ಲಂಡನ್:
ಇಂಗ್ಲೆಂಡ್ನಲ್ಲಿ 45 ವರ್ಷದ ಮಹಿಳೆ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದೆ. ಆಘಾತಕಾರಿ ಸಂಗತಿ ಎಂದರೆ ಅವಳ ಶವವನ್ನು ಆಕೆಯ ಸಾಕು ನಾಯಿಗಳು ಭಾಗಶಃ ತಿಂದಿದೆ ಎಂಬುದಾಗಿ ವರದಿಯಾಗಿದೆ. ಹಾರ್ಟ್ ಎಂದು ಗುರುತಿಸಲ್ಪಟ್ಟ ಈ ಮಹಿಳೆ, ಒಂದು ತಿಂಗಳಿನಿಂದ ಮನೆಯ ಬಳಿ ಕಾಣಿಸದ ಹಿನ್ನೆಲೆಯಲ್ಲಿ ಅದನ್ನು ಗಮನಿಸಿದ ನೆರೆಹೊರೆಯವರು ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರಿಗೆ ಲಿವಿಂಗ್ ರೂಂನಲ್ಲಿ ಆಕೆಯ ಶವ ಪತ್ತೆಯಾಗಿದೆ. ಆದರೆ ದುರಾದೃಷ್ಟವಶಾತ್ ಆಕೆಯ ಶವವನ್ನು ನಾಯಿಗಳು ಅರ್ಧ ತಿಂದಿದ್ದವು. ಘಟನಾ ಸ್ಥಳದಲ್ಲಿ ಒಂದು ನಾಯಿ ಸತ್ತಿರುವುದು ಕಂಡುಬಂದರೆ, ಬದುಕುಳಿದ ಇನ್ನೊಂದು ನಾಯಿ ದುಃಖದಲ್ಲಿರುವುದು ಕಂಡುಬಂದಿದೆ. ಇದೀಗ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ಹಲವು ದಿನಗಳಿಂದ ಹಾರ್ಟ್ ಆಕೆಯ ಮನೆಯ ಬಳಿ ಕಾಣಿಸಲಿಲ್ಲ. ಅಲ್ಲದೇ ಅವಳ ನಾಯಿಗಳು ನಿರಂತರವಾಗಿ ಮನೆಯೊಳಗೆ ಬೊಗಳುವುದನ್ನು ಕೇಳಿದ ನಂತರ ನೆರೆಹೊರೆಯವರು ಆತಂಕಗೊಂಡರು. ಸ್ಪೇರ್ ಕೀ ಹೊಂದಿದ್ದ ನೆರೆಹೊರೆಯ ಲೋರೈನ್ ಆಕೆಯ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾಳೆ. ಆದರೆ ಇನ್ನೊಂದು ಕೀಲಿ ಇನ್ನೂ ಬೀಗದಲ್ಲಿದ್ದ ಕಾರಣ ಆಕೆಗೆ ಬೀಗ ತೆಗೆದು ಮನೆಯೊಳಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಹಾರ್ಟ್ ದೇಹವನ್ನು ಪತ್ತೆ ಮಾಡಿದ್ದಾರೆ. ಆದರೆ ಅದನ್ನು ಅವಳ ನಾಯಿಗಳು ಭಾಗಶಃ ತಿಂದು ಹಾಕಿದ್ದವು.
ಹಾರ್ಟ್ ಹಲವು ದಿನಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಳು ಮತ್ತು ಇತ್ತೀಚೆಗೆ ದೀರ್ಘಕಾಲ ಸಂಬಂಧದಲ್ಲಿದ್ದ ಗೆಳೆಯನೊಂದಿಗೆ ಬ್ರೇಕಪ್ ಆಗಿದ್ದ ಕಾರಣ ಅದರಿಂದ ಬೇಸರಗೊಂಡಿದ್ದಳು ಎಂದು ನೆರೆಮನೆಯ ಲೋರೈನ್ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಹಾರ್ಟ್ಗೆ ಒಬ್ಬ ಮಗನಿದ್ದು ಆತ ತಾಯಿಯ ನಿಧನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾನೆ.
ಹಾರ್ಟ್ ನಾಯಿ ಪ್ರೇಮಿಯಾಗಿದ್ದು, ಯಾವಾಗಲೂ ನಾಯಿಗಳೇ ತನ್ನ ಜೀವನ ಎಂದು ಹೇಳುತ್ತಿದ್ದಳು. 2022ರಲ್ಲಿ ಫ್ರಾಂಕಿ ಎಂಬ ಡಚ್ಶಂಡ್ ಅನ್ನು ಮತ್ತು 2023ರಲ್ಲಿ ಮಿಲ್ಲಿಯನ್ನು ದತ್ತು ತೆಗೆದುಕೊಳ್ಳುವ ಮೊದಲು ಇತರ ಕೆಲವು ನಾಯಿಗಳನ್ನು ಹೊಂದಿದ್ದಳು.
ಪೊಲೀಸರು ಅವಳ ಸಾವು ಸಹಜವಾದ್ದು, ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ದೃಢಪಡಿಸಿದ್ದಾರೆ. ಹಾರ್ಟ್ ಆರೋಗ್ಯ ಸಮಸ್ಯೆಗಳು ಮತ್ತು ದೀರ್ಘ ಕಾಲದ ನೋವನ್ನು ಅನುಭವಿಸುತ್ತಿದ್ದಳು. ಇದರಿಂದ ಅವಳಿಗೆ ದೈನಂದಿನ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಆಕೆ ಅಲ್ಲೇ ಸಾವನಪ್ಪಿದ್ದಾಳೆ ಎನ್ನಲಾಗಿದೆ. ಅವಳು ಕಳೆದ ಒಂದು ದಶಕದಿಂದ ಅದೇ ಮನೆಯಲ್ಲಿ ವಾಸವಾಗಿದ್ದಳು ಮತ್ತು ಅವಳು ಯಾವುದೇ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಫ್ಲ್ಯಾಟ್ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ರೊಮೇನಿಯಾದ ಬುಚಾರೆಸ್ಟ್ ಎಂಬಲ್ಲಿನ 34 ವರ್ಷದ ಆಡ್ರಿಯಾನ ನಿಯಾಗೊ ಎಂಬ ಮಹಿಳೆ ಯಾವುದೊ ಕಾರಣದಿಂದ ಸಾವನ್ನಪ್ಪಿದ ಬಳಿಕ ಆಕೆಯ ಎರಡು ಸಾಕು ನಾಯಿಗಳು ಆಕೆಯ ಮೃತದೇಹವನ್ನು ಅರೆಬರೆ ತಿಂದು ಹಾಕಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿತ್ತು. ಆಡ್ರಿಯಾನ ಕಳೆದ ಕೆಲವು ದಿನಗಳಿಂದ ಯಾವುದೇ ಫೋನ್ ಕರೆಗಳಿಗೆ ಮತ್ತು ಮೆಸೇಜ್ಗಳಿಗೆ ಸ್ಪಂದಿಸುತ್ತಿರಲಿಲ್ಲ. ಇದರಿಂದ ಗಾಬರಿಗೊಂಡ ಆಕೆಯ ಮನೆಯವರು ಆಕೆ ವಾಸಿಸುತ್ತಿದ್ದ ಫ್ಲ್ಯಾಟ್ ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ದುರಂತ ಘಟನೆ ಬೆಳಕಿಗೆ ಬಂದಿತ್ತು.








