ಅಮೆರಿಕ
ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಲೈನ್ಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ವಿಮಾನದಲ್ಲಿ ಆರು ಸಿಬ್ಬಂದಿ ಸೇರಿದಂತೆ 178 ಪ್ರಯಾಣಿಕರು ಇದ್ದರು. ಎಲ್ಲರೂ ಸುರಕ್ಷಿತರಾಗಿದ್ದು, 12 ಮಂದಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಲ್ಲಾಸ್ಗೆ ತೆರಳಬೇಕಿದ್ದ ಅಮೆರಿಕನ್ ಏರ್ಲೈನ್ಸ್ನಲ್ಲಿ ಡೆನ್ವರ್ ವಿಮಾನ ನಿಲ್ದಾಣದ ಸಿ28 ಗೇಟ್ ಪ್ರವೇಶಿಸುತ್ತಿದ್ದಂತೆಯೇ ಬೋಯಿಂಗ್ 737-800 ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಏರ್ಲೈನ್ಸ್ಗೆ ಬೆಂಕಿ ಹೊತ್ತಿಕೊಂಡಿರುವ ದೃಶ್ಯ ಹಾಗೂ ಸ್ಥಳಾಂತರಿಸುವ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
