ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್, ವಿಲ್ಮೋರ್………!

ನವದೆಹಲಿ

    ಬರೋಬ್ಬರಿ 9 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ   ಸಿಲುಕಿಕೊಂಡಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್  ಮತ್ತು ಬುಚ್‌ ವಿಲ್ಮೋರ್‌ನ್ನು  ಅತ್ಯಂತ ಸುರಕ್ಷಿತರವಾಗಿ ಭೂಮಿಗೆ ಕರೆತರಲಾಗಿದೆ. ಸುನೀತಾ ವಿಲಿಯಮ್ಸ್, ಬುಚ್‌ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು ಹೊತ್ತಿದ್ದ ಸ್ಪೇಸ್ ಎಕ್ಸ್‌ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 8.35ಕ್ಕೆ 400 ಕಿ.ಮೀ ದೂರದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯತ್ತ ಪಯಣ ಆರಂಭಿಸಿತ್ತು. ನಿರಂತರ 17 ಗಂಟೆಗಳ ಪಯಣದ ಬಳಿಕ ಭಾರತೀಯ ಕಾಲಮಾನ, ಸರಿಯಾಗಿ ಇಂದು ನಸುಕಿನ 3.27ರ ಸಮಯಕ್ಕೆ ಅಮೆರಿಕದ ಫ್ಲೋರಿಡಾ ಸಾಗರದಲ್ಲಿ ಲ್ಯಾಂಡ್ ಆಗಿದೆ.

    ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದ 9 ತಿಂಗಳಿಂದ ಬೋಯಿಂಗ್ ಸ್ಟಾರ್‌ಲೈನರ್‌ ಎಂಬ ಬಾಹ್ಯಾಕಾಶ ನೌಕೆಯಲ್ಲಿ ಸಿಲುಕಿಕೊಂಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್‌ವಿಲ್ಮೋರ್‌ ಮತ್ತು ಇವರಿಬ್ಬರನ್ನು ಕರೆತರಲು ತೆರಳಿದ್ದ ನಾಸಾ ಗಗನಯಾತ್ರಿ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರು ಯಶಸ್ವಿಯಾಗಿ ಭೂಮಿಗೆ ಬಂದಿಳಿದಿದ್ದಾರೆ.

Recent Articles

spot_img

Related Stories

Share via
Copy link