆ. ನಾಲ್ಕೂ ಸಾರಿಗೆ ನಿಗಮಗಳಿಗೆ ಹರಿದು ಬರುತ್ತಿರುವ ಆದಾಯವೆಷ್ಟು? ನಿಗಮಗಳು ಲಾಭದಲ್ಲಿಯವೆಯೇ ಅಥವಾ ನಷ್ಟದಲ್ಲಿವೆಯಾ? ಎಂಬ ಪ್ರಶ್ನೆಗಳು ಜನರಲ್ಲಿವೆ. ಇದೇ ಪ್ರಶ್ನೆಗಳನ್ನು ವಿಧಾನ ಪರಿಷತ್ನಲ್ಲಿ ಎಂಎಲ್ಸಿ ಕೇಶವ ಪ್ರಸಾದ್ ಕೇಳಿದ್ದಾರೆ.
ಎಂಎಲ್ಸಿ ಕೇಶವ ಪ್ರಸಾದ್ ಪ್ರಶ್ನೆಗೆ, “ಕಳೆದ 5 ವರ್ಷಗಳಲ್ಲಿ ಕೆಎಸ್ಆರ್ಟಿಸಿಗೆ 1500 ಕೋಟಿ ರೂ., ಬಿಎಂಟಿಸಿಗೆ 1544 ಕೋಟಿ ರೂ. ಕೆಕೆಆರ್ಟಿಸಿಗೆ 777 ಕೋಟಿ ರೂ. ಎನ್ಡಬ್ಲೂಕೆಆರ್ಟಿಸಿಗೆ 1386 ಕೋಟಿ ರೂ. ನಷ್ಟವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿದ್ದಾರೆ.
ಸರ್ಕಾರದಿಂದ ಶಕ್ತಿ ಯೋಜನೆಯ ಪೂರ್ತಿ ಮೊತ್ತ ಪಡೆಯಬೇಕಿದೆ. ಪ್ರಪಂಚದ ಯಾವುದೇ ಭಾಗದಲ್ಲಿಯೂ ಸಾರಿಗೆ ನಿಗಮ ನಷ್ಟದಲ್ಲಿದೆ. ಶೇ 40 ರಷ್ಟು ಬಸ್ಗಳು ನಷ್ಟದಲ್ಲೇ ಓಡುತ್ತಿವೆ. ಶೇ 30ರಷ್ಟು ಬಸ್ಗಳು ಯಾವುದೇ ಲಾಭ-ನಷ್ಟ ಇಲ್ಲದೆ ಓಡುತ್ತಿವೆ. ಶೇ 30ರಷ್ಟು ಬಸ್ಗಳು ಮಾತ್ರ ಲಾಭದಲ್ಲಿವೆ. ಸಾರಿಗೆ ಇಲಾಖೆಯಲ್ಲಿ ಪ್ರತಿದಿನ 9.45 ಕೋಟಿ ರೂ. ಖರ್ಚು ಇದೆ. ಏನಾದರೂ ದೂರುಗಳಿದ್ದರೆ ತಿಳಿಸಿ ಸರಿಪಡಿಸೋಣ ಎಂದು ಪರಿಷತ್ಗೆ ಹೇಳಿದರು.
